IMDb 2025: ಭಾರತದ ಜನಪ್ರಿಯ ಸ್ಟಾರ್‌ಗಳು-ನಿರ್ದೇಶಕರು ಲಿಸ್ಟ್ ಔಟ್; ರಿಷಬ್, ರಶ್ಮಿಕಾ, ರುಕ್ಮಿಣೆ ಯಾವ ಸ್ಥಾನ?
ಡಿಸೆಂಬರ್ ಬಂತು ಅಂದರೆ, ಈ ವರ್ಷ ಸದ್ದು ಮಾಡಿದ ನಟ-ನಟಿಯರು, ತಂತ್ರಜ್ಞರು ಯಾರು? ಅನ್ನೋ ಪ್ರಶ್ನೆ ಎದ್ದೇಳುತ್ತೆ. ಅದಕ್ಕೆ ಕೆಲವು ಸಂಸ್ಥೆಗಳು ಆಯಾ ವರ್ಷದಲ್ಲಿ ಸದ್ದು ಮಾಡಿದ ಸಿನಿಮಾ ಮಂದಿಯ ಲಿಸ್ಟ್ ಅನ್ನು ರಿಲೀಸ್ ಮಾಡುತ್ತೆ. ಇಂತಹ ಸಂಸ್ಥೆಯಲ್ಲಿ ಸಿನಿಮಾ, ಟಿವಿ ಹಾಗೂ ಸೆಲೆಬ್ರಿಟಿಗಳನ್ನು ಮಾಹಿತಿಯನ್ನು ಹಂಚಿಕೊಳ್ಳುವ ವಿಶ್ವದ ಅತ್ಯಂತ ಜನಪ್ರಿಯ ತಾಣ IMDb ಕೂಡ ಒಂದು.
IMDb 2025ರಲ್ಲಿ ಸದ್ದು ಮಾಡಿದ ನಟ-ನಟಿಯರು ಹಾಗೂ ನಿರ್ದೇಶಕರ ಪಟ್ಟಿಯನ್ನು ರಿಲೀಸ್ ಮಾಡಿದೆ. ಇದು ವಿಶ್ವದಾದ್ಯಂತ ಈ ವೆಬ್‌ಸೈಟ್‌ಗೆ ವಿಸಿಟ್ ಹಾಕುವ ಸುಮಾರು 250 ಮಿಲಿಯನ್‌ಗೂ ಅಧಿಕ ಜನರು ಸರ್ಚ್ ಮಾಡಿದ ಅಂಕಿ-ಅಂಶಗಳನ್ನು ಇಟ್ಕೊಂಡು ಭಾರತದ ಜನಪ್ರಿಯ ತಾರೆಯರು ಹಾಗೂ ನಿರ್ದೇಶಕರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕನ್ನಡದ ಮೂವರು ಮಂದಿಯ ಹೆಸರು ಕೂಡ ಸೇರಿಕೊಂಡಿದೆ.

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ರಶ್ಮಿಕಾ ಮಂದಣ್ಣ ಈ ಮೂವರ ಹೆಸರು ಟಾಪ್ 10ರ ಪಟ್ಟಿಯಲ್ಲಿದೆ. ಹಾಗೇ ಬಾಲಿವುಡ್ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶಿಸಿದ 'ಸೈಯ್ಯಾರಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಸ್ಟಾರ್ ನಟರನ್ನು ಹಿಂದಿಕ್ಕಿ ಮೊದಲ ಎರಡು ಸ್ಥಾನದಲ್ಲಿ ಇದ್ದಾರೆ. ಹಾಗಿದ್ದರೆ, IMDb ಪಟ್ಟಿಯಲ್ಲಿ ಯಾರೆಲ್ಲ ಯಾವ ಸ್ಥಾನದಲ್ಲಿದ್ದಾರೆ? ಟಾಪ್ 10 ಪಟ್ಟಿಯಲ್ಲಿ ಸೇರ್ಪಡೆಯಾಗಿರುವವರು ಯಾರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಸೈಯ್ಯಾರಾ'ಗೆ ಬಂಪರ್
'ಸೈಯ್ಯಾರಾ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಮೋಹಿತ್ ಸೂರಿ ಈ ವರ್ಷದ ಅತ್ಯಂತ ಜನಪ್ರಿಯ ಭಾರತೀಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಹಾಗೇ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಜನಪ್ರಿಯ ನಟ ನಟಿಯ ಪಟ್ಟಿಯಲ್ಲಿ ನಂಬರ್ ಸ್ಥಾನದಲ್ಲಿ ಇದ್ದಾರೆ. ಹಾಗಿದ್ದರೆ ಟಾಪ್ 10 ಜನಪ್ರಿಯ ನಟರು ಹಾಗೂ ನಿರ್ದೇಶಕರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ಲಿಸ್ಟ್ ಇಲ್ಲಿದೆ.

