'ಕಾಂತಾರ' ರೆಸ್ಪಾನ್ಸ್‌ಗೆ ದಂಗಾದ ಹೊಂಬಾಳೆ: 2ನೇ ದಿನವೇ ಶೋಗಳ ಸಂಖ್ಯೆ ಏರಿಕೆ?

ಅಪ್ಪಟ ಕರಾವಳಿ ಭಾಗದ ಸಿನಿಮಾ 'ಕಾಂತಾರ'ಗೆ ಥಿಯೇಟರ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಇಲ್ಲಿಂದ ಎಲ್ಲಿ ನೋಡಿದರೂ 'ಕಾಂತಾರ' ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ.

ರಿಷಬ್ ಶೆಟ್ಟಿ ಕಥೆ, ಚಿತ್ರಕಥೆಗೆ ಸಿನಿಪ್ರಿಯರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಂದೇಶದ ಜೊತೆ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್‌ ಅನ್ನೂ ಇಟ್ಟಿರೋ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ದಿನ ಹೊರರಾಜ್ಯದ ಜೊತೆ ಜೊತೆಗೆ ಕರ್ನಾಟಕದಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲಾಗಿತ್ತು.

'ಕೆಜಿಎಫ್' ಬಳಿಕ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾವನ್ನು ತನ್ನ ಪಟ್ಟಿಗೆ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಹೀಗಾಗಿ ಎರಡನೇ ದಿನವೇ ಸಿನಿಮಾ ಶೋಗಳನ್ನು ಹೆಚ್ಚಳ ಮಾಡಿದೆ. ಈ ಸ್ವತ: ಹೊಂಬಾಳೆ ಸಂಸ್ಥೆಯೇ ಖಚಿತ ಪಡಿಸಿದೆ.

'ಕಾಂತಾರ' ವಿಭಿನ್ನ ಸಿನಿಮಾ

'ಕಾಂತಾರ' ವಿಭಿನ್ನ ಸಿನಿಮಾ

ಸ್ಯಾಂಡಲ್‌ವುಡ್‌ಗೆ 'ಕಾಂತಾರ' ಸಿನಿಮಾ ನಿಜಕ್ಕೂ ವಿಭಿನ್ನ ಪ್ರಯತ್ನ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ವಿಶಿಷ್ಠ ಪ್ರಯತ್ನಕ್ಕೆ ಸ್ಯಾಂಡಲ್‌ವುಡ್‌ ಮುಂದಾಗುತ್ತಿದೆ. ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿರುವಾಗಲೇ 'ಕಾಂತಾರ' ಕನ್ನಡದಲ್ಲಿಯೇ ರಿಲೀಸ್ ಆಗಿದೆ. ಕರಾವಳಿ ಭಾಗದ ಕಥೆಯಾಗಿದ್ದರೂ ಸ್ಟೋರಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. 'ಗರುಡ ಗಮನ ವೃಷಭ ವಾಹನ' ಬಳಿಕ ಮತ್ತೆ ರಿಷಬ್ ಶೆಟ್ಟಿ ಗೆದ್ದು ಬೀಗುತ್ತಿದ್ದಾರೆ.

ಪ್ರೇಕ್ಷಕರ ಪ್ರತಿಕ್ರಿಯೆಗೆ ಹೊಂಬಾಳೆ ದಂಗು

ಪ್ರೇಕ್ಷಕರ ಪ್ರತಿಕ್ರಿಯೆಗೆ ಹೊಂಬಾಳೆ ದಂಗು

ಹೌದು, 'ಕಾಂತಾರ' ಮೌತ್ ಟಾಕ್ ಜೋರಾಗಿದೆ. ಸಿನಿಮಾ ಬಗ್ಗೆ ಇದೂವರೆಗೂ ಎಲ್ಲೂ ನೆಗೆಟಿವ್ ಒಪಿನಿಯನ್ ಎಲ್ಲೂ ಕೇಳೋಕೂ ಸಿಕ್ಕಿಲ್ಲ. ಮೊದಲ ದಿನ ಸಿಕ್ಕಿರೋ ರೆಸ್ಪಾನ್ಸ್ ನೋಡಿ ತಲೆಕೆಡಿಸಿಕೊಂಡಿರೋ ಹೊಂಬಾಳೆ ಫಿಲ್ಸ್ ಸಿನಿಮಾ ಶೋವನ್ನು ಹೆಚ್ಚು ಮಾಡಿದೆ. ಹೊಂಬಾಳೆ ಫಿಲ್ಮ್ಸ್‌ನ ಕಾರ್ತಿಕ್ ಗೌಡ 'ಕಾಂತಾರ' ಶೋವನ್ನು ಹೆಚ್ಚು ಮಾಡಿದ್ದಾಗಿ ಹೇಳಿದ್ದಾರೆ. ಸುಮಾರು 100 ಶೋಗಳನ್ನು ಹೆಚ್ಚಿಸಿರುವುದಾಗಿ ಹೇಳಿದ್ದಾರೆ.

'ಕಾಂತಾರ' ಬಾಕ್ಸಾಫೀಸ್ ಅಬ್ಬರ

'ಕಾಂತಾರ' ಬಾಕ್ಸಾಫೀಸ್ ಅಬ್ಬರ

'ಕಾಂತಾರ' ಬಿಡುಗಡೆಗೂ ಮುನ್ನವೇ ಬೇಜಾನ್ ಸೌಂಡ್ ಮಾಡಿತ್ತು. ಇನ್ನು ರಿಲೀಸ್ ಆಗುತ್ತಿದ್ದಂತೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಈ ಸಿನಿಮಾ ಸುಮಾರು 5 ರಿಂದ 6 ಕೋಟಿ ರೂ. ಕಲೆ ಹಾಕಿತ್ತು. ಎರಡನೇ ದಿನವೂ ಇನ್ನೂ ಹೆಚ್ಚು ಹಣವನ್ನು ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಿದೆ ಎನ್ನಲಾಗಿದೆ. ಹೀಗಾಗಿ ಈ ವಾರದ ಅಂತ್ಯದೊಳಗೆ ಸಿನಿಮಾ ಕಲೆಕ್ಷನ್ ದಾಖಲೆ ಬರೆಯುತ್ತೆ ಎನ್ನಲಾಗಿದೆ.

ರಿಷಬ್ ಶೆಟ್ಟಿಯ ಬೆಸ್ಟ್ ಸಿನಿಮಾ

ರಿಷಬ್ ಶೆಟ್ಟಿಯ ಬೆಸ್ಟ್ ಸಿನಿಮಾ

ರಿಷಬ್ ಶೆಟ್ಟಿ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ 'ಕಾಂತಾರ'. ಇದೂವರೆಗೂ ರಿಷಬ್ ಶೆಟ್ಟಿ ಹೀರೊ ಆಗಿ ನಟಿಸಿದ ಸಿನಿಮಾಗಳಲ್ಲಿಯೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು. ಹೀಗಾಗಿಯೇ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇನ್ನೊಂದು ಪ್ರಭಾಸ್ ಅಂತಹ ಸೂಪರ್‌ಸ್ಟಾರ್ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ 'ಕಾಂತಾರ' ಮುಂದಿನ ದಿನಗಳಲ್ಲಿ ಡಬ್ ಆಗಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ.

More from Filmibeat

English summary
Rishab Shetty Starrer Kantara Kannada Movie 100 Shows Extended, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X