Kantara Chapter 1 English: ಇಂಗ್ಲಿಷ್ ಭಾಷೆಯಲ್ಲೂ ಕಾಂತಾರ ಚಾಪ್ಟರ್ 1 ರಿಲೀಸ್: ಯಾವಾಗ? ಎಲ್ಲೆಲ್ಲಿ?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಹೊಂಬಾಳೆ ಫಿಲ್ಮ್ಸ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೊರತು ಪಡಿಸಿ, ಇಂಗ್ಲಿಷ್ ಭಾಷೆಯಲ್ಲೂ ರಿಲೀಸ್ ಮಾಡುವುದಾಗಿ ಹೇಳಿತ್ತು. ಭಾರತದಲ್ಲಿ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದ್ದಂತೆ ಇಂಗ್ಲಿಷ್‌ನಲ್ಲಿ ರಿಲೀಸ್‌ಗೆ ಮುಂದಾಗಿದೆ.
ಮೂರು ವಾರಗಳ ಹಿಂದೆ ರಿಲೀಸ್ ಆಗಿರುವ 'ಕಾಂತಾರ ಚಾಪ್ಟರ್ 1' ದೇಶ-ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈಗ ಇಂಗ್ಲಿಷ್‌ಗೆ ಡಬ್ ಮಾಡಿ ವಿಶ್ವದಾದ್ಯಂತ ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶೀಘ್ರದಲ್ಲೇ ಕನ್ನಡ ಸಿನಿಮಾ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಲಿದೆ.

'ಕಾಂತಾರ ಚಾಪ್ಟರ್ 1' ಈಗಾಗಲೇ ವಿಶ್ವದಾದ್ಯಂತ ₹800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 21ನೇ ದಿನಕ್ಕೆ ಕಾಲಿಟ್ಟಿರುವ ಈ ಸಿನಿಮಾ ಇನ್ನು ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಹೊಸ ಸಾಹಸಕ್ಕೆ ಕೈ ಹಾಕಿದೆ. ಹಾಗಿದ್ದರೆ, 'ಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ರಿಲೀಸ್ ಯಾವಾಗ? ಎಲ್ಲೆಲ್ಲಿ ರಿಲೀಸ್ ಆಗಲಿದೆ? ಇದರ ಹಿಂದಿನ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.
ಇಂಗ್ಲಿಷ್ ಭಾಷೆಯಲ್ಲಿ 'ಕಾಂತಾರ ಚಾಪ್ಟರ್ 1'
ಹೊಂಬಾಳೆ ಫಿಲ್ಮ್ಸ್ 'ಕಾಂತಾರ ಚಾಪ್ಟರ್ 1' ಸಿನಿಮಾ ಮೂಲಕ ಗ್ಲೋಬಲ್ ಅಖಾಡಕ್ಕೆ ಇಳಿಯುತ್ತಿದೆ. ಇದು ಇಂಗ್ಲಿಷ್‌ಗೆ ಡಬ್ ಆಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿರುವ ಮೊದಲ ಭಾರತದ ಸಿನಿಮಾ ಎನಿಸಿಕೊಂಡಿದೆ. ಹೀಗಾಗಿ ಗ್ಲೋಬಲ್ ಮಾರ್ಕೆಟ್‌ನಲ್ಲಿ ಈ ಸಿನಿಮಾಗೆ ಎಷ್ಟರ ಮಟ್ಟಿಗೆ ಪ್ರತಿಕ್ರಿಯೆ ಸಿಗುತ್ತೆ? ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದೆಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
ಯಾವಾಗ ರಿಲೀಸ್ ?
'ಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಭಾರತದಲ್ಲಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಕಂಡ ಬಳಿಕ ನಾಲ್ಕನೇ ವಾರಕ್ಕೆ ಇಂಗ್ಲಿಷ್‌ನಲ್ಲಿ ರಿಲೀಸ್ ಆಗಲಿದೆ. ಇದೇ ಅಕ್ಟೋಬರ್ 31ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಗ್ಲೋಬಲ್ ಲೆವೆಲ್‌ನಲ್ಲಿ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ. ವರ್ಲ್ಡ್‌ವೈಡ್ ಆಡಿಯನ್ಸ್ ರೀಚ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಏನು ಪ್ಲ್ಯಾನ್ ಮಾಡಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕು.

ರನ್ ಟೈಮ್ ಎಷ್ಟು?
ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವಾಗ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದರಲ್ಲೂ ಭಾರತೀಯ ವರ್ಷನ್‌ಗಳಲ್ಲಿ ಹಾಡುಗಳು ಇರುತ್ತವೆ. ಹಾಡುಗಳಿಗೆ ಕತ್ತರಿ ಹಾಕಿ ಸಿನಿಮಾವನ್ನು ಬಿಡುಗಡೆ ಮಾಡಬೇಕಾಗುತ್ತೆ. ಜೊತೆಗೆ ಪ್ರತ್ಯೇಕ ಸೆನ್ಸಾರ್ ಆದಾಗಲೂ ಕೆಲವು ದೃಶ್ಯಗಳಿಗೆ ಕತ್ತರಿ ಬೀಳುತ್ತೆ. ಹೀಗಾಗಿ ರನ್ ಟೈಮ್ 2.14 ಗಂಟೆ ಇದೆಯೆಂದು ಹೇಳಲಾಗಿದೆ.
ಇಂಗ್ಲಿಷ್ ರಿಲೀಸ್ ಲೆಕ್ಕಾಚಾರವೇನು?
'ಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ರಿಲೀಸ್ ಮಾಡುವ ಪ್ಲ್ಯಾನ್ ಮೊದಲೇ ಇತ್ತು. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿತ್ತು. ಇದರ ಹೊರತಾಗಿಯೂ 'ಕಾಂತಾರ 1' ಅನ್ನು ಆಸ್ಕರ್ ಅಂಗಳಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಈ ತಯಾರಿ ಎಂದೂ ಹೇಳಲಾಗುತ್ತಿದೆ. ಇದರೊಂದಿಗೆ ಸಿನಿಮಾ ಕೈ ಹಿಡಿದರೆ, ಇದೂವರೆಗೆ ಭಾರತದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಆಮಿರ್ ಖಾನ್ ನಟಿಸಿದ 'ದಂಗಲ್' ₹2000 ಕೋಟಿಗೂ ಅಧಿಕ ಗಳಿಸಿ ದಾಖಲೆ ಬರೆದಿದೆ. ಇದರ ಜೊತೆಗೆ 'ಪುಷ್ಪ 2', 'ಬಾಹುಬಲಿ 2', 'ಕೆಜಿಎಫ್ 2' ಟಾಪ್ ಲಿಸ್ಟ್‌ನಲ್ಲಿವೆ.


Click it and Unblock the Notifications











