ಡಿಕೆ ಶಿವಕುಮಾರ್ ಜೊತೆ ರಿಷಬ್ ಶೆಟ್ಟಿ; ಕನಕೋತ್ಸವದಲ್ಲಿ ನಿಮ್ಮ ಋಣ ತೀರಿಸುತ್ತೇನೆ ಎಂದ ಶೆಟ್ಟರು

ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರೂರು ಕನಕಪುರದಲ್ಲಿ 2026ರ ಕನಕೋತ್ಸವ ನಡೆಯುತ್ತಿದೆ. ಡಿಕೆಶಿ ಹಾಗೂ ಡಿಕೆ ಸುರೇಶ್ ಸಹೋದರಿಬ್ಬರು ಸೇರಿಕೊಂಡು ಕನಕೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಿದ್ದಾರೆ. ತಮ್ಮ ಕ್ಷೇತ್ರದ ಜನರನ್ನು ಒಗ್ಗೂಡಿಸುವುದರ ಜೊತೆಗೆ ಪ್ರತಿಭಾ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.

ಪ್ರತಿ ವರ್ಷ ನಡೆಯುವಂತೆ 2026ರ ಆರಂಭದಲ್ಲಿ ಕನಕೋತ್ಸವ ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟರ್‌ಗಳು, ಸ್ಟಾರ್ ನಟ-ನಟಿಯರು ಆಗಮಿಸಿದ್ದರು. ಸುಮಾರು ಐದು ದಿನಗಳ ಕಾಲ ನಡೆದ ಕನಕೋತ್ಸವದಲ್ಲಿ ಸಂಗೀತ ಕಾರ್ಯಕ್ರಮಗಳಿಂದ ರಂಜಿಸಲಾಯಿತು. ಈ ಉತ್ಸವದಲ್ಲಿ ಕನಕಪುರ ಜನತೆ ಉತ್ಸಾಹದಿಂದ ಭಾಗವಹಿಸಿದ್ದರು.

Rishab Shetty with DK Shivakumar in Kanakapura Kanakothsava 2026 said he will continue to do good films

ಐದು ದಿನಗಳ ಕಾಲ ನಡೆಯುವ ಈ ಕನಕೋತ್ಸವದಲ್ಲಿ 'ಕಾಂತಾರ ಚಾಪ್ಟರ್ 1' ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. 'ಕಾಂತಾರ' ಮೆಗಾ ಹಿಟ್ ಆಗುತ್ತಿದ್ದಂತೆ ಸೈಲೆಂಟ್ ಆಗಿದ್ದ ರಿಷಿಬ್ ಶೆಟ್ಟಿ ವೇದಿಕೆ ಕಾಣಿಸಿಕೊಂಡಿದ್ದಾರೆ. ಕನಕೋತ್ಸವದ ಕೊನೆಯ ದಿನ ಗಮನ ಸೆಳೆದರು. 'ಕಾಂತಾರ ಚಾಪ್ಟರ್ 1' ಬಳಿಕ ಸದ್ದಿಲ್ಲದೆ ಮತ್ತೊಂದು ಸಿನಿಮಾಗೆ ಕೈಹಾಕಿದ್ದರ ಸುಳಿವು ಕೂಡ ಸಿಕ್ಕಿದೆ. ಆ ವೇದಿಕೆ ಮೇಲೆ ಏನು ಹೇಳಿದ್ದಾರೆಂದು ನೋಡುವುದಾರೇ,

ಮೊದಲು ಬಂದಿದ್ದೇ ಕನಕೋತ್ಸವಕ್ಕೆ

ರಿಷಬ್ ಶೆಟ್ಟಿಗೆ ಕನಕೋತ್ಸವ ಹೊಸದೇನು ಅಲ್ಲ. 'ಕಾಂತಾರ' ತೆರೆ ಕಂಡಾಗ ಕನಕೋತ್ಸವಕ್ಕೆ ಆಗಮಿಸಿದ್ದರು. ಈಗ 'ಕಾಂತಾರ ಚಾಪ್ಟರ್ 1' ಯಶಸ್ಸು ಕಂಡ ಬಳಿಕ 2ನೇ ಬಾರಿಗೆ ಕನಕೋತ್ಸವಕ್ಕೆ ಆಗಮಿಸುತ್ತಿದ್ದಾರೆ. "ಕನಕೋತ್ಸವದ ಉತ್ಸಾಹ ಗಗನಕ್ಕೆ ತಲುಪಿದೆ. ಮೊದಲ ಬಾರಿ ಕಾಂತಾರ ಮಾಡಿದಾಗ ಡಿಕೆ ಸಾಹೇಬರು ಹಾಗೂ ಸುರೇಶಣ್ಣ ನನಗೆ ಕರೆದಿದ್ದರು. ಆಗ ನಾನು ಸಿನಿಮಾ ಕಾರ್ಯಕ್ರಮ ಅಂತ ಶುರು ಮಾಡಿದಾಗ ಮೊದಲು ಬಂದಿದ್ದೇ ಕನಕೋತ್ಸವಕ್ಕೆ. ಈಗ ಕಾಂತಾರ ಚಾಪ್ಟರ್ 1 ರಿಲೀಸ್ ಆಗಿ ಸಿನಿಮಾವನ್ನು ನೀವು ಗೆಲ್ಲಿಸಿದ್ರಿ. ಅದಾದ್ಮೇಲೆ ಇನ್ನೊಂದು ಕಾರ್ಯಕ್ರಮಕ್ಕೆ ಬರುತ್ತಿರೋದು ಇದೇ ಮೊದಲನೇ ಸಲ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Rishab Shetty with DK Shivakumar in Kanakapura Kanakothsava 2026 said he will continue to do good films

