ದಸರಾ ಹಬ್ಬದಲ್ಲಿ ಕಾಡ್ಗಿಚ್ಚಿನ ಬಯಲಾಟ: ರಿಷಬ್ ಶೆಟ್ಟಿಯ 'ಕಾಂತಾರ'

ಹೊಂಬಾಳೆ ಫಿಲ್ಮ್ಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗೆ ಚಾಲನೆ ನೀಡಿದೆ. ಒಂದ್ಕಡೆ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಸಿದ್ಧತೆ ನಡೆಸುತ್ತಿದ್ದರೆ, ಇನ್ನೊಂದು ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗಿದ್ದವು. ಹೀಗೆ ಘೋಷಣೆಯಾದ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ ಕೂಡ ಒಂದು. ಅದುವೇ 'ಕಾಂತಾರ'.

'ಕಾಂತಾರ' ಸಿನಿಮಾ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು. 'ಕೆಜಿಎಫ್ 2' ಜೊತೆ ಬಿಡುಗಡೆಯಾಗಿದ್ದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೋಸ್ಟರ್‌ನಿಂದ ಗಮನ ಸೆಳೆದಿದ್ದ ರಿಷಬ್ ಶೆಟ್ಟಿ, ಟೀಸರ್‌ನಿಂದಲೂ ಗೆದ್ದು ಬೀಗಿದ್ದರು. ಈಗ ಹೊಂಬಾಳೆ ಫಿಲ್ಮ್ಸ್ 'ಕಾಂತಾರ' ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಈ ಮೂಲಕ ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಹಾಗಿದ್ದರೆ, 'ಕಾಂತಾರ' ರಿಲೀಸ್ ಯಾವಾಗ? ಸಿನಿಮಾದ ಹೈಲೈಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕಾಡು- ಕಂಬಳ ಯಾವುದು ಕಥೆ ?

ಕಾಡು- ಕಂಬಳ ಯಾವುದು ಕಥೆ ?

ರಿಷಬ್ ಶೆಟ್ಟಿ ಮತ್ತೊಂದು ಕರಾವಳಿಯ ಕಥೆಯನ್ನು ಹೊತ್ತು ಬಂದಿದ್ದಾರೆ. ಮೇಲ್ನೋಟಕ್ಕೆ ಇದು ಕಂಬಳದ ಸುತ್ತಮುತ್ತ ನಡೆಯುವ ಕಥೆ ಎಂದು ಹೇಳಲಾಗುತ್ತಿದೆ. ಆದರೆ, ಸಿನಿಮಾ ಟೈಟಲ್ ಬೇರೆನೇ ಹೇಳುತ್ತಿದೆ. ಇತ್ತ ಸಿನಿಮಾ ತಂಡ ಕೂಡ " ದಸರಾದ ಜೊತೆಗೆ ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ ಸೆಪ್ಟೆಂಬರ್ 30ರಂದು ಕಾಂತಾರ ಅನಾವರಣ" ಎನ್ನುತ್ತಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಈ ಕಾರಣಕ್ಕೆ ಕಾಡಿನ ಕಥೆನಾ? ಕಂಬಳದ ಕಥೆನಾ ಅನ್ನುವ ಕುತೂಹಲವಂತೂ ಇದ್ದೇ ಇದೆ.

ದಸರಾಗೆ 'ಕಾಂತಾರ' ರಿಲೀಸ್

ಹೌದು, ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್‌ಗಾಗಿ ನಿರ್ದೇಶಿಸಿ, ನಟಿಸಿರುವ ಸಿನಿಮಾ 'ಕಾಂತಾರ'. ಈ ಸಿನಿಮಾ ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ ಮೂವತ್ತರಂದು ದಸರಾ ಹಬ್ಬಕ್ಕೆ ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ಸಿನಿಮಾ ನೋಡುವಂತಹ ಕಥೆಯನ್ನು ಹೊತ್ತು ಚಿತ್ರಮಂದಿರಕ್ಕೆ ಬರಲಿದೆ. ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿರುವುದರಿಂದ ಸಿನಿಮಾ ನೋಡಲು ಸಿನಿಪ್ರೇಮಿಗಳು ಕಾತುರದಿಂದ ಕಾದು ಕೂತಿದ್ದಾರೆ.

ಲಾಕ್‌ಡೌನ್ 'ಕಾಂತಾರ'

ಲಾಕ್‌ಡೌನ್ 'ಕಾಂತಾರ'

ರಿಷಬ್ ಶೆಟ್ಟಿಗೆ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಸಿಕ್ಕಿದೆ. ಅವರೇ ನಟಿಸಿದ 'ಗರುಡ ಗಮನ ವೃಷಭ ವಾಹನ' ಸಿನಿಪ್ರೇಮಿಗಳ ಮೆಚ್ಚುಗೆ ಗಳಿಸಿದೆ. ಇದರ ಹಿಂದೆನೇ 'ಕಾಂತಾರ' ಸಿನಿಮಾದ ಟೀಸರ್‌ಗೂ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾ ಬಗ್ಗೆ ದಿನದಿಂದ ಕುತೂಹಲ ದುಪ್ಪಟ್ಟಾಗಿದೆ. ಅಂದ್ಹಾಗೆ 'ಕಾಂತಾರ' ಸಿನಿಮಾದ ಕಥೆಯನ್ನು ಲಾಕ್‌ಡೌನ್‌ನಲ್ಲಿ ಹೆಣೆಯಲಾಗಿದೆ. ಈ ಕಥೆ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರ್‌ಗೆ ಇಷ್ಟ ಆಗಿದ್ದರಿಂದ ಸಿನಿಮಾ ಸೆಟ್ಟೇರಿತ್ತು. ಈಗ 'ಕಾಂತಾರ' ಬಹುತೇಕ ಮುಗಿದಿದ್ದು, ಬಿಡುಗಡೆಯ ಡೇಟ್ ಕೂಡ ಅನೌನ್ಸ್ ಆಗಿದೆ.

ರಿಷಬ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾ

ರಿಷಬ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾ

'ಕಾಂತಾರ' ಸಿನಿಮಾ ಬಳಿಕ ರಿಷಬ್ ಶೆಟ್ಟಿ ಹಲವು ಸಿನಿಮಾಗಳಿಗೆ 'ಹರಿಕಥೆ ಅಲ್ಲ ಗಿರಿಕಥೆ', 'ಬೆಲ್ ಬಾಟಂ 2', 'ಮಹನೀಯರೆ ಮಹಿಳೆಯರೇ', 'ಅಂಟಗೋನಿ ಶೆಟ್ಟಿ', 'ರುದ್ರಪ್ರಯಾಗ್' ಸಿನಿಮಾಗಳು ರಿಷಬ್ ಶೆಟ್ಟಿ ಕೈಯಲ್ಲಿವೆ. ಹೀಗಾಗಿ ರಿಷಬ್ ಫುಲ್ ಬ್ಯುಸಿಯಾಗಿದ್ದು, ನಟನೆ ಜೊತೆಗೆ 'ಕಾಂತಾರ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಾಗೂ ರಿಲೀಸ್‌ನಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
Rishab Shetty Starrer Kannada Movie Kantara Will be Releasing On Dasara Festival, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X