For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ 'ಕಾಂತಾರ' ಕಲೆಕ್ಷನ್ ₹100 ಕೋಟಿ ದಾಟಲು ಇನ್ನೆಷ್ಟು ಬೇಕು?

  |

  ಸ್ಯಾಂಡಲ್‌ವುಡ್‌ನ ಆಕ್ಷನ್ ಡ್ರಾಮ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಅಬ್ಬರಿ ಬೊಬ್ಬಿರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆ ಎರಡಕ್ಕೂ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಕರ್ನಾಟಕದಲ್ಲೇ 'ಕಾಂತಾರ' ಕಲೆಕ್ಷನ್ ₹100 ಕೋಟಿ ದಾಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

  ಕರ್ನಾಟಕ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಅಬ್ಬರ ನೋಡಿ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 'ಕಾಂತಾರ' ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಡೀ ತಂಡ ಡಬ್ಬಿಂಗ್ ಸಿನಿಮಾ ಬಿಡುಗಡೆ ಬಗ್ಗೆ ಗಮನ ಹರಿಸುತ್ತಿದೆ. ಈ ಬೆನ್ನಲ್ಲೇ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹೊಸ ಲೆಕ್ಕಾಚಾರ ಓಡಾಡುತ್ತಿದೆ.

  'ಕಾಂತಾರ 2' ಬರುತ್ತಾ? ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಕೊಟ್ಟ ಸುಳಿವುಗಳೇನು?'ಕಾಂತಾರ 2' ಬರುತ್ತಾ? ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಕೊಟ್ಟ ಸುಳಿವುಗಳೇನು?

  ರಿಷಬ್ ಶೆಟ್ಟಿ ತೆಲುಗು ಹಾಗೂ ಹಿಂದಿ ಅವತರಣಿಕೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ ಸುಮಾರು 15 ದಿನಗಳಾಗಿದ್ದು, ಇಲ್ಲಿವರೆಗೂ ಸಿನಿಮಾ ಗಳಿಸಿದ್ದೆಷ್ಟು? ಅನ್ನೋ ಲೆಕ್ಕಚಾರ ಹೊರಬಿದ್ದಿದೆ.

  ರಿಷಬ್ ಶೆಟ್ಟಿ ಕೈ ಹಿಡಿದ 'ಕಾಂತಾರ'

  ರಿಷಬ್ ಶೆಟ್ಟಿ ಕೈ ಹಿಡಿದ 'ಕಾಂತಾರ'

  'ಕಾಂತಾರ' ರಿಲೀಸ್ ಆಗಿ 15 ದಿನಗಳಾಗಿವೆ. ಸಿನಿಮಾ ರಿಲೀಸ್ ಆದಲ್ಲಿಂದ 'ಕಾಂತಾರ' ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ದಿನ ಸಿನಿಮಾ ಶೋಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ ಬಗ್ಗೆನೇ ಚರ್ಚೆಯಾಗುತ್ತಿದೆ. 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಲೂಟಿ ಮಾಡುತ್ತೆ ಎಂದು ಭವಿಷ್ಯ ನುಡಿಯಲಾಗಿದೆ. ಟ್ರೇಡ್‌ ಅನಲಿಸ್ಟ್‌ಗಳು ಕರ್ನಾಟಕದ ಗಲ್ಲಾಪಟ್ಟಿಗೆಯಲ್ಲಿ ಗಳಿಸಿದ ಲೆಕ್ಕಾಚಾರವನ್ನೂ ನೀಡಿದ್ದಾರೆ.

  ಕರ್ನಾಟಕದಲ್ಲಿ 'ಕಾಂತಾರ' ಗಳಿಸಿದ್ದೆಷ್ಟು?

  ಕರ್ನಾಟಕದಲ್ಲಿ 'ಕಾಂತಾರ' ಗಳಿಸಿದ್ದೆಷ್ಟು?

