Kantara Chapter 1; "ಕೆಲವು ಕಥೆಗಳನ್ನು ಅನುಭವಿಸಬೇಕು"; 'ಕಾಂತಾರ' ಟ್ರೈಲರ್‌ಗೆ ಟ್ವಿಟರ್‌ನಲ್ಲಿ ಕಮೆಂಟ್ಸ್ ಹೇಗಿದೆ?

ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾ 'ಕಾಂತಾರ ಚಾಪ್ಟರ್ 1'. ಮೂರು ವರ್ಷಗಳ ಹಿಂದೆ 'ಕಾಂತಾರ' ತೆರೆಕಂಡಾಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಬಾಕ್ಸಾಫೀಸ್‌ನಲ್ಲಿ ₹450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮಂದಿಯನ್ನು ಬೆರಗಾಗುವಂತೆ ಮಾಡಿತ್ತು. ಹೀಗಾಗಿ 'ಕಾಂತಾರ' ಪ್ರೀಕ್ವೆಲ್ ಮೇಲೆ ಎಲ್ಲರ ಗಮನವಿತ್ತು. ನಿರೀಕ್ಷೆಯಂತೆಯೇ 'ಕಾಂತಾರ ಚಾಪ್ಟರ್ 1' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1'ಟ್ರೈಲರ್ ನೋಡಿದ ಬಳಿಕ ಟ್ವಿಟರ್‌ (ಎಕ್ಸ್) ಪ್ರತಿಕ್ರಿಯೆ ಏನಿದೆ? ಸಿನಿಪ್ರಿಯರಿಗೆ ಈ ಸಿನಿಮಾದ ಟ್ರೈಲರ್ ಇಷ್ಟ ಆಯ್ತಾ? ಇಲ್ವಾ? ಪರಭಾಷೆಯ ಜನರಿಗೆ ಈ ಸಿನಿಮಾ ಇಷ್ಟ ಆಯ್ತಾ? ಏನಂತ ಕಮೆಂಟ್ ಮಾಡುತ್ತಿದ್ದಾರೆ? ಟ್ರೈಲರ್‌ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆಯೋ? ಇಲ್ಲವೋ? ತಿಳಿಯುವುದಕ್ಕೆ ಮುಂದೆ ಓದಿ.

Rishab Shetty starrer Kantara Chapter 1 trailer twitter review in Kannada

ಕಾಂತಾರ ಮೇಕಿಂಗ್ ಸೂಪರ್

ಕಾಂತಾರ ಚಾಪ್ಟರ್ 1 ಸಿನಿಮಾ ಟ್ರೈಲರ್ ವಿಜ್ಯೂವಲ್ಸ್ ಅದ್ಭುತವಾಗಿದೆ. ಮೇಕಿಂಗ್ ಸಖತ್ ಆಗಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿಂದಿಯಾಗಿದೆ. ರಿಷಬ್ ಶೆಟ್ಟಿಯವರ ಈ ಸಿನಿಮಾ ₹1000 ಕೋಟಿ ದಾಟುವುದು ಪಕ್ಕಾ. ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಮೈಲಿಗಲ್ಲು ಆಗಲಿ" ಎಂದು ಕನ್ನಡಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಕಾಂತಾರಕ್ಕಿಂತ 5 ಪಟ್ಟು ಅದ್ಭುತ

"ಕಾಂತಾರ ಚಾಪ್ಟರ್ 1 ಟ್ರೈಲರ್ ಅದ್ಭುತವಾಗಿದೆ. ಈ ಸಿನಿಮಾ ಭವ್ಯವಾಗಿದ್ದು, ಮನಮುಟ್ಟುಂತಿದೆ. ಬೆರಗುಗೊಳಿಸುವ ದೃಶ್ಯಗಳು, ಕಾಂತಾರಕ್ಕಿಂತ 5 ಪಟ್ಟು ಅದ್ಭುತವಾಗಿದೆ. ನಮ್ಮ ಪ್ರಾದೇಶಿಕ ಸಿನಿಮಾ ಬದಲಾಗುತ್ತಿರುವುದನ್ನು ನೋಡುವುದಕ್ಕೆ ಹೆಮ್ಮೆ ಅನುಸುತ್ತಿದೆ. ಅದ್ಬುತವಾದ ದೃಶ್ಯಗಳು ನೋಡುವುದಕ್ಕೆ ಹೆಮ್ಮೆ. ನಿಜಕ್ಕೂ ಟ್ರೈಲರ್‌ನಲ್ಲಿ ಇರುವ ಕಂಟೆಂಟ್ ಅದ್ಭುತವಾಗಿದೆ.

