ಪ್ರೇಮಿ ಮೇಲೆ ಕೋಪಿಸಿಕೊಂಡು ಕ್ಲಾಸ್ ತೆಗೆದುಕೊಳ್ಳುವ ಹುಡುಗಿಗಾಗಿ ಹುಡುಕ್ತಿದ್ದಾರೆ ರಿಷಬ್ ಶೆಟ್ಟಿ!

ರಿಷಬ್ ಶೆಟ್ಟಿ ನಟಿಸುತ್ತಿರುವ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಬಹಳ ಸರಳವಾಗಿ ನೆರವೇರಿತ್ತು. ಸಂದೇಶ ನಾಗರಾಜ್ ನಿರ್ಮಾಣದಲ್ಲಿ ಗಿರಿಕೃಷ್ಣ ಬರೆದು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಇದು.

Recommended Video

ಸುಳ್ಳಾಯ್ತು ದರ್ಶನ್ ಅಭಿಮಾನಿಗಳ ಆಸೆ | Darshan starrer Robert Cinema is to be released next year

ರಿಷಬ್ ಶೆಟ್ಟಿ ಅವರ ಕಚೇರಿಯಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಕುಟುಂಬದವರು, ನಟ ರಕ್ಷಿತ್ ಶೆಟ್ಟಿ ಮತ್ತು ಸಂದೇಶ್ ನಾಗರಾಜ್ ಹಾಗೂ ಚಿತ್ರತಂಡ ಕೆಲವರು ಭಾಗಿಯಾಗಿದ್ದರು. ಈಗ ರಿಷಬ್ ಶೆಟ್ಟಿ ತಮ್ಮ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದಾರೆ.

ಈಗಾಗಲೇ 'ಬೆಲ್ ಬಾಟಂ' ಚಿತ್ರದ ಮೂಲಕ ನಾಯಕರಾಗಿ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ರಿಷಬ್ ಶೆಟ್ಟಿ, ನಿರ್ದೇಶನ ಮತ್ತು ನಟನೆ ಎರಡನ್ನೂ ಸರಿದೂಗಿಸುತ್ತಿದ್ದಾರೆ. ಜತೆಗೆ ನಿರ್ಮಾಣದ ಕಾರ್ಯದಲ್ಲಿಯೂ ಹಿಂದೆ ಬಿದ್ದಿಲ್ಲ. ಈಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಮುಂದೆ ಓದಿ..

ಹೀರೋಯಿನ್ ಬೇಕೆಂದು ರಿಷಬ್

ಹೀರೋಯಿನ್ ಬೇಕೆಂದು ರಿಷಬ್

ನಮ್ಮ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರಕ್ಕೆ ಹೀರೋಯಿನ್ ಬೇಕು. ಹೊಸ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಎಂದು ರಿಷಬ್ ಶೆಟ್ಟಿ, ಆಸಕ್ತರು ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂಬ ಆಫರ್ ನೀಡಿದ್ದಾರೆ. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಪಕ್ಕಾ ಮನರಂಜನೆಯ ಚಿತ್ರ. ಅದಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ನಟಿಯ ಹುಡುಕಾಟದಲ್ಲಿದ್ದಾರೆ.

ಒಂದು ನಿಮಿಷದ ವಿಡಿಯೋ

ಒಂದು ನಿಮಿಷದ ವಿಡಿಯೋ

ತನ್ನ ತಂದೆಯನ್ನು ಮೀಟ್ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವ ಪ್ರೇಯಸಿಯಂತೆ ಅಭಿನಯಿಸುವ ದೃಶ್ಯದ ಒಂದು ನಿಮಿಷದ ವಿಡಿಯೋ ಚಿತ್ರೀಕರಿಸಿ ಕಳುಹಿಸುವಂತೆ ಅವರು ಹೇಳಿದ್ದಾರೆ. 18-28 ವರ್ಷ ವಯಸ್ಸಿನ ಆಸಕ್ತರು ನಾಯಕಿಯಾಗುವ ಪ್ರಯತ್ನದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಅವಕಾಶ ನೀಡಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ

ಅಜನೀಶ್ ಲೋಕನಾಥ್ ಸಂಗೀತ

ಹರಿಕಥೆ ಅಲ್ಲ ಗಿರಿಕಥೆಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಂಗನಾಥ್ ಛಾಯಾಗ್ರಹಣವಿದೆ. ರಿಷಬ್ ಶೆಟ್ಟಿ ಅವರೊಂದಿಗೆ ಪ್ರಮೋದ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಮುಂದಿನ ತಿಂಗಳಿಂದ ಚಿತ್ರೀಕರಣ

ಮುಂದಿನ ತಿಂಗಳಿಂದ ಚಿತ್ರೀಕರಣ

ಜುಲೈನಲ್ಲಿ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಚಿತ್ರೀಕರಣದ ಜತೆ ಜತೆಗೇ ಪಾತ್ರಕ್ಕೆ ಸೂಕ್ತವಾದ ನಾಯಕಿಯ ಹುಡುಕಾಟವೂ ನಡೆಯಲಿದೆ. ಉಳಿದಂತೆ ಬಾಕಿ ಪಾತ್ರಗಳಲ್ಲಿ ಕೆಲವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

More from Filmibeat

English summary
Rishab Shetty is looking for female lead actress for his next project Harikathe Alla Girikathe directed by Girikrishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X