Kantara 1 Vs KGF 1: 3 ದಿನಗಳಲ್ಲಿ 'ಕೆಜಿಎಫ್ ಚಾಪ್ಟರ್ 1' ಹಿಂದಿಕ್ಕಿದ 'ಕಾಂತಾರ ಚಾಪ್ಟರ್ 1'
ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಗ್ಲೋಬಲ್ ಲೆವೆಲ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ 125 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇಷ್ಟು ದೊಡ್ಡ ಬಜೆಟ್ ಸಿನಿಮಾಗೆ ಗ್ಲೋಬಲ್ ಕಲೆಕ್ಷನ್ ಸಿಗುತ್ತಾ? ನೂರೆಂಟು ಲೆಕ್ಕಚಾರ ಹಾಕಿದ್ದರು. ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಕೇವಲ ಮೂರು ದಿನಗಳಲ್ಲಿ ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ 250 ಕೋಟಿ ರೂಪಾಯಿ ಸಮೀಪಕ್ಕೆ ಬಂದಿದೆ. 2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಸಿನಿಮಾದ ಯಶಸ್ಸು 'ಕಾಂತಾರ ಚಾಪ್ಟರ್ 1' ಕೂಡ ಮುಂದುವರೆಸಿಕೊಂಡು ಮುನ್ನುಗ್ಗುತ್ತಿದೆ. ಕಳೆದ ಮೂರು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ, ಹಳೆಯ ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿದೆ.

ಈಗ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಯಶ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಬಾಕ್ಸಾಫೀಸ್ ದಾಖಲೆಯನ್ನು ಮುರಿದಿದೆ. ಅದೂ ಕೇವಲ ಮೂರು ದಿನಗಳಲ್ಲಿಯೇ ಈ ದಾಖಲೆಯನ್ನು ಮಾಡಿರೋದು ವಿಶೇಷ. ಹಾಗಿದ್ದರೆ, ಹೊಂಬಾಳೆ ನಿರ್ಮಿಸಿದ 'ಕೆಜಿಎಫ್ ಚಾಪ್ಟರ್ 1' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿತ್ತು? 'ಕಾಂತಾರ ಚಾಪ್ಟರ್ 1' 3 ದಿನಗಳಲ್ಲಿ ಎಷ್ಟು ಗಳಿಸಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಕಾಂತಾರ ಚಾಪ್ಟರ್ 1' ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 80 ಕೋಟಿ ರೂಪಾಯಿ ಕಲೆ ಹಾಕಿತ್ತು. ಅದೇ ಟ್ರೆಂಡ್ ವೀಕೆಂಡ್‌ನಲ್ಲೂ ಮುಂದುವರೆದಿದೆ. ಹೀಗಾಗಿ ಮೊದಲ ವಾರ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂಪಾಯಿ ಕಲೆ ಹಾಕಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ. ಭಾರತದ ಸೇರಿದಂತೆ ವಿದೇಶದಲ್ಲಿ ಕಲೆಕ್ಷನ್ ಉತ್ತಮವಾಗಿದ್ದು, ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ಹೊಸ ರೆಕಾರ್ಡ್ ಸೃಷ್ಟಿ ಮಾಡುವ ಸಾಧ್ಯತೆಯಿದೆ.
ಸದ್ಯ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಬಾಕ್ಸಾಫೀಸ್ ದಾಖಲೆಯನ್ನು ಉಡೀಸ್ ಮಾಡಿದೆ. ಅದೂ ಮೂರೇ ದಿನಗಳಲ್ಲಿ ಅನ್ನೋದು ವಿಶೇಷ. 'ಕೆಜಿಎಫ್ ಚಾಪ್ಟರ್ 1' ಸಿನಿಮಾ ಲೈಫ್ ಟೈಮ್ ಕಲೆಕ್ಷನ್ 228.58 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು.
ಆದರೆ, ಈ ದಾಖಲೆಯನ್ನು ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಕೇವಲ ಮೂರು ದಿನಗಳಲ್ಲಿ ಮುರಿದು ಹಾಕಿದೆ. ಗ್ಲೋಬಲ್ ಮಾರ್ಕೆಟ್‌ನಲ್ಲಿ ಈ ಸಿನಿಮಾ ಬರೋಬ್ಬರಿ 235.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಭಾರತದಲ್ಲಿ 163.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಕೆಜಿಎಫ್ 1 ದಾಖಲೆಯನ್ನು ಸರಿಗಟ್ಟಿದೆ. ಇದೊಂದೇ ಸಿನಿಮಾ ಇಲ್ಲ. ಎಲ್ಲಾ ಭಾಷೆಯಲ್ಲಿರುವ ದಾಖಲೆಯನ್ನು ಮುರಿಯತ್ತ ಗಮನ ಸೆಳೆಯುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ,'ಕಾಂತಾರ ಚಾಪ್ಟರ್ 1' ಮೂರು ದಿನಗಳ ಕಲೆಕ್ಷನ್ ಹೀಗಿದೆ.
ಭಾರತ - ₹163.1 ಕೋಟಿ (net)
ಭಾರತದ - ₹192.45 ಕೋಟಿ (gross)
ಓವರ್ ಸೀಸ್ - ₹42.6 ಕೋಟಿ (gross)
ವಿಶ್ವದಾದ್ಯಂತ - ₹235.05 ಕೋಟಿ (gross)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











