ಅಲ್ಲು ಅರ್ಜುನ್ 'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'? ಕನ್ನಡ, ಹಿಂದಿ, ತೆಲುಗಿನಲ್ಲಿ ಬಂಪರ್ ಕಲೆಕ್ಷನ್!

ಸ್ಯಾಂಡಲ್‌ವುಡ್ ಹಿಂದೆಂದೂ ಇಂತಹದ್ದೊಂದು ಸಕ್ಸಸ್ ಕಂಡಿರಲಿಲ್ಲ. ಅಪ್ಪಟ ಕನ್ನಡದ ಸಿನಿಮಾವೊಂದು ಭಾರತದ ಬಾಕ್ಸಾಫೀಸ್‌ ಅನ್ನೇ ಕೊಳ್ಳೆ ಹೊಡೆಯುತ್ತಿದೆ. 'ಕಾಂತಾರ' ಓಟಕ್ಕೆ ಬ್ರೇಕ್ ಹಾಕೋ ಇನ್ನೊಂದು ಸಿನಿಮಾ ಇದೂವರೆಗೂ ಬಂದೇ ಇಲ್ಲ.

'ಕಾಂತಾರ' ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಸಖತ್ ಆಗಿಯೇ ಕಲೆಕ್ಷನ್ ಮಾಡುತ್ತಿದೆ. ಕರ್ನಾಟಕದಿಂದ ಆರಂಭವಾಗಿದ್ದ 'ಕಾಂತಾರ' ಜರ್ನಿ ದೇಶವನ್ನೂ ದಾಟಿ ವಿದೇಶ ತಲುಪಿದೆ. ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗಿ 50 ದಿನಗಳನ್ನು ಸಮೀಸುತ್ತಿರುವಾಗಲೇ ಹೊಸ ಮೈಲುಗಲ್ಲನ್ನು ಸೃಷ್ಟಿಸುತ್ತಿದೆ.

ಅಲ್ಲು ಅರ್ಜನ್ ಅಭಿನಯದ 'ಪುಷ್ಪ' ಹಾಗೂ ರಿಷಬ್ ಶೆಟ್ಟಿಯ 'ಕಾಂತಾರ' ಎರಡೂ ದಕ್ಷಿಣ ಭಾರತದ ಸೊಗಡಿನ ಸಿನಿಮಾ. ಗ್ಲಾಮರ್, ಅದ್ಧೂರಿ ಫೈಟ್ ಇದ್ಯಾವುದೂ ಇಲ್ಲದೆ, ಕಥೆಯನ್ನೇ ಮೂಲ ವಸ್ತುವನ್ನಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ. ಹೀಗಾಗಿ ಈ ಎರಡೂ ಸಿನಿಮಾ ಗಳಿಕೆ ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿತ್ತು. ಸದ್ಯ ಟ್ರೇಡ್ ಎಕ್ಸ್‌ಪರ್ಟ್ ಪ್ರಕಾರ, ಕಲೆಕ್ಷನ್ ವಿಚಾರದಲ್ಲಿ 'ಪುಷ್ಪ' ಸಿನಿಮಾವನ್ನು 'ಕಾಂತಾರ' ಹಿಂದಿಕ್ಕಿದೆ.

 'ಕಾಂತಾರ' ಹವಾ ಬಾಕ್ಸಾಫೀಸ್‌ನಲ್ಲಿ ನಿಂತಿಲ್ಲ

'ಕಾಂತಾರ' ಹವಾ ಬಾಕ್ಸಾಫೀಸ್‌ನಲ್ಲಿ ನಿಂತಿಲ್ಲ

ಸ್ಯಾಂಡಲ್‌ವುಡ್ ಸಿನಿಮಾ ಕಡೆ ತಿರುಗಿ ನೋಡದೆ ಇರೋ ಜಮಾನ ಕೂಡ ಇತ್ತು. ಆದ್ರೀಗ ಕಾಲ ಬದಲಾಗಿದೆ. ಕನ್ನಡ ಸಿನಿಮಾಗಳು ಎಲ್ಲಾ ಭಾಷೆಯ ಸಿನಿಮಾಗಳಿಗೂ ಟಕ್ಕರ್ ಕೊಡುತ್ತಿವೆ. ಅದಕ್ಕೆ ಉತ್ತಮ ಉದಾಹರಣೆ 'ಕಾಂತಾರ'. ಅಪ್ಪಟ ಕರ್ನಾಟಕದ ಮಣ್ಣಿನ ಕಥೆ ದೇಶದ ಉದ್ದಗಲಕ್ಕೂ ಸದ್ದು ಮಾಡುತ್ತಿದೆ. ಭಾಷೆಯ ಭೇದ-ಭಾವ ಇಲ್ಲದೆನೇ 'ಕಾಂತಾರ' ಸಿನಿಮಾ ವೀಕ್ಷಿಸಿದ ಉದಾಹರಣೆಗಳೂ ಸಾಕಷ್ಟು ಇವೆ. ಸದ್ಯ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಕನ್ನಡ ಸೇರಿದಂತೆ ಹಿಂದಿ ಹಾಗೂ ತೆಲುಗಿನಲ್ಲಿ ಕಲೆಕ್ಷನ್ ಇನ್ನೂ ಅದ್ಭುತವಾಗಿಯೇ ಇದೆ.

 'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'

'ಪುಷ್ಪ' ಹಿಂದಿಕ್ಕಿತಾ 'ಕಾಂತಾರ'

ವಿಶ್ವದಾದ್ಯಂತ 'ಕಾಂತಾರ' ಮಾಡಿದ ಕಲೆಕ್ಷನ್ ಒಂದು ದಾಖಲೆ. 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಸಿನಿಮಾ 350 ಕೋಟಿ ಗಡಿಯನ್ನು ಎರಡು ದಿನಗಳ ಹಿಂದೆನೇ ದಾಟಿತ್ತು. ಈಗ ಅಲ್ಲು ಅರ್ಜುನ್ ನಟಿಸಿದ್ದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದ ಕಲೆಕ್ಷನ್ ಅನ್ನೂ ಮೀರಿಸಿದೆ ಅನ್ನೋದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. 'ಪುಷ್ಪ' ಲೈಫ್ ಟೈಟಲ್ ಕಲೆಕ್ಷನ್ 360 ಕೋಟಿ ರೂ. ಇತ್ತು. ಆದ್ರೀಗ ರಿಷಬ್ ಶೆಟ್ಟಿಯ 'ಕಾಂತಾರ' ಕಲೆಕ್ಷನ್ 360 ಕೋಟಿ ರೂ. ದಾಟಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಚರ್ಚೆ ಮಾಡುತ್ತಿದ್ದಾರೆ.

 ಬಾಲಿವುಡ್‌ನಲ್ಲಿ 'ಕಾಂತಾರ' ಕಲೆಕ್ಷನ್ ಎಷ್ಟು?

ಬಾಲಿವುಡ್‌ನಲ್ಲಿ 'ಕಾಂತಾರ' ಕಲೆಕ್ಷನ್ ಎಷ್ಟು?

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಅಬ್ಬರಿಸುತ್ತಿದೆ. ಬಾಲಿವುಡ್ ಸಿನಿಮಾಗಳೂ ಗಳಿಸದಷ್ಟು ಗಳಿಕೆ ಮಾಡುತ್ತಿದೆ. ನಿನ್ನೆ (ನವೆಂಬರ್ 09)ಗೆ 'ಕಾಂತಾರ' ಕೇವಲ ಹಿಂದಿ ಬೆಲ್ಟ್‌ನಲ್ಲಿ 67 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇಂದು (ನವೆಂಬರ್ 10) ಅಥವಾ ನಾಳೆ (ನವೆಂಬರ್ 11) ಹೊತ್ತಿಗೆ 70 ಕೋಟಿಯ ಗಡಿ ದಾಟಲಿದೆ. ಆದರೆ, ಹಿಂದಿ ಬೆಲ್ಟ್‌ಲ್ಲಿ 'ಕಾಂತಾರ' ಕಲೆಕ್ಷನ್ ಇನ್ನೂ 'ಪುಷ್ಪ' ಗಳಿಕೆಯನ್ನು ಮೀರಿಸಿಲ್ಲ. ಅಲ್ಲು ಅರ್ಜುನ್ ಸಿನಿಮಾ ಹಿಂದಿ ಬೆಲ್ಟ್‌ನಲ್ಲಿಯೇ 100 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.

 ತೆಲುಗಿನಲ್ಲೂ 'ಕಾಂತಾರ' ಕ್ಲಿಕ್

ತೆಲುಗಿನಲ್ಲೂ 'ಕಾಂತಾರ' ಕ್ಲಿಕ್

'ಕಾಂತಾರ' ತೆಲುಗು ರಿಲೀಸ್ ಆಗಿ ನಿನ್ನೆಗೆ (ನವೆಂಬರ್ 9) 25 ದಿನಗಳನ್ನು ಪೂರೈಸಿದೆ. ಈ 25 ಗಳಲ್ಲಿ ಸುಮಾರು 49.40 ಕೋಟಿ ರೂಪಾಯಿ(Gross) ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇಂದಿನ ವರದಿಯಲ್ಲಿ 50 ಕೋಟಿ ರೂ. ಗಡಿದಾಟಲಿದೆ. ಕನ್ನಡ ಸಿನಿಮಾ ಟಾಲಿವುಡ್‌ನಲ್ಲಿ ಗಳಿಸಿದ್ದು ಕೂಡ ಹೊಸ ಸಾಧನೆಯೇ. ಸದ್ಯಕ್ಕೆ ಈ ಸಿನಿಮಾ ತೆಲುಗಿನಲ್ಲಿ ಕನ್ನಡದ್ದೇ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಅನ್ನೂ ಬೀಟ್ ಮಾಡಿದೆ.

More from Filmibeat

English summary
Rishab Shetty Kantara Vs Pushpa 1 Worldwide Box Office Collection Report, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X