ಕೆಲವು ಕಥೆಗಳನ್ನು ಅನುಭವಿಸಬೇಕು

ಕಾಂತಾರ ಚಾಪ್ಟರ್ 1 ಟ್ರೈಲರ್ ಅನ್ನು ನೋಡಿ ಟ್ವಿಟರ್‌ನಲ್ಲಿ ಕಮೆಂಟ್‌ಗಳ ಸುರಿಮಳೆಯೇ ಸುರಿದಿದೆ. "ಕೆಲವು ಕಥೆಗಳನ್ನು ಕೇವಲ ಹೇಳುವುದಷ್ಟೇ ಅಲ್ಲ, ಅದನ್ನು ಅನುಭವಿಸಿಬೇಕು. ಕಾಂತಾರ ಹಿಂದಿ ಟ್ರೈಲರ್ ಅನ್ನು ಅನಾವರಣ ಮಾಡುವುದಕ್ಕೆ ಹೆಮ್ಮೆಯಾಗುತ್ತೆ. ಇದರಲ್ಲಿರುವ ಜಾನಪದ, ನಂಬಿಕೆ ಹಾಗೂ ವೈರತ್ವದ ಸಂಘರ್ಷ ಅದ್ಭುತವಾಗಿದೆ" ಎಂದು ಹಿಂದಿಯ ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ.

ರುಕ್ಷ್ಮಿಣಿ ವಸಂತ್ ಸೂಪರ್

'ಕಾಂತಾರ ಚಾಪ್ಟರ್ 1' ಟ್ರೈಲರ್‌ನಲ್ಲಿ ಗಮನ ಸೆಳೆದವರಲ್ಲಿ ನಾಯಕಿ ರುಕ್ಷ್ಮಿಣಿ ವಸಂತ್ ಕೂಡ ಒಬ್ಬರು. ಟ್ವಿಟರ್‌ನಲ್ಲಿ ಸಿನಿಮಾ ಪ್ರಿಯರು ಟ್ರೈಲರ್ ನೋಡಿ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ರುಕ್ಮಿಣಿ ವಸಂತ್ ಲುಕ್ ಅಂಡ್ ಫೀಲ್ ಇಷ್ಟ ಆಗಿದೆ. " "ರುಕ್ಮಿಣಿ ವಸಂತ್ ರಾಣಿಯ ಪ್ರಭಾವಳಿಯನ್ನು ಹೊಂದಿದ್ದಾರೆ. ಈ ನಟಿಯ ಬಲ ಅವರ ಸೌಂದರ್ಯದಷ್ಟೇ ಹೊಳೆಯುತ್ತಿದೆ." ಎಂದು ನೆಟ್ಟಿಗರೊಬ್ಬರು ಫೋಟೋ ಸಮೇತ ಕಮೆಂಟ್ ಮಾಡಿದ್ದಾರೆ.

ಇದು ದೊಡ್ಡ ಸಿನಿಮಾ ಆಗುತ್ತೆ

'ಕಾಂತಾರ ಚಾಪ್ಟರ್ 1'ರ ಬಗ್ಗೆ ಬೇರೆ ಬೇರೆ ಭಾಷೆಯವರು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲಲ್ಲೂ ಮಲಯಾಳಂ ಪ್ರೇಕ್ಷಕರೊಬ್ಬರು ಟ್ರೈಲರ್ ನೋಡಿ ಹೀಗೆ ಕಮೆಂಟ್ ಮಾಡಿದ್ದಾರೆ. "ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಮಾತ್ರ ನೋಡುಗರಿಗೆ ದೊಡ್ಡ ಅನುಭವ ನೀಡಿತ್ತು. ಇದು ಹೀಗಾಗುತ್ತೆ ಎಂದು ನಾನು ಭಾವಿಸಿರಲಿಲ್ಲ. ಕಾಂತಾರ ಚಾಪ್ಟರ್ 1 ದೊಡ್ಡ ಸಿನಿಮಾ ಆಗುತ್ತೆ. ಈ ಸಿನಿಮಾ ಖಂಡಿತವಾಗಿಯೂ 1 ಸಾವಿರ ಕೋಟಿ ಗಳಿಸುವ ಎರಡನೇ ಕನ್ನಡದ ಸಿನಿಮಾ ಆಗುತ್ತೆ" ಎಂದು ಮಲಯಾಳಂ ಭಾಷೆಯಲ್ಲಿಯೇ ಬರೆದು ಹಾಕಿದ್ದಾರೆ.

More from Filmibeat

English summary
Rishab Shetty and Hombale Films movie Kantara Chapter 1 trailer twitter review in Kannada,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X