ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಸಿನಿಮಾ ಶೂಟಿಂಗ್ ಫಿನಿಶ್: ಮತ್ತೊಂದು ಸಿನಿಮಾ ಏನಾಯ್ತು?

ರಿಷಬ್ ಶೆಟ್ಟಿ ಕೇವಲ ನಟನೆಯಲ್ಲಷ್ಟೇ ಅಲ್ಲ. ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸ ಆಲೋಚನೆಗಳಿಗೆ ಅವಕಾಶಗಳನ್ನು ನೀಡುತ್ತಿದ್ದಾರೆ.

'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅದುವೇ 'ಲಾಫಿಂಗ್ ಬುದ್ಧ'. ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್‌ನಲ್ಲೇ ನಿರ್ಮಾಣ ಮಾಡಿದ್ದು, ಶೂಟಿಂಗ್ ಮುಕ್ತಾಯಗೊಂಡಿದೆ.

Rishab Shetty Produced Movie Laughing Buddha Shooting Completed

'ಲಾಫಿಂಗ್ ಬುದ್ಧ' ಸಿನಿಮಾವನ್ನು ಭದ್ರಾವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಆಗಿದೆ. ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಶುರುವಾಗಿದ್ದ ಚಿತ್ರೀಕರಣ ಬೆಂಗಳೂರಿನಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿದೆ. ಶೂಟಿಂಗ್ ಮುಗಿಸಿದ ಕೂಡಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ.

'ಲಾಫಿಂಗ್ ಬುದ್ಧ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಾರೆ. ಇದೊಂದು ಕಾಮಿಡಿ ಹಾಗೂ ಡ್ರಾಮ ಶೈಲಿಯ ಸಿನಿಮಾವಾಗಿದ್ದು, ಎಂ.ಭರತ್ ರಾಜ್ ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ ಬಹಳ ದಿನಗಳ ಬಳಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Rishab Shetty Produced Movie Laughing Buddha Shooting Completed

ಈ ಸಿನಿಮಾಗೆ ವಿಷ್ಣುವಿಜಯ್ ಟ್ಯೂನ್ ಹಾಕುತ್ತಿದ್ದು, ಚಂದ್ರಶೇಖರ್ ಕ್ಯಾಮರಾ ಹಾಗೂ ಕೆ.ಎಂ.ಪ್ರಕಾಶ್ ಎಡಿಟಿಂಗ್ ಮಾಡುತ್ತಿದ್ದಾರೆ. ಕಾಮಿಡಿ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರಿಗೆ ಇದು ಸಖತ್ ಮನರಂಜನೆ ನೀಡುಬಹುದು ಎಂಬ ನಿರೀಕ್ಷೆಯಿದೆ.

ಪ್ರಮೋದ್ ಶೆಟ್ಟಿ 'ಲಾಫಿಂಗ್ ಬುದ್ಧ' ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ 'ತೂತು ಮಡಿಕೆ' ಅನ್ನೋ ಸಿನಿಮಾ ನಿರ್ಮಾಣ ಮಾಡಿ ಮೆಚ್ಚುಗೆ ಗಳಿಸಿದ್ದ ನಿರ್ಮಾಪಕ ಮಧುಸೂಧನ್ ರಾವ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವುದಕ್ಕೆ ರೆಡಿಯಾಗಿದ್ದಾಗಿ ಸುದ್ದಿಯಾಗಿತ್ತು.

ಈ ಸಿನಿಮಾದಲ್ಲಿ ತಮಿಳುನಾಡಿನ ಹಾಸ್ಯ ನಟ ಯೋಗಿ ಬಾಬು ಜೊತೆ ಪ್ರಮೋದ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಗ್ಗೆ ಸದ್ಯಕ್ಕೆ ಯಾವುದೇ ರೀತಿ ಸುದ್ದಿಯಿಲ್ಲ.

ಈ ಸಿನಿಮಾಗೆ 'ಸನ್ನಿದಾನ ಪಿ.ಒ' ಎಂಬ ಟೈಟಲ್‌ ಇಡಲಾಗಿತ್ತು. ಸ್ಟಾರ್ ಕಾಸ್ಟ್ ಕೂಡ ಡಿಫ್ರೆಂಟ್ ಆಗಿಯೇ ಇರುತ್ತೆ ಅನ್ನೋ ಸುಳಿವನ್ನು ಸಿನಿಮಾತಂಡ ನೀಡಿತ್ತು. ಈ ಪ್ಯಾನ್ ಇಂಡಿಯಾ ಸಿನಿಮಾ ಯಾವ ಹಂತದಲ್ಲಿದೆ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

More from Filmibeat

English summary
Rishab Shetty Produced Movie Laughing Buddha Shooting Completed, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X