ಬಡ ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಫೌಂಡೇಷನ್ ಸ್ಥಾಪನೆ: ಹುಟ್ಟುಹಬ್ಬದಂದೇ ಒಂದೊಳ್ಳೆ ಕೆಲಸ
ಇಂದು(ಜುಲೈ 7) ರಿಷಬ್ ಶೆಟ್ಟಿಗೆ ಹುಟ್ಟು ಹಬ್ಬದ ಸಂಭ್ರಮ. ಈ ಶುಭ ದಿನದಂದು ಪತ್ನಿ ಪ್ರಗತಿ ಶೆಟ್ಟಿ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಕಾರು, ಬಂಗಲೆ ಅಂತ ಕೊಡದೇ ಸಮಾಜಕ್ಕೆ ಉಪಯೋಗ ಆಗುವಂತಹ ಗಿಫ್ಟ್ ಅನ್ನು ಅಭಿಮಾನಿಗಳ ಮುಂದೇನೆ ನೀಡಿದ್ದಾರೆ.
'ಕಾಂತಾರ' ಸಿನಿಮಾ ಬಳಿಕ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹಾಗೇ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇನ್ನೊಂದು ಕಡೆ ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ನಟನನ್ನು ನೋಡಬೇಕು ಅಂತ ಹಾತೊರೆಯುತ್ತಿದ್ದರು. ಆದರೆ, ಬ್ಯುಸಿ ಇದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.

ಹೀಗಾಗಿ ಒಂದೇ ವೇದಿಕೆ ಮೇಲೆ ಎಲ್ಲವೂ ಅರೇಂಜ್ ಆದಂತೆ ಇತ್ತು. ಹುಟ್ಟುಹಬ್ಬದ ಸೆಲೆಬ್ರೆಷನ್ ಕೂಡ ಆಗಬೇಕು. ಒಂದೊಳ್ಳೆ ಕೆಲಸನೂ ಆಗಬೇಕು. ಎರಡನ್ನೂ ಒಟ್ಟೊಟ್ಟಿಗೆ ಒಂದೇ ವೇದಿಕೆ ನೆರವೇರಿದೆ. ಪತ್ಬಿ ಪ್ರಗತಿ ಶೆಟ್ಟಿ ಕೊಟ್ಟ ವಿಶಿಷ್ಟವಾದ ಉಡುಗೊರೆ ಏನು? ಅದರ ಉದ್ದೇಶವೇನು ಅಂತ ತಿಳಿಯಲು ಮುಂದೆ ಓದಿ.
ಬಡ ಮಕ್ಕಳ ಶಿಕ್ಷಣಕ್ಕೆ ರಿಷಬ್ ಶೆಟ್ಟಿ ಸಾಥ್
ರಿಷಬ್ ಶೆಟ್ಟಿ ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನಿರ್ದೇಶನ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿಕೊಂಡು ಬಂದಿದ್ದಾರೆ. ಇದನ್ನು ನೋಡಿರುವ ಪತ್ನಿ ಪ್ರಗತಿ ಶೆಟ್ಟಿ ಈ ಸಮಾಜ ಮುಖಿ ಕೆಲಸಗಳಿಗಾಗಿ ರಿಷಬ್ ಶೆಟ್ಟಿ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ.

ಈ ಫೌಂಡೇಷನ್ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಪ್ರಗತಿ ಶೆಟ್ಟಿಗೆ ನಟ ಪ್ರಮೋದ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಇಬ್ಬರೂ ಸೇರಿ ರಿಷಬ್ ಶೆಟ್ಟಿ ಆಸೆಯಂತೆಯೇ ಅವರ ಫೌಂಡೇಷನ್ ಮೂಲಕ ಅಸಹಾಯಕ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.