ಜಯ-ವಿಜಯರಂತೆ ಈ ಸಹೋದರರು

ಇದೇ ಕನಕೋತ್ಸವದ ವೇದಿಕೆ ಮೇಲೆ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರನ್ನು ಜಯ-ವಿಜಯರೆಂದು ವರ್ಣಿಸಿದ್ದಾರೆ. "ಇಬ್ಬರು ಸಹೋದರರು ಜಯ-ವಿಜಯರಂತೆ, ಮಾನ್ಯ ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಆಗಬಹುದು. ಡಿಕೆ ಸುರೇಶ್ ಆಗಬಹುದು.. ಒಂದು ಕ್ಷೇತ್ರದಿಂದ ನಾಯಕರು ಬಂದಾಗ ಆ ಊರಿಗೆ ಏನು ಬೇಕು? ಆ ಊರನ್ನು ಮಾದರಿ ಕ್ಷೇತ್ರವನ್ನಾಗಿ ಹೇಗೆ ಮಾಡಬೇಕು ಅಂದರೆ, ಹೀಗೆ ಮಾಡಬೇಕು ಅಂತ ಅಂದುಕೊಳ್ಳುತ್ತೇನೆ. ಕನಕಪುರದಲ್ಲಿ ಕನಕೋತ್ಸವ ಕೇವಲ ಕಾರ್ಯಕ್ರಮವಾಗಿ ಮಾತ್ರ ಕಾಣಿಸುತ್ತಿಲ್ಲ, ಎಷ್ಟೊಂದು ವಿಚಾರ, ಎಷ್ಟೊಂದು ಕಲೆಗೆ, ಕಲಾವಿದರಿಗೆ ಅವಕಾಶ ಇಂತಹ ಸಂದರ್ಭವನ್ನು ಕ್ರಿಯೇಟ್ ಮಾಡಿದ್ದಕ್ಕೆ ನಾನು ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ನಿಮ್ಮ ಋಣ ತೀರಿಸುತ್ತೇನೆ

ಕನಕೋತ್ಸವ ವೇದಿಕೆ ಮೇಲೆ ಜನರ ಋಣ ತೀರಿಸುವುದಕ್ಕೆ ಇನ್ನೂ ಒಳ್ಳೊಳ್ಳೆ ಸಿನಿಮಾ ಮಾಡುತ್ತೇನೆಂದು ಹೇಳಿದ್ದಾರೆ. "ಕಾಂತಾರ ಎರಡೂ ಸಿನಿಮಾವನ್ನು ಯಶಸ್ವಿಗೊಳಿಸಿದ್ದು ನೀವು. ಮೊದಲು ಕನ್ನಡಿಗರು. ಹಾಗಾಗಿ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲುವುದಿಲ್ಲ. ನಿಮ್ಮ ಋಣ ತೀರಿಸುವುದಕ್ಕೆ ಇನ್ನೂ ಒಳ್ಳೊಳ್ಳೆ ಸಿನಿಮಾ ಮಾಡುತ್ತೇನೆ. ಎರಡನೇ ಬಾರಿ ಇಲ್ಲಿಗೆ ಬರುತ್ತಿದ್ದೇನೆ. ಪ್ರತಿ ವರ್ಷನೂ ಇಲ್ಲಿಗೆ ಬರುವಂತಾಗಲಿ. ನಿಮ್ಮೊಂದಿಗೆ ಬರೆಯುವಂತಾಗಲಿ" ಎಂದು ರಿಷಬ್ ಶೆಟ್ಟಿ ಕನಕೋತ್ಸವದ ವೇದಿಕೆ ಮೇಲೆ ಹೇಳಿದ್ದಾರೆ.

More from Filmibeat

English summary
Rishab Shetty with DK Shivakumar in Kanakapura Kanakothsava 2026 said he will continue to do good films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X