ಎಲ್ಲರ ಬಾಯಲ್ಲೂ 'ಕಾಂತಾರ': ಮೂರು ದಿನ ಈ ಸಿನಿಮಾ ದೋಚಿದ್ದೆಷ್ಟು?
ಸ್ಯಾಂಡಲ್‌ವುಡ್‌ನಲ್ಲಿ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ಈ ಬಾರಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡದೇ ಹೋದರೂ, ಕಳೆದ ಮೂರು ದಿನಗಳೂ ಸದ್ದು ಮಾಡುತ್ತಿದೆ.
ದಿನದಿಂದ ದಿನಕ್ಕೆ 'ಕಾಂತಾರ' ಸಿನಿಮಾ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಕಳೆದ ಮೂರು ದಿನಗಳಲ್ಲಿ ಪ್ರತಿದಿನ ಕಲೆಕ್ಷನ್ ಹೆಚ್ಚಾಗಿದೆ. ಓವರ್‌ಸೀಸ್‌ನಲ್ಲೂ ಸಿನಿಮಾ ಬಿಡುಗಡೆದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.
ಇನ್ನು ದಸರಾ ಸಂಭ್ರಮ ಈ ವಾರ ಪೂರ್ತಿ 'ಕಾಂತಾರ' ಸಿನಿಮಾ ಅಡ್ವಾಂಟೇಜ್ ಆಗಲಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಬಹುದು. ಸದ್ಯ ಬಿಡುಗಡೆಯಾದಲ್ಲಿಂದ ಈ ಸಿನಿಮಾದ ಕಲೆಕ್ಷನ್ ಏರಿಕೆಯಾಗುತ್ತಲೇ ಇದೆ.

'ಕಾಂತಾರ' 3ನೇ ದಿನದ ಕಲೆಕ್ಷನ್ ಎಷ್ಟು?
ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನ ಎರಡಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆಯಾದ ಮೂರನೇ ದಿನವೂ ಕಲೆಕ್ಷನ್ ಭರ್ಜರಿಯಾಗಿದೆ. ಅದರಲ್ಲೂ ಭಾನುವಾರ (ಅಕ್ಟೋಬರ್ 2) ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಹೀಗಾಗಿ ಬಿಡುಗಡೆಯಾದ ಮೂರು ದಿನಗಳಲ್ಲಿ 'ಕಾಂತಾರ' 3ನೇ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಕಲೆಕ್ಷನ್ ವಿಚಾರದಲ್ಲಿ ಶೇ. 75ರಷ್ಟು ಏರಿಕೆಯಾಗಿದೆ. ಅಂದ್ಹಾಗೆ ಭಾನುವಾರ ಸುಮಾರು 8 ಕೋಟಿ ರೂ. ಗಳಿಸಿರಬಹುದೆಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಮಾಡಿದ್ದಾರೆ.

ವೀಕೆಂಡ್ 'ಕಾಂತಾರ' ಗಳಿಸಿದ್ದೆಷ್ಟು?
'ಕಾಂತಾರ' ಬಿಡುಗಡೆಯಾದಲ್ಲಿಂದ ರಿಪೋರ್ಟ್ ಚೆನ್ನಾಗಿದೆ. ಸಿನಿಮಾಗೆ ಸೂಪರ್ ಮೌತ್ ಟಾಕ್ ಸಿಕ್ಕಿರೋದ್ರಿಂದ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆಯನ್ನೇ ಬೆಳೆದಿದೆ. ಎರಡನೇ ದಿನಕ್ಕೆ ಹೋಲಿಸಿದರೆ ಮೊದಲ ದಿನ ಥಿಯೇಟರ್‌ಗಳ ಸಂಖ್ಯೆ ಕಡಿಮೆ ಇತ್ತು. ಆದರೂ, 4 ಕೋಟಿ ರೂ. ಆಸುಪಾಸಿನಲ್ಲಿ ಕಲೆಕ್ಷನ್ ಆಗಿತ್ತು. ಹಾಗೇ ಎರಡನೇ ದಿನ 6.50 ಕೋಟಿ ರೂ. ಹಾಗೂ ಮೂರನೇ ದಿನ 8 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುತ್ತಿದೆ ವಿತರಕರ ವಲಯ. ಈ ಮೂಲಕ ವೀಕೆಂಡ್‌ನಲ್ಲಿ ಸಿನಿಮಾ 18.50 ಕೋಟಿ ರೂ. ಕಲೆಕ್ಷನ್ ಮಾಡಿರಬಹುದು ಎನ್ನಲಾಗಿದೆ.

'ಕಾಂತಾರ'ಗೆ ದಸರಾ ಬಂಪರ್
ದಸರಾ ಹಬ್ಬದ ಸಂಭ್ರಮದಲ್ಲಿ 'ಕಾಂತಾರ' ಕಲೆಕ್ಷನ್ ಇನ್ನೂ ಹೆಚ್ಚಾಗಬಹುದು ಎನ್ನುವ ನಿರೀಕ್ಷೆಯಿದೆ. ಎರಡನೇ ವಾರದ ಆರಂಭದಲ್ಲಿ ಸಿನಿಮಾ ಕಲೆಕ್ಷನ್ ಅದೇ ವೇಗವನ್ನು ಮುಂದುವರೆಸಿದೆ. ಸೋಮವಾರ ಬಿಟ್ಟರೆ, ಮಂಗಳವಾರ (ಅಕ್ಟೋಬರ್ 04) ಮತ್ತೆ ಎರಡು ದಿನ ಬ್ಯಾಕ್ ಟು ಬ್ಯಾಕ್ ರಜೆಗಳಿವೆ. ಈ ಸಿನಿಮಾಗಳಲ್ಲೂ ಸಿನಿಮಾ ಕಲೆಕ್ಷನ್ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ವಾರ ಮುಗಿಯುವುದರೊಳಗೆ 'ಕಾಂತಾರ' 50 ಕೋಟಿ ಕ್ಲಬ್ ಸೇರಬಹುದು ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ.

ಜಿಲ್ಲೆಗಳಲ್ಲಿ ಹೇಗಿದೆ 'ಕಾಂತಾರ'?
ಕರಾವಳಿ ಭಾಗದ ಕಥೆ ಹೆಚ್ಚಾಗಿರುವುದರಿಂದ ಬೇರೆ ಬೇರೆ ಭಾಗಗಳಲ್ಲಿ ಕಲೆಕ್ಷನ್ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಶೇ.93 ರಷ್ಟು ಆಕ್ಯೂಪೆನ್ಸಿ ಇದೆ. ಮಂಗಳೂರು ಹಾಗೂ ಮೈಸೂರಿನಲ್ಲಿ ಶೇ.90 ರಿಂದ ಶೇ.88ರಷ್ಟು ಜನ ಥಿಯೇಟರ್ ತುಂಬಿದೆ. ಕುಂದಾಪುರ ಹಾಗೂ ಮಣಿಪಾಲ್‌ನಲ್ಲೂ ಸಿನಿಮಾ ಕಲೆಕ್ಷನ್ ಜೋರಾಗಿದೆ ಎನ್ನಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ 'ಕಾಂತಾರ' ಗಳಿಕೆ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.


Click it and Unblock the Notifications











