ಯಾರೋ ನೀನು..? ಎಂದವ್ರಿಗೆ ಖಡಕ್ ರೆಸ್ಪಾನ್ಸ್: 'ಜಪಾನ್'.. ಮೇಡ್ ಇನ್ ಇಂಡಿಯಾ ಎಂದ ಕಾರ್ತಿಗೆ ರಿಷಬ್ ಸಾಥ್
ಇಂಡಸ್ಟ್ರಿ ಯಾವುದೇ ಇರಲಿ.. ಸ್ಟಾರ್ ಯಾರೇ ಇರಲಿ.. ಅವರದ್ದು 25ನೇ ಸಿನಿಮಾ ರಿಲೀಸ್‌ಗೆ ಏನಾದರೂ ರೆಡಿಯಾಗಿದ್ದರೆ, ದಿಢೀರನೇ ನಿರೀಕ್ಷೆಗಳು ದುಪ್ಪಟ್ಟಾಗಿ ಬಿಡುತ್ತೆ. ಈಗ ತಮಿಳಿನ ಸ್ಟಾರ್ ನಟ ಕಾರ್ತಿ ಮೇಲೂ ಅದೇ ನಿರೀಕ್ಷೆಯಿದೆ.
ಇತ್ತೀಚೆಗೆ ತೆರೆಕಂಡ 'ಪೊನ್ನಿಯನ್ ಸೆಲ್ವನ್' ಬಳಿಕ ಕಾರ್ತಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಇದೇ ಖುಷಿಯಲ್ಲೇ ಕಾರ್ತಿ 25ನೇ ಸಿನಿಮಾ ಝಲಕ್ ಹೊರಬಿದ್ದಿದೆ. ಅದುವೇ 'ಜಪಾನ್'.

ಕಾರ್ತಿ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಆಗಿರುತ್ತೆ. ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರ್ತಿ ಮೇಲೆ ಸಿನಿಪ್ರಿಯ ನಿರೀಕ್ಷೆನೂ ಅಷ್ಟೇ ಸಹಜ. ಈ ಬೆನ್ನಲ್ಲೇ 25ನೇ ಸಿನಿಮಾನೂ ಪ್ಯಾನ್ ಇಂಡಿಯಾ ಆಗಿರುವುದರಿಂದ 'ಜಪಾನ್'ಗೆ ಕನ್ನಡದ ನಟ ರಿಷಬ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ.
'ಜಪಾನ್'.. ಮೇಡ್ ಇನ್ ಇಂಡಿಯಾ
ತಮಿಳಿನ ಸ್ಟಾರ್ ನಟ ಕಾರ್ತಿಗೆ ಇಂದು (ಮೇ 25) ಹುಟ್ಟುಹಬ್ಬದ ಸಂಭ್ರಮ. 46ನೇ ವರ್ಷಕ್ಕೆ ಕಾಲಿಟ್ಟಿರೋ ನಟನಿಗೆ 'ಜಪಾನ್' ತಂಡ ಸರ್ಪ್ರೈಸ್ ಕೊಟ್ಟಿದೆ. ಸಿನಿಮಾದ ಕ್ಯಾರೆಕ್ಟರ್ ಟೀಸರ್ ಅನ್ನು ರಿಲೀಸ್ ಮಾಡಿದ್ದು, ಕಾರ್ತಿ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.
'ಜಪಾನ್' ಸಿನಿಮಾ ಕಾರ್ತಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಹೀರೊ, ಮತ್ತೊಮ್ಮೆ ಕಾಮಿಡಿಯನ್, ಮಗದೊಮ್ಮೆ ವಿಲನ್ ಆಗಿ ಕಂಡಿದ್ದಾರೆ. ಸ್ಟೈಲಿಶ್ ಲುಕ್.. ಗುಂಗುರು ಕೂದಲಿನಲ್ಲಿ ಎಂಟ್ರಿ ಕೊಟ್ಟಿರೋ ಕಾರ್ತಿ ಹೆಸರು ಈ ಸಿನಿಮಾದಲ್ಲಿ 'ಜಪಾನ್'.. ಆದರೆ, ಮೇಡ್ ಇನ್ ಇಂಡಿಯಾ. ಹೀಗಾಗಿಯೇ ಸಿನಿಮಾ ಟೀಸರ್ ಕಿಕ್ ಕೊಡುತ್ತಿದೆ.
'ಜಪಾನ್'ಗೆ ಕಾರ್ತಿ ಸಾಥ್
'ಜಪಾನ್' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡದಲ್ಲಿ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಅನ್ನು 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. ಗೆಳೆಯ ಕಾರ್ತಿ 25ನೇ ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ 'ಜಪಾನ್' ಕ್ಯಾರೆಕ್ಟರ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಗೆಳೆಯ ಕಾರ್ತಿಗೆ ಶುಭ ಹಾರೈಸಿದ್ದಾರೆ. "ಜಪಾನ್.. ಪ್ರೀತಿಯ ಸ್ನೇಹಿತ ಕಾರ್ತಿಯ 25ನೇ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು. ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ" ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ದೀಪಾವಳಿಗೆ 'ಜಪಾನ್' ರಿಲೀಸ್
'ಜೋಕರ್' ಸಿನಿಮಾ ನಿರ್ದೇಶನ ಮಾಡಿರುವ ರಾಜು ಮುರುಗನ್ 'ಜಪಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಡ್ರೀಮ್ಸ್ ವಾರಿಯರ್ ಫಿಕ್ಚರ್ ಮೂಲಕ ಈ ಸಿನಿಮಾ ನಿರ್ಮಾಣಗೊಂಡಿದೆ. ಕಾರ್ತಿ 25ನೇ ಸಿನಿಮಾ 'ಜಪಾನ್'ನಲ್ಲಿ ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್ ಹಾಸ್ಯನಟನಾಗಿ ಸುನಿಲ್ ಈ ಸಿನಿಮಾದ ಮೂಲಕ ಕಾಲಿಡುಗೆ ಎಂಟ್ರಿ ಕೊಡುತ್ತಿದ್ದಾರೆ.
'ಜಪಾನ್'ಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಟ್ಯೂನ್ ಹಾಕಿದ್ದಾರೆ ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸದ್ಯಕ್ಕಿನ್ನೂ 'ಜಪಾನ್' ಶೂಟಿಂಗ್ ಹಂತದಲ್ಲಿಯೇ ಇದೆ. ಮುಂಬರುವ ದೀಪಾವಳಿಗೆ ಈ ಸಿನಿಮಾವನ್ನು ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.


Click it and Unblock the Notifications











