For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ 'ಕೆಜಿಎಫ್ 2' ಮೀರಿಸಿದ 'ಕಾಂತಾರ': ಸಿನಿಮಾ ನೋಡಿದವರ ಸಂಖ್ಯೆ ಎಷ್ಟು?

  |

  ಹೊಂಬಾಳೆ ಫಿಲ್ಮ್ಸ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಯಶಸ್ಸಿನ ಮೇಲೆ ಯಶಸ್ಸನ್ನು ದಾಖಲು ಮಾಡುತ್ತಲೇ ಇದೆ. 'ರಾಜಕುಮಾರ', 'ಕೆಜಿಎಫ್ 1' ಹಾಗೂ 'ಕೆಜಿಎಫ್ 2' ಬಳಿಕ 'ಕಾಂತಾರ' ಹೊಸ ದಾಖಲೆಯನ್ನು ಬರೆದಿದೆ.

  ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ 'ಕಾಂತಾರ' ದೇಶ-ವಿದೇಶಗಳಲ್ಲಿ ಜನರಿಂದ ಮೆಚ್ಚುಗೆ ಗಳಿಸಿದೆ. ಇಂದಿಗೆ (ಅಕ್ಟೋಬರ್ 24) ಈ ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ 'ಕಾಂತಾರ' ಹೊಸ ದಾಖಲೆಯೊಂದನ್ನು ಬರೆದಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಲಿಸ್ಟ್‌ಗೆ ಹೊಸ ಗರಿ ಮೂಡಿದೆ.

  'ಹೆಡ್ ಬುಷ್' ರಿಲೀಸ್ ವೇಳೆನೇ 'ಕಾಂತಾರ' ವೀಕ್ಷಿಸಿದ ಡಾಲಿ ಈಗ ರಿಷಬ್ ಶೆಟ್ಟಿಯ ಅಭಿಮಾನಿ!'ಹೆಡ್ ಬುಷ್' ರಿಲೀಸ್ ವೇಳೆನೇ 'ಕಾಂತಾರ' ವೀಕ್ಷಿಸಿದ ಡಾಲಿ ಈಗ ರಿಷಬ್ ಶೆಟ್ಟಿಯ ಅಭಿಮಾನಿ!

  'ಕಾಂತಾರ' ಸಿನಿಮಾ ಈವರೆಗೆ ಹೊಂಬಾಳೆ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ಸಿನಿಮಾಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ್ದಾರೆ. 25 ದಿನಗಳ ಸಂಭ್ರಮದಲ್ಲಿ ಈ ದಾಖಲೆ ಸಿನಿಪ್ರಿಯರಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಹಾಗಿದ್ದರೆ, 'ಕಾಂತಾರ' ಸಿನಿಮಾವನ್ನು ಕರ್ನಾಟಕದಲ್ಲಿ ವೀಕ್ಷಿಸಿದ ಜನರೆಷ್ಟು? ಹೊಂಬಾಳೆ ನಿರ್ಮಿಸಿದ ಸಿನಿಮಾಗಳಲ್ಲಿ ಅತೀ ಹೆಚ್ಚು ಜನರು ವೀಕ್ಷಿಸಿದ ಸಿನಿಮಾಗಳ್ಯಾವುವು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ರಾಜಕುಮಾರ' ಸಿನಿಮಾ ನೋಡಿದವರೆಷ್ಟು?

  'ರಾಜಕುಮಾರ' ಸಿನಿಮಾ ನೋಡಿದವರೆಷ್ಟು?

  ಹೊಂಬಾಳೆ ಫಿಲ್ಮ್ಸ್ ಕರ್ನಾಟಕದ ಹೆಸರಾಂತ ನಿರ್ಮಾಣ ಸಂಸ್ಥೆ. ಪುನೀತ್ ರಾಜ್‌ಕುಮಾರ್ ನಟಿಸಿದ 'ನಿನ್ನಿಂದಲೇ' ಸಿನಿಮಾದಿಂದ ಸಿನಿಮಾ ನಿರ್ಮಾಣಕ್ಕೆ ಇಳಿದಿತ್ತು. ಇಲ್ಲಿಂದ ಹೊಂಬಾಳೆ ಬೆಳೆದ ಹಾದಿ ಬಹಳ ದೊಡ್ಡದು. 2017ರಲ್ಲಿ ತೆರೆಕಂಡ 'ರಾಜಕುಮಾರ' ಹೊಂಬಾಳೆ ಫಿಲ್ಮ್ಸ್‌ಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದ ಈ ಸಿನಿಮಾವನ್ನು ಅಂದು ಕರ್ನಾಟಕದಲ್ಲಿ ಸುಮಾರು 65 ಲಕ್ಷ ಮಂದಿ ವೀಕ್ಷಿಸಿದ್ದರು. ಅಂದಿಗೆ ಇದು ದೊಡ್ಡ ದಾಖಲೆಯಾಗಿತ್ತು.

  ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆನೂ ಕುಗ್ಗಿಲ್ಲ 'ಕಾಂತಾರ': ಬಾಕ್ಸಾಫೀಸ್‌ನಲ್ಲಿ ಹವಾ ಹೇಗಿದೆ?ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆನೂ ಕುಗ್ಗಿಲ್ಲ 'ಕಾಂತಾರ': ಬಾಕ್ಸಾಫೀಸ್‌ನಲ್ಲಿ ಹವಾ ಹೇಗಿದೆ?