  ₹100 ಕೋಟಿ ಕ್ಲಬ್ ಸೇರುತ್ತೆ ಎಂದು ಭವಿಷ್ಯ ನುಡಿದಿರೋ ಟ್ರೇಡ್ ಅನಲಿಸ್ಟ್‌ಗಳು 15 ದಿನಗಳಲ್ಲಿ ಕರ್ನಾಟಕದ ಕೆಲಕ್ಷನ್ ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಟ್ರೇಡ್ ಅನಲಿಸ್ಟ್ ತ್ರಿನಾಥ್ ಡಿಎನ್‌ಎಗೆ ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 70 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಹೀಗೆ ಮುಂದುವರೆದರೆ, ಇನ್ನು ಎರಡು ವಾರಗಳಲ್ಲಿ 100 ಕೋಟಿ ರೂ. ಕೇವಲ ಕರ್ನಾಟಕದಲ್ಲಿ ಕಲೆ ಹಾಕುವುದರಲ್ಲಿ ಅನುಮಾನವೇ ಇಲ್ಲ.

  'ಕಾಂತಾರ' ಟಿಕೆಟ್‌ಗೆ ನಿಂತಿಲ್ಲ ಬೇಡಿಕೆ

  'ಕಾಂತಾರ' ಟಿಕೆಟ್‌ಗೆ ನಿಂತಿಲ್ಲ ಬೇಡಿಕೆ

  ಕರ್ನಾಟಕದಲ್ಲಿ ಈ ಸಿನಿಮಾ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನು ಮನಗಂಡು ಸಿನಿಮಾ ಶೋಗಳನ್ನು ಹೆಚ್ಚಿಸಲಾಗಿದೆ. ಹೀಗಿದ್ದರೂ, ಸಿನಿಮಾ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. 1870ರ ಕಾಲಘಟ್ಟದಿಂದ ಶುರುವಾಗುವ 'ಕಾಂತಾರ' ಕಥೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಕರಾವಳಿ ಭಾಗದ ಭೂತ, ಕೋಲಗಳ ಆಚರಣೆಯನ್ನು ತೆರೆಮೇಲೆ ತರಲಾಗಿತ್ತು. ಭಾರತದ ಎಲ್ಲಾ ಭಾಗದ ಪ್ರೇಕ್ಷಕರನ್ನು ಕುತೂಹಲದಲ್ಲಿ ಮೂಡಿಸಿದೆ.

  ತೆಲುಗು, ತಮಿಳು, ಹಿಂದಿ ರೆಸ್ಪಾನ್ಸ್ ಮೇಲೆ ನಿರ್ಧಾರ!

  ತೆಲುಗು, ತಮಿಳು, ಹಿಂದಿ ರೆಸ್ಪಾನ್ಸ್ ಮೇಲೆ ನಿರ್ಧಾರ!

  'ಕಾಂತಾರ' ಮೌತ್ ಪಬ್ಲಿಸಿಟಿಯಿಂದ ದೇಶಾದ್ಯಂತ ಹೆಬ್ಬಿದೆ. ಈಗಾಗಲೇ 'ಕಾಂತಾರ' ಹಿಂದಿ ವರ್ಷನ್ ರಿಲೀಸ್ ಆಗಿದೆ. ಹಿಂದಿ ಬೆಲ್ಟ್‌ಗಳಲ್ಲಿ ಈ ಸಿನಿಮಾ ಹೇಗೆ ಕಲೆಕ್ಷನ್ ಮಾಡುತ್ತೆ ಅನ್ನೋ ಕುತೂಹಲವಿದೆ. ಹಾಗೇ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗುತ್ತಿದ್ದು, ಇಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕರೆ, ಕನ್ನಡದ ಸಿನಿಮಾವೊಂದು ಮತ್ತೊಂದು ದಾಖಲೆಯನ್ನು ಬರೆಯಬಹುದು. ಸದ್ಯ ಕರ್ನಾಟಕವೊಂದರಲ್ಲೇ 100 ಕೋಟಿ ರೂ. ಕಲೆ ಹಾಕಬಹುದು ಎಂದು ಅಂದಾಜಿಸಲಾಗಿದೆ.

  'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ!'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್‌ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ!

  English summary
  Rishab Shetty Starrer Kantara Closer 100Cr At Box Office Collection In Karnataka, Know More.
  Saturday, October 15, 2022, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X