For Quick Alerts
  ALLOW NOTIFICATIONS  
  For Daily Alerts

  ಹಿಂದಿ, ತೆಲುಗಿನಲ್ಲಿ 'ಕಾಂತಾರ' ಟ್ರೈಲರ್: ಹೇಗಿದೆ ವೀವ್ಸ್-ಟ್ರೆಂಡ್?

  |

  ಇಂದು(ಅಕ್ಟೋಬರ್ 09) ಬೆಳಗ್ಗೆ 'ಕಾಂತಾರ' ಸಿನಿಮಾ ಹಿಂದಿ ಹಾಗೂ ತೆಲುಗು ವರ್ಷನ್ ಟ್ರೈಲರ್ ರಿಲೀಸ್ ಮಾಡಿದ ಹೊಂಬಾಳೆ ಫಿಲ್ಮ್ಸ್. ಕನ್ನಡದಲ್ಲಿ ಬ್ಲಾಕ್‌ ಬಸ್ಟರ್ ಆಗಿದ್ದ ಸಿನಿಮಾಗೆ ಬೇರೆ ಭಾಷೆಗಳಿಂದ ಭಾರೀ ಬೇಡಿಕೆ ಬಂದಿತ್ತು.

  ದಕ್ಷಿಣ ಭಾರತದಿಂದ ತೆಲುಗು, ತಮಿಳು, ಮಲಯಾಳಂ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಬಂದಿದ್ದರೆ. ಇತ್ತ ಬಾಲಿವುಡ್‌ನಲ್ಲೂ ಹಿಂದಿಗೆ ಡಬ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಿದೆ.

  ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹಿಡಿದು ನಿಲ್ಲಿಸೋರು ಯಾರು? 8ನೇ ದಿನದ ಲೆಕ್ಕಾಚಾರವೇನು?ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹಿಡಿದು ನಿಲ್ಲಿಸೋರು ಯಾರು? 8ನೇ ದಿನದ ಲೆಕ್ಕಾಚಾರವೇನು?

  ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ 'ಕಾಂತಾರ' ಬಗ್ಗೆನೇ ಚರ್ಚೆಯಾಗುತ್ತಿದೆ. ಬೇರೆ ಭಾಷೆಯಲ್ಲಿ ಸಿನಿಮಾ ನೋಡಬೇಕು ಅಂತ ಬಯಸಿದ್ದವರಿಗೆ ತೆಲುಗು ಹಾಗೂ ಹಿಂದಿಯಲ್ಲಿ ಯಾವಾಗ ರಿಲೀಸ್ ಆಗುತ್ತೆ ಅನ್ನೋದೂ ರಿವೀಲ್ ಆಗಿದೆ. ಹಾಗಿದ್ದರೆ, ಈ ಎರಡು ಭಾಷೆಗಲ್ಲಿ ಟ್ರೈಲರ್‌ಗೆ ರೆಸ್ಪಾನ್ಸ್ ಹೇಗಿದೆ? ಅಂತ ತಿಳಿಯಲು ಮುಂದೆ ಓದಿ.

  ಹಿಂದಿ-ತೆಲುಗಿನಲ್ಲಿ ಟ್ರೈಲರ್ ರಿಲೀಸ್

  ಹಿಂದಿ-ತೆಲುಗಿನಲ್ಲಿ ಟ್ರೈಲರ್ ರಿಲೀಸ್

  ಕನ್ನಡಕ್ಕೆ ಮತ್ತೊಂದು ಬ್ಲಾಕ್‌ಬಸ್ಟರ್ ಕೊಟ್ಟ ಸಿನಿಮಾ 'ಕಾಂತಾರ'. ಈ ಸಿನಿಮಾವೀಗ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಬೇರೆ ಬೇರೆ ಭಾಷೆಯಲ್ಲೂ ಫೇಮಸ್ ಆಗುತ್ತಿದೆ. ಸಬ್‌ಟೈಟಲ್ ಹಾಕಿ ಬೇರೆ ಬೇರೆ ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಮಾಡಲಾಗಿತ್ತು. ಆದರೆ, ಸಿನಿಮಾ ನೋಡಿದವರಿಗೆ ಸಬ್‌ಟೈಟಲ್‌ಗಿಂತ ಡಬ್ ಮಾಡಿ ರಿಲೀಸ್ ಮಾಡಿದ್ದರೆ ಒಳ್ಳೆಯದಿತ್ತು ಅನಿಸಿತ್ತು. ಹೀಗಾಗಿ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲೇ 'ಕಾಂತಾರ'ವನ್ನು ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದೆ ಬಂದಿದೆ.

  'ಕಾಂತಾರ' ಸ್ಯಾಟಲೈಟ್‌, ಓಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್: ಎಷ್ಟು ಕೋಟಿಗೆ ಮಾರಾಟ?'ಕಾಂತಾರ' ಸ್ಯಾಟಲೈಟ್‌, ಓಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್: ಎಷ್ಟು ಕೋಟಿಗೆ ಮಾರಾಟ?

  ಹಿಂದಿ ಟ್ರೈಲರ್ ರೆಸ್ಪಾನ್ಸ್ ಹೇಗಿದೆ?

  ಹಿಂದಿ ಟ್ರೈಲರ್ ರೆಸ್ಪಾನ್ಸ್ ಹೇಗಿದೆ?

