ಕೆಸರು ಗದ್ದೆಯಲ್ಲಷ್ಟೇ ಅಲ್ಲ.. ಬಾಕ್ಸಾಫೀಸ್‌ನಲ್ಲೂ ಭರ್ಜರಿ ಓಟ: 4 ಭಾಷೆಯಿಂದ 'ಕಾಂತಾರ' ಗಳಿಸಿದ್ದೆಷ್ಟು?

ಈ ಸಿನಿಮಾ ಮುಂದೆ ಬೇರೆ ಯಾವುದೇ ಸಿನಿಮಾನೂ ಇಲ್ಲ ಅನ್ನೋವಷ್ಟು ಹವಾ ಹುಟ್ಟಾಕಿದೆ 'ಕಾಂತಾರ'. ಉತ್ತರದಿಂದ ದಕ್ಷಿಣದವರೆಗೂ ರಿಷಬ್ ಶೆಟ್ಟಿ 'ಕಾಂತಾರ' ಬಗ್ಗೆನೇ ಟಾಕ್. ಬಾಕ್ಸಾಫೀಸ್‌ನಲ್ಲೂ 'ಕಾಂತಾರ' ಅಬ್ಬರಿಸಿ ಮುನ್ನುಗುತ್ತಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ವರ್ಷನ್‌ ಈಗಾಗಲೇ ರಿಲೀಸ್ ಆಗಿ ಅಬ್ಬರಿಸುತ್ತಿದೆ. ಆಲ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ' ಕಣ್ತುಂಬಿಕೊಂಡ ಕಂಗಲಾದವರೇ ಹೆಚ್ಚು. ಈ ಬೆನ್ನಲ್ಲೇ ಕರ್ನಾಟಕದಲ್ಲಿ 'ಕಾಂತಾರ' ರಿಲೀಸ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೂ, ಸಿನಿಮಾದ ಸ್ಪೀಡ್ ಬ್ರೇಕರ್ ಇಲ್ಲದೆ ವೇಗ ಹೆಚ್ಚಿಕೊಂಡಿದೆ.

ಇದೇ ಮೊದಲ ಬಾರಿಗೆ 'ಕಾಂತಾರ' ಎಲ್ಲಾ ಭಾಷೆಗಳಿಂದ ಬಾಕ್ಸಾಫೀಸ್‌ನಲ್ಲಿ ಎರಡಂಕಿ ದಾಟಿದೆ. ಅಲ್ಲದೆ ಮೂರನೇ ವಾರದ ಗಳಿಕೆ ಮೇಲೆ ಹಿಂದೆಂದಿಗಿಂತಲೂ ದುಪ್ಪಟ್ಟು ಆಗುತ್ತೆ ಅಂತ ಟ್ರೇಡ್ ಅನಲಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಇನ್ನೊಂದು ವಾರದೊಳಗೆ 100 ಕೋಟಿ ರೂ. ಕ್ಲಬ್ ಸೇರುತ್ತೆ ಅಂತಾನೂ ಹೇಳುತ್ತಿದ್ದಾರೆ.

3ನೇ ಶನಿವಾರ ಎರಡಂಕಿ ದಾಟಿದ ಬಾಕ್ಸಾಫೀಸ್

3ನೇ ಶನಿವಾರ ಎರಡಂಕಿ ದಾಟಿದ ಬಾಕ್ಸಾಫೀಸ್

'ಕಾಂತಾರ' ಮೂರನೇ ಶನಿವಾರ ಬಾಕ್ಸಾಫೀಸ್‌ನಲ್ಲಿ ಬಂಪರ್ ಕಲೆಕ್ಷನ್ ಮಾಡಿದೆ. ಇದೇ ಮೊದಲ ಬಾರಿಗೆ ಎರಡಂಕಿ ದಾಟಿದೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ 'ಕಾಂತಾರ' ರಿಲೀಸ್ ಆಗಿದ್ದು, ಎಲ್ಲಾ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಮೂರನೇ ವೀಕೆಂಡ್ ಆರಂಭದಲ್ಲಿ ಬಿಡುಗಡೆಯಾದ ಎಲ್ಲಾ ಭಾಷೆಯಿಂದಲೂ ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 12.50 ಕೋಟಿ ರೂಪಾಯಿ ದಾಟಿದೆ ಎಂದು ವರದಿಯಾಗಿದೆ.

ಮೂರು ವಾರದ ಒಟ್ಟು ಗಳಿಕೆ ಎಷ್ಟು?

