100 ಕೋಟಿ ಕ್ಲಬ್‌ಗೆ 'ಕಾಂತಾರ' ಎಂಟ್ರಿ: ಎಲ್ಲೆಲ್ಲಿ ಹೇಗಿದೆ ಬಾಕ್ಸಾಫೀಸ್ ಕಲೆಕ್ಷನ್?

'ಕಾಂತಾರ' ದೇಶದೆಲ್ಲೆಡೆ ಅತ್ಯದ್ಭುತ ಬ್ಯುಸಿನೆಸ್ ಮಾಡುತ್ತಿದೆ. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗದ್ದಲ ಎಬ್ಬಿಸುತ್ತಿದ್ದಂತೆ, ಬಹುಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿತ್ತು. ಅದರಂತೆ 'ಕಾಂತಾರ' ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ.

ಕನ್ನಡ ಅಷ್ಟೆ ಅಲ್ಲ. ಹಿಂದಿ, ತೆಲುಗು, ತಮಿಳಿನಲ್ಲೂ ಸಿನಿಮಾಗೆ ಕ್ರೇಜ್ ಹೆಚ್ಚಾಗಿದೆ. ಬಿಡುಗಡೆಯಾದ ಎರಡು-ಮೂರು ದಿನಗಳಲ್ಲೇ 'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್ ಕೋಟಿ ಕೋಟಿಯಲ್ಲಿ ಲೂಟಿ ಮಾಡುತ್ತಿದೆ.

ಕಳೆದೆರಡು ದಿನಗಳಿಂದಲೇ 'ಕಾಂತಾರ' ಸಿನಿಮಾ ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾದ ಕೆಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಈಗ ಬೇರೆ ಭಾಷೆಯಲ್ಲೂ ರಿಲೀಸ್ ಆಗಿರೋದ್ರಿಂದ ಸಿನಿಮಾ 100 ಕೋಟಿ ಕ್ಲಬ್ ಸೇರಿರೋ ಬಗ್ಗೆ ಟಾಕ್ ಶುರುವಾಗಿತ್ತು. ಆದ್ರೀಗ ಟ್ರೇಡ್ ಅನಲಿಸ್ಟ್‌ಗಳು ಸಿನಿಮಾ 100 ಕೋಟಿ ಕಲೆಕ್ಷನ್ ಆಗಿದೆ ಅಂತ ಸಾರಿ ಸಾರಿ ಹೇಳುತ್ತಿದ್ದಾರೆ.

17ನೇ ದಿನದ ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು?

17ನೇ ದಿನದ ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು?

'ಕಾಂತಾರ' 16ನೇ ದಿನ (ಶನಿವಾರ) ನಾಲ್ಕೂ ಭಾಷೆಗಳಿಂದ ವಿಶ್ವದಾದ್ಯಂತ ಸುಮಾರು 14.75 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ವಿಷಯವನ್ನು ಅಧಿಕೃತವಾಗಿ ಹೊಂಬಾಳೆ ತಿಳಿಸಿದೆ. ಇನ್ನು 17ನೇ ದಿನ (ಭಾನುವಾರ) ಕೂಡ ಭರ್ಜರಿ ಕಲೆಕ್ಷನ್ ಆಗಿದೆ. ಹಿಂದಿ, ತೆಲುಗು ಭಾಷೆಗಳಲ್ಲಿ 'ಕಾಂತಾರ' ಸಿನಿಮಾದ ಗಳಿಕೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಹೀಗಾಗಿ 'ಕಾಂತಾರ' 17ನೇ ದಿನವೂ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ.