  ಬೆಳಗ್ಗೆ 9.10ಕ್ಕೆ 'ಕಾಂತಾರ' ಸಿನಿಮಾ ಹಿಂದಿ ಹಾಗೂ ತೆಲುಗು ಟ್ರೈಲರ್ ರಿಲೀಸ್ ಆಗಿತ್ತು. ಅಲ್ಲಿಂದ ಸಂಜೆ ಸುಮಾರು 6 ಗಂಟೆ ಹೊತ್ತಿಗೆ 'ಕಾಂತಾರ' ಹಿಂದಿ ಟ್ರೈಲರ್ 2ನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಕೇವಲ 9 ಗಂಟೆಗಳ ಅಂತರದಲ್ಲಿ ಹಿಂದಿ ಟ್ರೈಲರ್ ಸುಮಾರು 1.1 ಮಿಲಿಯನ್ ವೀವ್ಸ್ ಸಿಕ್ಕಿದೆ. 1 ಲಕ್ಷದ 11 ಸಾವಿರ ಲೈಕ್ಸ್ ಸಿಕ್ಕಿದೆ. ಹಿಂದಿ ಟ್ರೈಲರ್ ನೋಡಿ ಸುಮಾರು 4 ಸಾವಿರದ 800 ಅಧಿಕ ಮಂದಿ ಕಮೆಂಟ್ಸ್ ಮಾಡಿದ್ದರು. ಹಿಂದಿಯಲ್ಲಿ ಸಿನಿಮಾ ಕ್ರೇಜ್ ಬಗ್ಗೆ ಈಗಾಗಲೇ ಚಿಕ್ಕದೊಂದು ಸುಳಿವು ಸಿಕ್ಕಿದೆ.

  ತೆಲುಗಿನಲ್ಲಿ ಹೇಗಿದೆ ರೆಸ್ಪಾನ್ಸ್?

  ತೆಲುಗಿನಲ್ಲಿ ಹೇಗಿದೆ ರೆಸ್ಪಾನ್ಸ್?

  ಹಿಂದಿ ಟ್ರೈಲರ್‌ಗೆ ಸಿಕ್ಕಿರೋ ರೆಸ್ಪಾನ್ಸ್ ನೋಡಿದ ಮೇಲೆ ತೆಲುಗು ಬಗ್ಗೆ ಕುತೂಹಲ ಮೂಡದೇ ಇರೋದಿಲ್ಲ. ತೆಲುಗು ಟ್ರೈಲರ್ ಕೂಡ ಇದೇ ಸಮಯಕ್ಕೆ ರಿಲೀಸ್ ಆಗಿತ್ತು. ತೆಲುಗು ಟ್ರೈಲರ್‌ಗೆ ಹಿಂದಿಯಷ್ಟು ರೆಸ್ಪಾನ್ಸ್ ಸಿಗದೆ ಹೋದರೂ , 9 ಗಂಟೆಗಳಲ್ಲಿ ಸುಮಾರು 3 ಲಕ್ಷದ 80 ಸಾವಿರ ವೀವ್ಸ್ ಸಿಕ್ಕಿದೆ. ಇದು ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನ ವೀವ್ಸ್ ಆಗಿದ್ದರೆ, ಇದೇ ಟ್ರೈಲರ್ ಅನ್ನು ಗೀತಾ ಆರ್ಟ್ಸ್‌ ಯೂಟ್ಯೂಬ್ ಚಾನೆಲ್‌ನಲ್ಲೂ ರಿಲೀಸ್ ಮಾಡಲಾಗಿತ್ತು. ಅಲ್ಲಿ ಸುಮಾರು 2 ಲಕ್ಷದ 38 ಸಾವಿರ ವೀವ್ಸ್ ಸಿಕ್ಕಿದೆ.

  ಮಲಯಾಳಂನಲ್ಲಿ ಶೀಘ್ರವೇ ರಿಲೀಸ್

  ಮಲಯಾಳಂನಲ್ಲಿ ಶೀಘ್ರವೇ ರಿಲೀಸ್

  ಇನ್ನು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾಗಳ ಟ್ರೈಲರ್ ಅನ್ನು ರಿಲೀಸ್ ಮಾಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಟ್ರೈಲರ್ ರಿಲೀಸ್ ಮಾಡಿ, ಸಿನಿಮಾ ಬಿಡುಗಡೆ ಮಾಡಲಿದೆ. ಆದಷ್ಟು ಬೇಗ ಮಲಯಾಳಂನಲ್ಲಿ 'ಕಾಂತಾರ' ಸಿನಿಮಾ ರಿಲೀಸ್ ಆಗಲಿದೆ ಎಂದು ನಟ ಸುಕುಮಾರನ್ ಟ್ವೀಟ್ ಮಾಡಿದ್ದಾರೆ. ಸದ್ಯ ಅಕ್ಟೋಬರ್ 14ರಂದು 'ಕಾಂತಾರ' ಹಿಂದಿ ಹಾಗೂ ಅಕ್ಟೋಬರ್ 15ರಂದು 'ಕಾಂತಾರ' ತೆಲುಗು ಬಿಡುಗಡೆಯಾಗಲಿದೆ.

  English summary
  Rishab Shetty Kantara Hindi, Telugu, Tamil Trailer Response And Views In Other Languages, Know More.
  Sunday, October 9, 2022, 19:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X