ರಿಷಬ್ ಶೆಟ್ಟಿ 'ಕಾಂತಾರ' 2ನೇ ದಿನದ ಕಲೆಕ್ಷನ್ ಎಷ್ಟು? ಮೂರು ದಿನ ಲೆಕ್ಕಾಚಾರವೇನು?

ಹೊಂಬಾಳೆ ಸಂಸ್ಥೆ ನಿರ್ಮಾಣ ಅಂದಾಗ ಸಿನಿಮಾ ಬಗ್ಗೆ ರಿಲೀಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಆದರೆ ದೊಡ್ಡ ಮಟ್ಟಕ್ಕೆ ರಿಲೀಸ್ ಆಗುತ್ತೆ ಅನ್ನೋದರಲ್ಲಿ ಡೌಟೇ ಇಲ್ಲ. ಅದಕ್ಕೆ ಸಾಕ್ಷಿನೇ 'ಕಾಂತಾರ'.

ನಿರೀಕ್ಷೆಯಂತೆಯೇ 'ಕಾಂತಾರ' ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನವೇ ಸಿನಿಮಾ ಗೆದ್ದು ಬೀಗಿತ್ತು. ಆದರೆ, 'ಕಾಂತಾರ' ಟ್ರೈಲರ್ ಹಾಗೂ ಹಾಡು ಬಿಡುಗಡೆಯಾದಾಗಲೇ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋದು ನಂಬಿಕೆ ಹುಟ್ಟಿತ್ತು. ಇಷ್ಟೊಂದು ಕಾನ್ಫಿಡೆನ್ಸ್ ಇದ್ದರೂ, ಸಿನಿಮಾ ಪ್ಯಾನ್ ಇಂಡಿಯಾ ಯಾಕಾಗಿಲ್ಲ ಅನ್ನೋ ಅಳುಕಂತೂ ಇದ್ದೇ ಇದೆ.

ಮೊದಲ ದಿನ 'ಕಾಂತಾರ'ಗೆ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಎರಡೇ ದಿನವೂ ಹೆಚ್ಚು ಕಡಿಮೆ ಡಬಲ್ ಕಲೆಕ್ಷನ್ ಮಾಡಿದೆ ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ರಿಪೋರ್ಟ್. ಹಾಗಿದ್ದರೆ, ಎರಡನೇ ದಿನ ಗಳಿಸಿದ್ದೆಷ್ಟು? ಈ ವಾರ ಒಟ್ಟು ಎಷ್ಟು ಬ್ಯುಸಿನೆಸ್ ಮಾಡಬಹುದು? ಅನ್ನೋ ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ ಇಲ್ಲಿದೆ.

2ನೇ ದಿನ 'ಕಾಂತಾರ' ಗಳಿಸಿದ್ದೆಷ್ಟು?

2ನೇ ದಿನ 'ಕಾಂತಾರ' ಗಳಿಸಿದ್ದೆಷ್ಟು?

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ'ಗೆ ಮೊದಲ ದಿನಕ್ಕಿಂತ ಡಬಲ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ಸುಮಾರು 100 ಶೋಗಳನ್ನು ಹೆಚ್ಚಿಸಿತ್ತು. ಆ ಎಲ್ಲಾ ಲೆಕ್ಕಾಚಾರವನ್ನು ಇಟ್ಟುಕೊಂಡು ಎರಡನೇ ದಿನ ಗಳಿಕೆ 6.50 ಕೋಟಿ ರೂ. ಕಲೆಕ್ಷನ್ ಮಾಡಿರಬಹುದು ಎನ್ನಲಾಗಿದೆ. ಮೊದಲ ದಿನ ಇದೇ ಸಿನಿಮಾ ಸುಮಾರು 4 ಕೋಟಿ ರೂ. ಗಳಿಕೆ ಕಂಡಿತ್ತು ಎಂದು ಹೇಳಾಗಿದೆ. ಹೀಗಾಗಿ ಒಟ್ಟು ಎರಡು ದಿನದ ಕಲೆಕ್ಷನ್ 10.50 ಕೋಟಿ ರೂ. ಎನ್ನುತ್ತಿದ್ದಾರೆ ಟ್ರೇಡ್ ಅನಲಿಸ್ಟ್.

'ಕಾಂತಾರ' ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ?

'ಕಾಂತಾರ' ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ?