ಬಾಕ್ಸಾಫೀಸ್‌ನಲ್ಲಿ 100 ಕೋಟಿ ದೋಚಿದ 'ಕಾಂತಾರ'

ಬಾಕ್ಸಾಫೀಸ್‌ನಲ್ಲಿ 100 ಕೋಟಿ ದೋಚಿದ 'ಕಾಂತಾರ'

ಕೆಲವು ದಿನಗಳ ಹಿಂದೆನೇ ಟ್ರೇಡ್ ಅನಲಿಸ್ಟ್‌ಗಳು 'ಕಾಂತಾರ' ಸಿನಿಮಾ 100 ಕೋಟಿ ಕಲೆಕ್ಷನ್ ಮಾಡುತ್ತೆ ಎಂದು ಭವಿಷ್ಯ ನುಡಿದಿದ್ದರು. ಕೇವಲ ಕರ್ನಾಟಕದಲ್ಲಿಷ್ಟೇ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡುತ್ತಾ ಅನ್ನೋ ಅನುಮಾನವೂ ಮೂಡಿತ್ತು. ಆದ್ರೀಗ 'ಕಾಂತಾರ' 100 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಖಚಿತಪಡಿಸಿದ್ದಾರೆ. ಅಂದ್ಹಾಗೆ ವಿಶ್ವದಾದ್ಯಂತ 113 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದರಲ್ಲಿ ಬಹುತೇಕ ಕರ್ನಾಟಕದ ಪಾಲಿದೆ. ಕೇವಲ ಕರ್ನಾಟಕ ಒಂದರಲ್ಲೇ ಆದ ಕಲೆಕ್ಷನ್ ಎಷ್ಟು ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

'ಕಾಂತಾರ' ತೆಲುಗು ಕಲೆಕ್ಷನ್ ಎಷ್ಟು?

'ಕಾಂತಾರ' ತೆಲುಗು ಕಲೆಕ್ಷನ್ ಎಷ್ಟು?

'ಕಾಂತಾರ' ಕರ್ನಾಟಕದಲ್ಲಿ ಕಲೆಕ್ಷನ್ ಭರ್ಜರಿಯಾಗಿದೆ. ಅದೇ ತೆಲುಗು, ಹಿಂದಿ, ತಮಿಳಿನಲ್ಲಿ ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಅನ್ನೂ ಕುತೂಹಲಕ್ಕೀಗ ತೆರೆಬಿದ್ದಿದೆ. ಕೇವಲ ಎರಡೇ ದಿನಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾ ಕಲೆಹಾಕಿದ್ದು ಬರೋಬ್ಬರಿ 10 ಕೋಟಿ ರೂ. (Gross). ಇನ್ನು ನೆಟ್ ಕಲೆಕ್ಷನ್ ಸುಮಾರು 4.20 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ 'ಕಾಂತಾರ' ತೆಲುಗು ವರ್ಷನ್ ಮತ್ತಷ್ಟು ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ.

ಬಾಲಿವುಡ್‌ನಲ್ಲೂ 'ಕಾಂತಾರ' ಅಬ್ಬರ

ಬಾಲಿವುಡ್‌ನಲ್ಲೂ 'ಕಾಂತಾರ' ಅಬ್ಬರ

ಬಾಲಿವುಡ್‌ನಲ್ಲಿ ಮೊದಲ ದಿನ 'ಕಾಂತಾರ' ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ, ನಿರಂತರ ಪಾಸಿಟಿವ್ ರಿವ್ಯೂ ಬಂದಿದ್ದರಿಂದ ಮುಂದಿನ ಎರಡು ದಿನಗಳಲ್ಲಿ ಕಲೆಕ್ಷನ್ ಜೋರಾಗಿ ಆಗಿದೆ. ಮೊದಲ ದಿನ 1.27 ಕೋಟಿ ರೂ. ಎರಡನೇ ದಿನ 2.75 ಕೋಟಿ ರೂ. ಮೂರನೇ ದಿನ 3.50 ಕೋಟಿ ರೂ. ಗಳಿಸಿದ್ದು, ಒಟ್ಟು 7.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ (ಅಕ್ಟೋಬರ್ 17) ನಿರ್ಣಾಯಕ ಅನಿಸಿದ್ದು, ಈ ದಿನ ಗಳಿಕೆಯಲ್ಲಿ ಮತ್ತಷ್ಟು ಏರಿಕೆ ಕಂಡರೆ, ಸಿನಿಮಾ ಬ್ಲಾಕ್ ಬಸ್ಟರ್ ಆದಂತೆ.

More from Filmibeat

English summary
Rishab Shetty Starrer Kantara Movie Worldwide Box Office Collection 100 Crore, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X