   'ಕೆಜಿಎಫ್ 1'ನಿಂದ ರಾಜಕುಮಾರ ದಾಖಲೆ ಬ್ರೇಕ್

  'ಕೆಜಿಎಫ್ 1'ನಿಂದ ರಾಜಕುಮಾರ ದಾಖಲೆ ಬ್ರೇಕ್

  'ರಾಜಕುಮಾರ' ಯಶಸ್ಸಿನ ಬಳಿಕ ಹೊಂಬಾಳೆ ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿತ್ತು. ಅದುವೇ 'ಕೆಜಿಎಫ್ 1'. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಸೃಷ್ಟಿಸಿತ್ತು. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಬೇಜಾನ್ ಸದ್ದು ಮಾಡಿತ್ತು. 'ಕೆಜಿಎಫ್ ಚಾಪ್ಟರ್ 1' ಅನ್ನು ಕರ್ನಾಟಕದಲ್ಲಿ ಸುಮಾರು 75 ಲಕ್ಷ ಮಂದಿ ವೀಕ್ಷಿಸಿದ್ದರು. ಇದು ಹೊಂಬಾಳೆ ನಿರ್ಮಿಸಿದ ಸಿನಿಮಾಗಳ ಪೈಕಿ ದೊಡ್ಡ ದಾಖಲೆಯಾಗಿತ್ತು.

  'ಕೆಜಿಎಫ್ 2' ವೀಕ್ಷಿಸಿದವರೆಷ್ಟು ಮಂದಿ?

  'ಕೆಜಿಎಫ್ 2' ವೀಕ್ಷಿಸಿದವರೆಷ್ಟು ಮಂದಿ?

  ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಬಳಿಕ ಹೊಂಬಾಳೆ ಸಂಸ್ಥೆ 2022 ರಲ್ಲಿ 'ಕೆಜಿಎಫ್ 2' ರಿಲೀಸ್ ಮಾಡಿತ್ತು. 'ಕೆಜಿಎಫ್ 2' ವಿಶ್ವದಾದ್ಯಂತ ಭರ್ಜರಿ ಸದ್ದು ಮಾಡಿತ್ತು. ರಾಜಮೌಳಿ ಸಿನಿಮಾ RRR ದಾಖಲೆಯನ್ನೇ ಮುರಿದು ಹಾಕಿತ್ತು. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಮಾಡಿತ್ತು. ಇದೇ ಸಿನಿಮಾವನ್ನು ಕರ್ನಾಟಕದಲ್ಲಿ ಸುಮಾರು 72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದೂ ಕೂಡ ಕನ್ನಡದ ಮಟ್ಟಿಗೆ ಒಂದು ದಾಖಲೆನೇ ಆಗಿತತ್ತು. ಅದನ್ನು 'ಕಾಂತಾರ' ಕೇವಲ 25 ದಿನಗಳಲ್ಲಿ ಮುರಿದಿದೆ.

  'ಕಾಂತಾರ'ವನ್ನು ಕರ್ನಾಟಕದಲ್ಲಿ ನೋಡಿದವರೆಷ್ಟು?

  'ಕಾಂತಾರ'ವನ್ನು ಕರ್ನಾಟಕದಲ್ಲಿ ನೋಡಿದವರೆಷ್ಟು?

  ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ರಾಜಕುಮಾರ', 'ಕೆಜಿಎಫ್ 1' ಹಾಗೂ 'ಕೆಜಿಎಫ್ 2' ಈ ಮೂರೂ ಸಿನಿಮಾಗಳನ್ನು ಕರ್ನಾಟಕದಲ್ಲಿ ದಾಖಲೆ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಆದರೆ, 'ಕಾಂತಾರ' ಈ ಎಲ್ಲಾ ದಾಖಲೆಗಳನ್ನೂ ಉಡೀಸ್ ಮಾಡಿದೆ. ಸುಮಾರು 77 ಲಕ್ಷ ಮಂದಿ ಕೇವಲ 25 ದಿನಗಳಲ್ಲಿ ವೀಕ್ಷಿಸಿದ್ದಾರೆ. ಇದು ಹೊಂಬಾಳೆ ನಿರ್ಮಸಿದ ಸಿನಿಮಾಗಳಲ್ಲೇ ಅತೀ ಹೆಚ್ಚು ಜನರು ವೀಕ್ಷಿಸಿದ ಸಿನಿಮಾ. 'ಕಾಂತಾರ' ಕ್ರೇಜ್ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ವೀಕ್ಷಕರ ಸಂಖ್ಯೆ ಒಂದು ಕೋಟಿ ಆಗುವ ಸಾಧ್ಯತೆಯದೆ. ಇದೂ ಕೂಡ ಹೊಸ ದಾಖಲೆ ಎನ್ನಬಹುದು.

  English summary
  Rishab Shetty's Kantara is Most Viewed Movie Of Hombale Films In Karnataka, Know More.
  Monday, October 24, 2022, 18:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X