'ಕಾಂತಾರ' ಕರಾವಳಿ ಭಾಗದ ಕಥೆಯಾಗಿರೋದ್ರಿಂದ ಎಲ್ಲಾ ಭಾಗಗಳಲ್ಲೂ ಈ ಸಿನಿಮಾ ಕೆನೆಕ್ಟ್ ಆಗಿರೋ ಸಾಧ್ಯತೆ ಕಮ್ಮಿಯಿದೆ. ಈ ಸಿನಿಮಾ ಬಹುತೇಕ ಜಿಲ್ಲೆಗಳಲ್ಲಿ ಶೇ.50ಕ್ಕೂ ಅಧಿಕ ಕಲೆಕ್ಷನ್ ಆಗಿದೆ. ಆದರೆ, ಕುಂದಾಪುರ, ಮಣಿಪಾಲ್, ಶಿವಮೊಗ್ಗ, ಬೆಂಗಳೂರು ಭಾಗಗಳಲ್ಲಿ ಶೇ.80ಕ್ಕಿಂತಲೂ ಅಧಿಕ ಆಕ್ಯೂಪೆನ್ಸಿ ಇದೆ ಅನ್ನೋದು ವಿತರಕರ ವಲಯದಿಂದ ಕೇಳಿ ಬಂದಿರೋ ಸುದ್ದಿ. ಹೀಗಾಗಿ ಇನ್ನೂ ಸಿನಿಮಾ ಮೌತ್ ಪಬ್ಲಿಸಿಟಿ ಉಳಿದ ಬೇರೆ ಬೇರೆ ಜಿಲ್ಲೆಗಳಲ್ಲೂ ಆದರೆ, ಕಲೆಕ್ಷನ್ ದುಪ್ಪಟ್ಟಾಗುವ ಸಾಧ್ಯತೆಯಿದೆ.

3 ದಿನಗಳಲ್ಲಿ ಕಲೆಕ್ಷನ್ ಎಷ್ಟಾಗಬಹುದು?

3 ದಿನಗಳಲ್ಲಿ ಕಲೆಕ್ಷನ್ ಎಷ್ಟಾಗಬಹುದು?

'ಕಾಂತಾರ' ಮೂರು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಊಹೆ ಈಗಾಗಲೇ ಶುರುವಾಗಿದೆ. ಭಾನುವಾರ ಬೇರೆ ಆಗಿರುವುದರಿಂದ ಇಂದು ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತವೆ ಎಂದೇ ನಿರೀಕ್ಷೆ ಮಾಡಲಾಗಿದೆ. ಇಂದು (ಅಕ್ಟೋಬರ್ 2) 'ಕಾಂತಾರ' ಕಮ್ಮಿ ಅಂದರೂ 7 ರಿಂದ 8 ಕೋಟಿ ರೂ. ಮೋಸವಿಲ್ಲ ಅಂತ ವಿತರಕರ ವಲಯ ಲೆಕ್ಕಾಚಾರ ಹಾಕಿದೆ. ಈ ಅಂದಾಜಿನ ಪ್ರಕಾರ, ಸಿನಿಮಾ ಮೂರು ದಿನಗಳಲ್ಲಿ 15 ಕೋಟಿ ರೂ. ಕಲೆಕ್ಷನ್ ಮಾಡಬಹುದು.

ವಿದೇಶದಲ್ಲೂ ಹೆಚ್ಚಿದ ಬೇಡಿಕೆ

ವಿದೇಶದಲ್ಲೂ ಹೆಚ್ಚಿದ ಬೇಡಿಕೆ

ಹೊಂಬಾಳೆ ಫಿಲ್ಮ್ಸ್ ಹಾಗೂ 'ಕಾಂತಾರ' ಚಿತ್ರತಂಡ ಎರಡನೇ ದಿನವೇ ಸಕ್ಸಸ್ ಮೀಟ್ ಮಾಡಿದೆ. ಇಲ್ಲಿ ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ವಿದೇಶದಲ್ಲಿ ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಮೆರಿಕಾದ ಕ್ಯಾಲಿಪೋರ್ನಿಯಾದ ಚಿತ್ರಮಂದಿರದಲ್ಲಿ 'ಕಾಂತಾರ' ಶೋಗಳು ಹೆಚ್ಚಾಗಿವೆ. ಹೀಗೆ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ಕಲೆಕ್ಷನ್ ಜೋರಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

More from Filmibeat

English summary
Rishab Shetty Starrer Kantara Kannada Movie Worldwide Box Office Collection Day 2, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X