"ಕಾಂತಾರದ ಅಪ್ಪನಂತಹ ಸಿನಿಮಾ ಮಾಡಿದರೂ ನಾನು ಕಿಚ್ಚ ಸುದೀಪ್ ಅಭಿಮಾನಿ"; ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅನ್ನೋ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಇದನ್ನು ಇತ್ತೀಚೆಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ರಿಷಬ್ ಶೆಟ್ಟಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ ಮಾತು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ಯಾರಿಗಾದರೂ ಸ್ಟಾರ್ ಪಟ್ಟ ಬಂದು ಬಿಟ್ಟಿರೆ ಅವರು ಬೇರೆ ನಟರೊಂದಿಗೆ ಅಂತರವನ್ನು ಕಾಯ್ಡುಕೊಳ್ಳುತ್ತಾರೆ. ಇದು ಸಹಜವಾಗಿ ಎಲ್ಲಾ ಚಿತ್ರರಂಗದಲ್ಲಿ ಕೇಳಿ ಬರುವ ಮಾತು. ಹಾಗೇ ಕನ್ನಡ ಚಿತ್ರರಂಗದಲ್ಲೂ ಸ್ಟಾರ್ ನಟರು ಅವರವರ ಕೆಲಸವನ್ನು ಅವರು ಮಾಡಿಕೊಂಡಿದ್ದಾರೆ. ಬೇರೆಯವರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಹಲವರ ಆರೋಪ. ಅದರಂತೆಯೇ ಕೆಲ ನಟರು ನಡೆದುಕೊಳ್ಳುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿ ವಿಚಾರನೇ ಬೇರೆ.

Rishab Shetty says if he got more than Kantara success he remains a fanboy for Kichcha Sudeep

ರಿಷಬ್ ಶೆಟ್ಟಿ 'ಕಾಂತಾರ'ದಂತಹ ಮೆಗಾ ಹಿಟ್ ಕೊಟ್ಟು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೂ, ಕಿಚ್ಚ ಸುದೀಪ್ ತಮ್ಮ ನೆಚ್ಚಿನ ನಟ ಅನ್ನೋದನ್ನು ಮರೆತಿಲ್ಲ. ಅದೇ ಸೂಪರ್ ಸ್ಟಾರ್ ನಟನ ಅಭಿಮಾನಿಯಾಗಿಯೇ ಉಳಿದುಕೊಂಡಿದ್ದಾರೆ. ಈ ಮಾತನ್ನು ಇತ್ತೀಚೆಗೆ ನೀಡಿದ ಯೂಟ್ಯೂಬ್ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಆ ವಿಡಿಯೋವನ್ನು ಕಿಚ್ಚನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ರಿಷಬ್ ಶೆಟ್ಟಿ ಈಗ 'ಲಾಫಿಂಗ್ ಬುದ್ಧ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೇ ರಿಷಬ್ ಶೆಟ್ಟಿಯೇ ಬೆಂಬಲವಾಗಿ ನಿಂತಿದ್ದಾರೆ. ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದೇ ಆಗಸ್ಟ್ 30ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಖಡಕ್ ಸಿನಿಮಾ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು. ಈ ವೇಳೆ ಕಿಚ್ಚ ಸುದೀಪ್ ಜೊತೆಗಿದ್ದ ಫೋಟೋ ಬಗ್ಗೆ ಹೇಳುವಾಗ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

"ನಾನು ಬೆಂಗಳೂರಿಗೆ ಬಂದಾಗ ನನ್ನ ಫೇವರಿಟ್ ಹೀರೋ. ನಾನು ಸುದೀಪ್ ಸರ್ ಅವರ ದೊಡ್ಡ ಅಭಿಮಾನಿ. ಇದು ಕಾಂತಾರ ಆದ್ಮೇಲೆ ಅವರ ಹುಟ್ಟುಹಬ್ಬದಲ್ಲಿ ಸಿಕ್ಕಿದಾಗ ಪ್ರಿಯಾ ಮೇಡಂ, ನಾನು ಪ್ರಗತಿ ಎಲ್ಲರೂ ಸರ್ ಜೊತೆ ತೆಗೆದುಕೊಂಡಿರುವಂತಹ ಒಂದು ಫೋಟೋ. " ಎಂದು ರಿಷಬ್ ಶೆಟ್ಟಿ ಫೋಟೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆ ದಿನ ಕಿಚ್ಚ ಸುದೀಪ್ ಬರ್ತ್‌ಡೇಯಲ್ಲಿ ದ್ಯಾನಿಶ್ ಸೇಠ್ ನಿರೂಪಣೆ ಮಾಡುತ್ತಿದ್ದರು. ಆ ವೇಳೆ ರಿಷಬ್ ಶೆಟ್ಟಿಗೆ ದ್ಯಾನಿಶ್ 'ಕಾಂತಾರ' ಬಿಲ್ಡಪ್ ಎಲ್ಲಾ ಕೊಟ್ಟು ಪ್ರಶ್ನೆಯನ್ನು ಕೇಳಿದ್ದರು. ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಎಂದೆಂದಿಗೂ ನಾನು ಕಿಚ್ಚ ಸುದೀಪ್ ಅಭಿಮಾನಿಯಾಗಿರುತ್ತೇನೆ ಎಂದು ಹೇಳಿದ್ದರು. ಆ ಘಳಿಗೆಯನ್ನು ಈ ಯೂಟ್ಯೂಬ್ ಸಂದರ್ಶನದಲ್ಲಿ ರೀಕಾಲ್ ಮಾಡಿಕೊಂಡಿದ್ದಾರೆ.

"ಆ ದಿನ ಸುದೀಪ್ ಸರ್ ಬರ್ತ್‌ಡೇಯನ್ನು ದ್ಯಾನಿಶ್ ಸೇಠ್ ಹೋಸ್ಟ್ ಮಾಡುತ್ತಿದ್ದರು. ನನಗೆ ಆಗೊಂದು ಪ್ರಶ್ನೆ ಕೇಳಿದ್ದರು. ಪ್ಯಾನ್ ಇಂಡಿಯಾ, 400 ಕೋಟಿ ಹೀಗೆ ಬಿಲ್ಡಪ್ ಎಲ್ಲಾ ಕೊಟ್ಟರು. ನನಗೆ ಅಲ್ಲಿ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಈಗ ನೀವು ಏನೆಲ್ಲ ಹೇಳಿದ್ರಿ, ಇದರ ಅಪ್ಪನಷ್ಟು ಆದರೂ ಕೂಡ ಯಾವತ್ತೂ ಸುದೀಪ್ ಸರ್ ಫ್ಯಾನ್ ಬಾಯ್ ಆಗಿಯೇ ಇರುತ್ತೇನೆ ಅಂತ ಹೇಳಿದ್ದೆ. ಸೋ ಯಾವಾಗಲೂ ನಾನು ಅವರಿಗೆ ಅಭಿಮಾನಿಯಾಗಿರುತ್ತೇನೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

More from Filmibeat

English summary
Rishab Shetty he is always fan of Kichcha Sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X