ಮಂಗಳೂರಿನ 'ಮಂಗಳಾಪುರಂ'; ರಿಷಿ-ಅಭಿಮನ್ಯು ಕಾಶಿನಾಥ್ ರೇರ್ ಕಾಂಬಿನೇಷನ್

ಸಿನಿಮಾ ಸೋಲುತ್ತೋ ಗೆಲ್ಲುತ್ತೋ ಬೇರೆ ಮಾತು. ಆದರೆ, ಸಾದ ವಿಭಿನ್ನ ಕಂಟೆಂಟ್‌ಗಳ ಮೂಲಕ ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ನಟ ರಿಷಿ. ಅದಕ್ಕೆ 'ಆಪರೇಷನ್ ಅಲಮೇಲಮ್ಮ', ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಕವಲುದಾರಿ' ಸಿನಿಮಾಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಹಾಗಂತ ಇವೆರಡೇ ಸಿನಿಮಾಗಳಲ್ಲ. ಇಂತಹ ಇನ್ನೂ ಹಲವು ಸಿನಿಮಾಗಳು ಇವರ ಲಿಸ್ಟ್‌ನಲ್ಲಿವೆ. ಅದಕ್ಕೀಗ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಅದುವೇ 'ಮಂಗಳಾಪುರಂ'.

'ಮಂಗಳಾಪುರಂ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಪೋಸ್ಟರ್ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯನ್ನು ಹುಟ್ಟಾಕಿದೆ. ಸಿನಿ ಪ್ರಿಯರು ಈ ಟೈಟಲ್ ಹಾಗೂ ರಿಷಿಯ ಲುಕ್‌ ನೋಡಿ ಕಂಗಾಲಾಗಿದ್ದಾರೆ. ಯಾಕಂದ್ರೆ ರಿಷಿಯ ಗೆಟಪ್ ಹಾಗಿದೆ. ಈ ಸಿನಿಮಾವನ್ನು ಮಂಗಳೂರು ಮೂಲದ ನಿರ್ದೇಶಕ ಆಕ್ಷನ್ ಹೇಳುತ್ತಿದ್ದಾರೆ. ಹೀಗಾಗಿ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡುವ ಲಕ್ಷಣಗಳು ಎದ್ದು ಕಾಣುತ್ತಿದೆ.

Rishi Abhimanyu Kashinath Mangalapuram movie

ತುಳು ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ರಂಜಿತ್ ರಾಜ್ ಸುವರ್ಣ 'ಮಂಗಳಾಪುರಂ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ನಿರ್ದೇಶಿಸಿದ ಎರಡು ತುಳು ಸಿನಿಮಾಗಳಾದ 'ಉಮಿಲ್' ಹಾಗೂ 'ದೊಂಬರಾಟ' ಸಿನಿಮಾಗಳು ಸೂಪರ್‌ ಸಕ್ಸಸ್ ಕಂಡಿದ್ದವು. ಆ ಸಿನಿಮಾಗಳು ಯಶಸ್ಸು ಕಂಡ ಬಳಿಕ ಈಗ ರಿಷಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಸಿನಿಮಾದಲ್ಲಿ ಅಭಿಮನ್ಯು ಕಾಶಿನಾಥ್ ಕೂಡ ನಟಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ರಿಷಿ ಹಾಗೂ ಅಭಿಮನ್ಯು ಕಾಶಿನಾಥ್ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್ ಮಟ್ಟಿಗೆ ಇವರಿಬ್ಬರದ್ದೂ ಒಂಥರಾ ರೇರ್ ಕಾಂಬಿನೇಷನ್. ಇಬ್ಬರೂ ಜೊತೆಯಾಗಿ ನಟಿಸಲಿರುವ ಈ ಸಿನಿಮಾ ಇಬ್ಬರ ಗೆಟಪ್‌ಗಳು ಹೇಗಿರುತ್ತವೆ. ಈ ಕಾಂಬಿನೇಷನ್ ಕನ್ನಡ ಚಿತ್ರರಂಗಕ್ಕೆ ಹೊಸ ಟ್ರೆಂಡ್ ಅನ್ನು ಹುಟ್ಟಾಕುವಂತೆ ಮಾಡುತ್ತಾ? ಎನ್ನುವ ಕುತೂಹಲವಂತೂ ಹುಟ್ಟಿಕೊಂಡಿದೆ.

'ಮಂಗಳಾಪುರಂ' ಸಿನಿಮಾ ಕಥೆ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಒಂದು ಊರಿನಲ್ಲಿ ನಡೆಯುವ ಮರ್ಡರ್ ಮಿಸ್ಟ್ರಿಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಈ ಸಿನಿಮಾದಲ್ಲಿ ಕಥೆಯಲ್ಲಿ ನಂಬಿಕೆ - ಮೂಡನಂಬಿಕೆ, ಕೈವಾಡ ಹಾಗೂ ಪವಾಡದಂತಹ ವಿಚಾರಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹೀಗಾಗಿ ಒಂದು ವಿಭಿನ್ನ, ರೋಚಕ ಕತೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

Rishi Abhimanyu Kashinath Mangalapuram movie

ಇನ್ನು 'ಮಂಗಳಾಪುರಂ' ಸಿನಿಮಾವನ್ನು ಕರಾವಳಿ ಭಾಗದವರೇ ನಿರ್ಮಾಣ ಮಾಡುತ್ತಿದ್ದಾರೆ. ವಿದ್ವಾನ್||ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ‌ ರಾಮ್ ಪ್ರಸಾದ್ ಬಂಡವಾಳ ಹೂಡುತ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಕಾಲಿಡುತ್ತಿದ್ದಾರೆ. ಸದ್ಯ ಸಿನಿಮಾ ಝಲಕ್ ಅನ್ನು ಹೊರಬಿಟ್ಟಿದ್ದು, ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟಾಕುವಲ್ಲಿ ಯಶಸ್ವಿಯಾಗಿದೆ.

ಇನ್ನು 'ಮಂಗಳಾಪುರಂ' ಸಿನಿಮಾದ ಫಸ್ಟ್ ಲುಕ್ ಅನ್ನು ರಿವಿಲ್ ಮಾಡಿರೋ ಚಿತ್ರತಂಡ ಜೂನ್ ತಿಂಗಳಿನಲ್ಲಿ ಶೂಟಿಂಗ್ ಅನ್ನು ಆರಂಭ ಮಾಡುತ್ತಿದೆ. ಈ ಸಿನಿಮಾವನ್ನು ಕಾರ್ಕಳ, ತೀರ್ಥಹಳ್ಳಿ‌, ಮಡಿಕೇರಿ, ಬೆಂಗಳೂರು ಸೇರಿದಂತೆ ಹಲವೆಡೆ ಶೂಟಿಂಗ್ ಮಾಡುವುದಕ್ಕೆ ನಿರ್ಧರಿಸಿದೆ. ಅನೂಪ್ ಸಿಳೀನ್ ಈ ಸಿನಿಮಾಗೆ ಸಂಗೀತವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಾಗೇ ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿದ ಖುಷಿಯಲ್ಲಿರುವ ತಂಡ, ಚಿತ್ರೀಕರಣ ಆರಂಭಿಸುವ ತವಕದಲ್ಲಿದೆ.

More from Filmibeat

English summary
Rishi and Abhimanyu Kashinath's starrer Mangalapuram movie first look is stunning .
Read more about: rishi abhimanyu sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X