IMDb ಟಾಪ್ 10 ಜನಪ್ರಿಯ ಭಾರತೀಯ ಸ್ಟಾರ್‌ಗಳು- 2025
1 ಅಹಾನ್ ಪಾಂಡೆ
2 ಅನೀತ್ ಪಡ್ಡಾ
3 ಆಮಿರ್ ಖಾನ್
4 ಇಷಾನ್ ಖಟ್ಟರ್
5 ಲಕ್ಷ್ಯ
6 ರಶ್ಮಿಕಾ ಮಂದಣ್ಣ
7 ಕಲ್ಯಾಣಿ ಪ್ರಿಯದರ್ಶನ್
8 ತೃಪ್ತಿ ದಿಮ್ರಿ
9 ರುಕ್ಮಿಣಿ ವಸಂತ್
10 ರಿಷಬ್ ಶೆಟ್ಟಿ
IMDb ಟಾಪ್ 10 ಜನಪ್ರಿಯ ಭಾರತೀಯ ನಿರ್ದೇಶಕರು-2025
1 ಮೋಹಿತ್ ಸೂರಿ
2 ಆರ್ಯನ್ ಖಾನ್
3 ಲೋಕೇಶ್ ಕನಗರಾಜ್
4 ಅನುರಾಗ್ ಕಶ್ಯಪ್
5 ಪೃಥ್ವಿರಾಜ್ ಸುಕುಮಾರನ್
6 ಆರ್.ಎಸ್. ಪ್ರಸನ್ನ
7 ಅನುರಾಗ್ ಬಸು
8 ಡಾಮಿನಿಕ್ ಅರುಣ್
9 ಲಕ್ಷ್ಮಣ್ ಉಟೇಕರ್
10 ನೀರಜ್ ಘಯ್ವಾನ್
"IMDb 2025 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯನ್ನು ಸುಮಾರು 250 ಮಿಲಿಯನ್ ವಿಸಿಟ್‌ಗಳ ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ. ಯಾವ ನಟ-ನಟಿಯರ ಪುಟವನ್ನು ಹೆಚ್ಚು ಭಾರಿ ವಿಸಿಟ್ ಹಾಕಿದ್ದೋ ಅದನ್ನು ಆಧರಿಸಿದ ಪಟ್ಟಿಯನ್ನು ರೆಡಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕನ್ನಡದ ಮೂರು ಸ್ಟಾರ್‌ಗಳಾದ ರಿಷಬ್ ಶೆಟ್ಟಿ, ರುಕ್ಮಿಣಿ ಹಾಗೂ ರಶ್ಮಿಕಾ ಮಂದಣ್ಣ ಇದ್ದಾರೆ. "ಈ ವರ್ಷ ನಾವು 2025ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಜೊತೆಗೆ ಜನಪ್ರಿಯ ಭಾರತೀಯ ನಿರ್ದೇಶಕರ ಪಟ್ಟಿಯನ್ನು ಪರಿಚಯಿಸುತ್ತಿದ್ದೇವೆ" ಎಂದು IMDb ಇಂಡಿಯಾದ ಮುಖ್ಯಸ್ಥರಾದ ಯಾಮಿನೀ ಪಟೋಡಿಯಾ ಹೇಳಿದ್ದಾರೆ.


Click it and Unblock the Notifications











