For Quick Alerts
  ALLOW NOTIFICATIONS  
  For Daily Alerts

  ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ ಸಿನಿಮಾ 'ಶಿವಮ್ಮ'!

  |

  ಎಲ್ಲೆಲ್ಲೂ ಈಗ 'ಕಾಂತಾರ' ಸಿನಿಮಾದ್ದೇ ಹವಾ. ಕನ್ನಡದ ಚಿತ್ರವೊಂದು ಬೇಡಿಕೆಯ ಮೇರೆಗೆ ಬೇರೆ ಭಾಷೆಗಳಿಗೆ ಡಬ್ ಆಗಿ ಹೋಗುತ್ತಿರುವ ಮೊಟ್ಟಮೊದಲ ಉದಾಹರಣೆ ಬಹುಶಃ ಇದೊಂದೇ ಎನಿಸುತ್ತದೆ. ಇಂಥಾ ದಾಖಲೆ‌ ಮಾಡಿದ ರಿಷಬ್ ಶೆಟ್ಟಿ ಕೇವಲ ಅದ್ಭುತ ನಟ ಮತ್ತು ನಿರ್ದೇಶಕ ಮಾತ್ರ ಅಲ್ಲ, ಸದಭಿರುಚಿಯ ನಿರ್ಮಾಪಕ ಕೂಡಾ ಹೌದು.

  ಒಂದು ಕಡೆ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಸಿನಿಮಾ ಅಬ್ಬರಿಸುತ್ತಿದ್ದರೆ, ಇನ್ನೊಂದು ಕಡೆ ರಿಷಬ್ ಶೆಟ್ಟಿ ನಿರ್ಮಾಣದ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಅಸಲಿಗೆ ಈ ಸಿನಿಮಾ ಯಾವುದು ಅಂತಿರಾ? ಅದುವೇ 'ಶಿವಮ್ಮ'.

  ಸಣ್ಣ ಬಜೆಟ್ಟಿನ ಆದರೆ, ಮನಸ್ಸನ್ನು ತಾಕುವ ಕಥೆಗಳಿಗೆ ರಿಷಬ್ ಶೆಟ್ಟಿ ಜೊತೆಯಾಗಿರುವುದನ್ನು ಈ ಹಿಂದೆನೂ ನೋಡಿದ್ದೇವೆ. ಈ ಹಿಂದೆ ಕೂಡಾ ತಾವೇ ನಟಿಸಿದ 'ಕಥಾಸಂಗಮ', 'ಹೀರೊ' ಮುಂತಾದ ಚಿತ್ರಗಳು ತಮ್ಮದೇ ಆದ ಅಭಿಮಾನಿ ವರ್ಗವನ್ನು ಪಡೆದಿತ್ತು. ಅಲ್ಲದೆ 'ಪೆಡ್ರೋ' ಅನ್ನೋ ಸಿನಿಮಾ ನಿರ್ಮಾಣ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು.

  ಇದೇ ಸಾಲಿನಲ್ಲಿ ಬರುವ ಮತ್ತೊಂದು ಸಿನಿಮಾವೇ 'ಶಿವಮ್ಮ'. ರಿಷಬ್ ಶೆಟ್ಟಿ ಫಿಲ್ಮಂಸ್ ನಿರ್ಮಾಣ ಮಾಡಿರುವ 'ಶಿವಮ್ಮ' ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾಗೆ ಜೈ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ.

  ಕೊರಿಯಾದಲ್ಲಿ ನಡೆದ ಬೂಸನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನ್ಯೂ ಕರೆಂಟ್ಸ್ ಕೆಟಗರಿಯಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ 'ಶಿವಮ್ಮ' ಭಾಜನವಾಗಿದೆ. ಈ ಹಿರಿಮೆ‌ ಪಡೆದ ಮೊಟ್ಟಮೊದಲ ಕನ್ನಡ ಚಿತ್ರ ಇದಾಗಿದೆ. ಆದ್ರೆ ಈ ಸಿನಿಮಾದ ಬಗ್ಗೆ ಹೆಚ್ಚು ವಿಚಾರಗಳನ್ನು ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ.

  Rishab Shetty Produced Movie Shivamma Won Best Film Award In Busan Film Festival

  ಈಗಂತೂ 'ಕಾಂತಾರ' ಮೂಲಕ ರಿಷಬ್ ಪ್ರತಿಭೆ ಎಲ್ಲೆಡೆ ಚಿರಪರಿಚಿತ ಆಗಿರೋದ್ರಿಂದ ಶಿವಮ್ಮ ಬಗ್ಗೆ ಜನರ ನಿರೀಕ್ಷೆ ಹೆಚ್ಚೇ ಇದೆ. ಆದ್ರೆ ಕನ್ನಡಕ್ಕೆ ಮತ್ತೊಂದು ಸದಭಿರುಚಿಯ ಚಿತ್ರ ಸಿಕ್ಕಿರುವ ಬಗ್ಗೆಯಂತೂ ಚಿತ್ರರಸಿಕರು ಈಗಾಗಲೇ ಖುಷಿಯಲ್ಲಿದ್ದಾರೆ. ಇನ್ನೊಂದು ಕಡೆ ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾವನ್ನು ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 'ಕಾಂತಾರ' ಅಬ್ಬರ ಮುಗಿದ ಬಳಿಕ 'ಶಿವಮ್ಮ' ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದು.

  English summary
  Rishab Shetty Produced Movie Shivamma Won Best Film Award In Busan Film Festival. Know More.
  Saturday, October 15, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X