Kantara Chapter 1: ರಿಲೀಸ್ ಆದ ದಿನ ಸೇಲ್ ಆದ ಟಿಕೆಟ್‌ಗಳಲ್ಲೂ ದಾಖಲೆ ಬರೆದ 'ಕಾಂತಾರ ಚಾಪ್ಟರ್ 1'
'ಕಾಂತಾರ' ಪ್ರೀಕ್ವೆಲ್ 'ಕಾಂತಾರ ಚಾಪ್ಟರ್ 1' ಬಗ್ಗೆ ನೂರೆಂಟು ಕುತೂಹಲಗಳು ಇದ್ದವು. ಅದರಲ್ಲಿ ಈ ಸಿನಿಮಾ ಏನೆಲ್ಲಾ ದಾಖಲೆಗಳನ್ನು ಬರೆಯಬಹುದೆಂದು ಕುತೂಹಲದಿಂದಲೇ ಎದುರು ನೋಡುತ್ತಿದ್ದರು. ಯಾಕಂದ್ರೆ, 2022ರಲ್ಲಿ ರಿಲೀಸ್ ಆಗಿದ್ದ 'ಕಾಂತಾರ' ಆ ಮಟ್ಟಿಗೆ ಸದ್ದು ಮಾಡಿತ್ತು. ಕೊನೆಗೂ ಈ ಸಿನಿಮಾ ನಿನ್ನೆ (ಅಕ್ಟೋಬರ್ 2) ಅದ್ಧೂರಿಯಾಗಿ ತೆರೆಕಂಡಿತ್ತು. ನಿರೀಕ್ಷೆ ಮಾಡಿದಂತೆ ಸಿಕ್ಕಾಪಟ್ಟೆ ದೊಡ್ಡ ಓಪನಿಂಗ್ ಪಡೆದುಕೊಂಡಿದೆ.
'ಕಾಂತಾರ ಚಾಪ್ಟರ್ 1' ಮೊದಲ ದಿನ ದಾಖಲೆ ಕಲೆಕ್ಷನ್ ಮಾಡಿ, ಎಲ್ಲರ ಹುಬ್ಬೇರಿಸಿದೆ. ಬಿಡುಗಡೆವರೆಗೂ ಸೈಲೆಂಟ್ ಆಗಿದ್ದ ಈ ಸಿನಿಮಾ, ಆ ಬಳಿಕ ಅದ್ಧೂರಿ ಓಪನಿಂಗ್ ಪಡೆದುಕೊಂಡಿತ್ತು. ಮೊದಲ ದಿನವೇ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಮಧ್ಯೆ ಟಿಕೆಟ್ ಖರೀದಿ ವಿಚಾರದಲ್ಲಿಯೂ 'ಕಾಂತಾರ ಚಾಪ್ಟರ್ 1' ಹೊಸ ದಾಖಲೆಯನ್ನು ಬರೆದಿದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಸೇಲ್ ಮಾಡುವ 'ಬುಕ್ ಮೈ ಶೋ'ನಲ್ಲಿ 'ಕಾಂತಾರ ಚಾಪ್ಟರ್ 1' ಚಿಂದಿ ಉಡಾಯಿಸಿದೆ. ರಿಲೀಸ್ ಆದ ದಿನವೇ ಲಕ್ಷಗಳ ಲೆಕ್ಕದಲ್ಲಿ ಟಿಕೆಟ್‌ಗಳು ಬಿಕರಿಯಾಗಿವೆ. ಹಾಗಿದ್ದರೆ, ಮೊದಲ ದಿನ ಬಿಗ್ ಬುಕ್ ಶೋ ಸೇಲ್ ಮಾಡಿದ ಟಿಕೆಟ್‌ಗಳು ಎಷ್ಟು? ಯಾವ್ಯಾವ ಸಿನಿಮಾಗಳ ದಾಖಲೆಯನ್ನು ಈ ಸಿನಿಮಾ ಉಡೀಸ್ ಮಾಡಿದೆ? ರಿಲೀಸ್ ದಿನವೇ ಒಂದು ಮಿಲಿಯನ್ ಟಿಕೆಟ್ ಸೇಲ್ ಆದ ಸಿನಿಮಾಗಳ್ಯಾವುವು ಎಂದು ನೋಡುವುದಾರೇ.
ಬುಕ್ ಮೈ ಶೋನಲ್ಲಿ ಧೂಳೆಬ್ಬಿಸಿದ 'ಕಾಂತಾರ'
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ 'ಕಾಂತಾರ ಚಾಪ್ಟರ್ 1' ಬುಕ್ ಮೈ ಶೋನಲ್ಲೂ ದಾಖಲೆ ಬರೆದಿದೆ. ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಪೈಕಿ 'ಕಾಂತಾರ ಚಾಪ್ಟರ್ 1' ಅತೀ ಹೆಚ್ಚು ಟಿಕೆಟ್ ಸೇಲ್ ಆದ ಸಿನಿಮಾ ಎನಿಸಿಕೊಂಡಿದೆ. ಬುಕ್ ಮೈ ಶೋನಲ್ಲಿ ರಿಲೀಸ್ ಆದ ದಿನ ಈ ಸಿನಿಮಾ ಬರೋಬ್ಬರಿ 1.28 ಮಿಲಿಯನ್ ಟಿಕೆಟ್‌ಗಳು ಸೇಲ್ ಆಗಿವೆ. ಅಂದರೆ, ಹೆಚ್ಚು ಕಡಿಮೆ 13 ಲಕ್ಷ ಟಿಕೆಟ್‌ಗಳು ಕೇವಲ ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿಯೇ ಸೇಲ್ ಆಗಿರೋದು ಈ ವರ್ಷದ ದಾಖಲೆ.