ಮಕ್ಕಳ ಶಿಕ್ಷಣಕ್ಕೆ ಟ್ರಸ್ಟ್ ನಿರ್ಮಾಣ
ರಿಷಬ್ ಶೆಟ್ಟಿ ಸರ್ಕಾರಿ ಶಾಲೆ ಹಾಗೂ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿರುವುದನ್ನು ಮನಗಂಡು, ಪ್ರಗತಿ ಶೆಟ್ಟಿ ಹಾಗೂ ಸ್ನೇಹಿತರು ಫೌಂಡೇಷನ್ ಮೂಲಕ ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ವೇದಿಕೆ ಮೇಲೆ ಟ್ರಸ್ಟ್ ಮಾಡಿದ್ಯಾಕೆ ಅನ್ನೋದನ್ನು ಹೇಳಿದ್ದಾರೆ.
"ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆದಲ್ಲಿಂದ ರಿಷಬ್ ಶೆಟ್ಟಿಯವರು ಸ್ಕೂಲ್‌ಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆಮೇಲೆ ಅಡ್ಮಿಷನ್‌ಗೆ ಬೇಕಾಗಿರೊ ವ್ಯವಸ್ಥೆಗಳನ್ನು ಮಾಡುತ್ತಾ ಬಂದಿದ್ದರು. ತುಂಬಾ ದಿನದಿಂದ ನಾವೊಂದು ಟ್ರಸ್ಟ್ ಮಾಡಬೇಕು. ಆ ಮೂಲಕ ಸಮಾಜಕ್ಕೆ ಏನಾದರೂ ಒಂದು ಕೊಡಬೇಕು. ರಿಷಬ್‌ಗೆ ಇದಕ್ಕಿಂತ ಖುಷಿ ಕೊಡೋದು ಏನಿಲ್ಲ. ಹಾಗೇ ಇದಕ್ಕಿಂತ ಒಳ್ಳೆ ದಿನ ಏನಿಲ್ಲ ಅಂತ. ಎಲ್ಲರೂ ಸೇರಿಕೊಂಡು ಇದನ್ನು ರೆಡಿ ಮಾಡಿದ್ದೀವಿ." ಎಂದು ಪ್ರಗತಿ ಶೆಟ್ಟಿ ಹೇಳಿದ್ದಾರೆ.
ಪ್ರಮೋದ್ ಶೆಟ್ಟಿ ಹೇಳಿದ್ದೇನು?
ರಿಷಬ್ ಶೆಟ್ಟಿ ಫೌಂಡೇಷನ್ ಜೊತೆ ಪ್ರಮೋದ್ ಶೆಟ್ಟಿ ಕೂಡ ಕೈ ಜೋಡಿಸಿದ್ದಾರೆ. ರಿಷಬ್ ಶೆಟ್ಟಿ ಫೌಂಡೇಷನ್ ಮೂಲಕ ಸರ್ಕಾರಿ ಶಾಲೆಗಳ ಏಳಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗಲಿದ್ದಾರೆ. " ಚಿಕಿತ್ಸೆಗೆ ಹಾಗೂ ಬೇರೆ ಬೇರೆ ಕಾರಣಗಳಿಗೆ ನೆರವು ನೀಡುವಂತೆ ಪತ್ರಗಳು ಬರುತ್ತವೆ. ಆದರೆ, ನಮ್ಮ ಉದ್ದೇಶ ಶಿಕ್ಷಣ ಮಾತ್ರ. ಶಿಕ್ಷಣ ವಂಚಿತರಿಗೆ, ಬಡ ಮಕ್ಕಳಿಗೆ, ಬುಡಕಟ್ಟು ಜನರ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬುದೇ ಈ ಫೌಂಡೇಷನ್ ಉದ್ದೇಶ" ಎಂದು ಹೇಳಿದ್ದಾರೆ.
ಇತ್ತ ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್‌ಗೆ ಬ್ಯುಸಿಯಾಗಿದ್ದಾರೆ. ಕಥೆ ಹೆಣೆಯುತ್ತಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಆರಂಭ ಆಗಿದ್ದು, ಆದಷ್ಟು ಬೇಗ ಸಿನಿಮಾ ಶೂಟಿಂಗ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