ಮೂರು ವಾರದ ಒಟ್ಟು ಗಳಿಕೆ ಎಷ್ಟು?

'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಇದೂವರೆಗೂ ಹಿಂದೆ ಬಿದ್ದೇ ಇಲ್ಲ. 'ಕೆಜಿಎಫ್ 2'ನಷ್ಟೇ ಹವಾ ಸೃಷ್ಟಿಸುತ್ತಿರುವ 'ಕಾಂತಾರ' ಈ ವೀಕೆಂಡ್‌ನಲ್ಲಿ ಸುಮಾರು 32 ರಿಂದ 33 ಕೋಟಿ ರೂ.ಯನ್ನು ಕಲೆಹಾಕಬಹುದು ಎನ್ನಲಾಗುತ್ತಿದೆ. ಇನ್ನೊಂದು ಕಡೆ ನಿನ್ನೆವೆರೆಗೆ ( ಅಕ್ಟೋಬರ್ 15) ಈ ಸಿನಿಮಾದ ಗಳಿಕೆ ಸುಮಾರು 81 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ಭಾನುವಾರದ (ಅಕ್ಟೋಬರ್ 16) ಗಳಿಕೆಯನ್ನೂ ಸೇರಿಸಿ ಸಿನಿಮಾದ ಕಲೆಕ್ಷನ್ 95 ರಿಂದ 96 ಕೋಟಿ ರೂ.ದಾಟಬಹುದು. ಇಲ್ಲಾ 100 ಕೋಟಿ ಕ್ಲಬ್ ಸೇರಬಹುದು ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ.

ತೆಲುಗು 'ಕಾಂತಾರ' ಕಲೆಕ್ಷನ್ ಎಷ್ಟು?

ತೆಲುಗು 'ಕಾಂತಾರ' ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಹಾಗೂ 'ವಿಕ್ರಾಂತ್ ರೋಣ'ಗೆ ರೆಸ್ಪಾನ್ಸ್ ಸಿಕ್ಕಂತೆ 'ಕಾಂತಾರ'ಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಎರಡು ದಿನಗಳಿಂದ 'ಕಾಂತಾರ' ಗಳಿಕೆ ಕೋಟಿ ದಾಟುತ್ತಿದೆ. ಕೇವಲ ಆಂಧ್ರ, ತೆಲಂಗಾಣದಲ್ಲಿ ಎರಡು ದಿನಕ್ಕೆ ಸಿನಿಮಾ ಕಲೆಕ್ಷನ್ 4 ಕೋಟಿ ರೂಪಾಯಿ ದಾಟಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರೋ ಲೆಕ್ಕ.

'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್ (ತೆಲುಗು)

ಮೊದಲ ದಿನ 1.25 ಕೋಟಿ ರೂ.
ಎರಡನೇ ದಿನ 2.75 ಕೋಟಿ ರೂ.
ಒಟ್ಟು 4.00 ಕೋಟಿ ರೂ.

ತಮಿಳು ಹಾಗೂ ಹಿಂದಿ ಕಲೆಕ್ಷನ್ ಎಷ್ಟು?

ತಮಿಳು ಹಾಗೂ ಹಿಂದಿ ಕಲೆಕ್ಷನ್ ಎಷ್ಟು?

'ಕಾಂತಾರ' ತಮಿಳು ವರ್ಷನ್ ನಿನ್ನೆಯಷ್ಟೇ (ಅಕ್ಟೋಬರ್ 15) ರಿಲೀಸ್ ಆಗಿದೆ. ಮೊದಲ ದಿನ ಇಲ್ಲೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ದಿನ ತಮಿಳಿನಲ್ಲಿ 35 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅದೇ ಹಿಂದಿಯಲ್ಲಿ ಕಳೆದ ಎರಡು ದಿನಗಳ ಕಲೆಕ್ಷನ್ ಸುಮಾರು 3.80 ಕೋಟಿ ರೂಪಾಯಿ ಎನ್ನಲಾಗಿದೆ. ಭಾನುವಾರದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಎಷ್ಟು ಕಲೆ ಹಾಕುತ್ತೆ ಅನ್ನೋದರ ಮೇಲೆ ಎಲ್ಲವೂ ನಿರ್ಧಾರವಾಗಿದೆ.

More from Filmibeat

English summary
Rishab Shetty Movie Kantara box office collection: Kannada, Hindi, Telugu, Tamil, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X