2ನೇ ದಿನವೂ ಭಾರೀ ಟಿಕೆಟ್ ಸೇಲ್
'ಕಾಂತಾರ ಚಾಪ್ಟರ್ 1' ಎರಡನೇ ದಿನವೂ ಬುಕ್ ಮೈ ಶೋನಲ್ಲಿ ಟಿಕೆಟ್‌ಗಳು ಭಾರೀ ಪ್ರಮಾಣದಲ್ಲಿ ಸೇಲ್ ಆಗುತ್ತಿವೆ. ಇಂದು (ಅಕ್ಟೋಬರ್ 3) ಕೇವಲ ಒಂದು ಗಂಟೆಯಲ್ಲಿಯೇ ಈ ಸಿನಿಮಾ ಬರೋಬ್ಬರಿ 64.5 ಸಾವಿರ ಟಿಕೆಟ್‌ಗಳನ್ನು ಸೇಲ್ ಮಾಡಿದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ ಎರಡನೇ ದಿನವೂ ಹತ್ತು ಲಕ್ಷ ಟಿಕೆಟ್‌ಗಳು ಸೇಲ್ ಆಗಬಹುದೆಂಬ ನಿರೀಕ್ಷೆಯಿದೆ. ಅದಕ್ಕೆ ಒಂದು ಗಂಟೆಯಲ್ಲಿ ಸೇಲ್ ಆದ ಈ ಟಿಕೆಟ್‌ಗಳೇ ಸಾಕ್ಷಿ.
'ಕೆಜಿಎಫ್ 2' ಮೀರಿಸಲಿಲ್ಲ 'ಕಾಂತಾರ 1'
'ಕಾಂತಾರ ಚಾಪ್ಟರ್ 1' ಹೊಂಬಾಳೆಯೇ ನಿರ್ಮಿಸಿರುವ 'ಕೆಜಿಎಫ್ 2' ಸಿನಿಮಾದ ದಾಖಲೆಯನ್ನು ಮುರಿಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಬುಕ್ ಬೈ ಶೋನಲ್ಲಿ 'ಕೆಜಿಎಫ್ 2' ಮೊದಲ ದಿನ 2.14 ಮಿಲಿಯನ್ ಟಿಕೆಟ್‌ಗಳು ಸೇಲ್ ಆಗಿದ್ದವು. 'ಕಾಂತಾರ ಚಾಪ್ಟರ್ 1' 1.28 ಮಿಲಿಯನ್ ಟಿಕೆಟ್‌ಗಳು ಖರೀದಿಯಾಗಿವೆ. 'ಕೆಜಿಎಫ್ 2' ದಾಖಲೆ ಮುಗಿಯದೇ ಹೋದರೂ, ಹೆಚ್ಚು-ಕಡಿಮೆ 13 ಲಕ್ಷ ಟಿಕೆಟ್‌ಗಳು ಸೇಲ್ ಆಗಿದ್ದು ದಾಖಲೆಯೇ ಎನ್ನಲಾಗುತ್ತಿದೆ.
1 ಮಿಲಿಯನ್ ಗಡಿದಾಟಿದ ಸಿನಿಮಾಗಳು
ರಿಲೀಸ್ ಆದ ದಿನವೇ ಬಿಕ್ ಮೈ ಶೋ ನಲ್ಲಿ 1 ಮಿಲಿಯನ್‌ಗೂ ಅಧಿಕ ಟಿಕೆಟ್‌ಗಳಿ ಬಿಕರಿಯಾದ ಹಲವು ಸಿನಿಮಾಗಳಿವೆ. ಅದರಂತೆ 'ಕಾಂತಾರ ಚಾಪ್ಟರ್ 1' 1.28 ಮಿಲಿಯನ್ ಟಿಕೆಟ್ ಸೇಲ್ ಆಗಿದ್ದು ಹೊಂಬಾಳೆ ಫಿಲ್ಮ್ಸ್‌ಗೆ ಹುರುಪು ಬಂದಂತೆ ಆಗಿದೆ. ಹಾಗೇ ಈ ಹಿಂದೆ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' 1.75 ಮಿಲಿಯನ್ ಟಿಕೆಟ್‌ಗಳು ಸೇಲ್ ಆಗಿದ್ದವು. ಹಾಗೇ ಪ್ರಭಾಸ್ 'ಕಲ್ಕಿ 2898AD', ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಕೂಡ ಮೊದಲ ದಿನ ದಾಖಲೆ ಲೆಕ್ಕದಲ್ಲಿ ಟಿಕೆಟ್ ಸೇಲ್ ಮಾಡಿತ್ತು.
ಬುಕ್ ಮೈ ಶೋನಲ್ಲಿ ದಾಖಲೆ ಟಿಕೆಟ್ ಸೇಲ್
'ಕಾಂತಾರ ಚಾಪ್ಟರ್ 1' 1.28 ಮಿಲಿಯನ್
ಪುಪ್ಟ 2: ದಿ ರೂಲ್ 1.75 ಮಿಲಿಯನ್
ಜವಾನ್ 1.14 ಮಿಲಿಯನ್
ಕೆಜಿಎಫ್ 2 2.14 ಮಿಲಿಯನ್


Click it and Unblock the Notifications











