ಅಪ್ಪು ಜೊತೆ ಶ್ರೀಮುರಳಿ ತೆಗೆಸಿಕೊಂಡ ಕೊನೆ ಫೋಟೊ ನೋಡಿದ್ದೀರಾ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಅವರ ಬರ್ತ್‌ಡೇ ಆಚರಣೆ ಮಾಡುವುದಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ಅಗಲಿದ ನೋವಿನಲ್ಲಿಯೂ ಪವರ್‌ಸ್ಟಾರ್ ಧ್ಯಾನ ನಡೆಯುತ್ತಲೇ ಇದೆ. ಈ ಮಧ್ಯೆ ಅಪ್ಪು ಬಗ್ಗೆ ನೆನೆದು ಮದಗಜ ಶ್ರೀಮುರಳಿ ಭಾವುಕರಾಗಿದ್ದಾರೆ. ಅವರು ತೆಗೆದುಕೊಂಡು ಕೊನೆಯ ಫೋಟೊವನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

Recommended Video

ಭಾನುವಾರ ಎಲ್ಲಾ ಒಟ್ಟಿಗೆ ಊಟಕ್ಕೆ ಸಿಗೋಣ ಅಂತ ಹೇಳಿದ್ರು ಅಪ್ಪು ಮಾಮ | Sri Murali | Puneeth Rajkumar

ಶ್ರೀಮುರಳಿ 'ಮದಗಜ' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಮೊದಲ ಮೂರು ದಿನಗಳ ಗಳಿಕೆ ಭರ್ಜರಿಯಾಗಿ ಆಗಿದೆ. 'ಮದಗಜ' ಸಿನಿಮಾ ಬಗ್ಗೆ ಮಾತಾಡುವಾಗ ಶ್ರೀ ಮುರಳಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ 2014ರ ವರೆಗೂ ಪುನೀತ್ ಜೊತೆ ಹೆಚ್ಚು ಕ್ಲೋಸ್ ಆಗಿರಲಿಲ್ಲವೆಂದು ಹೇಳಿದ್ದಾರೆ. ಅದ್ಯಾಕೆ ಹೀಗಂದ್ರು? 2014ರ ಬಳಿಕ ಕ್ಲೋಸ್ ಆಗಿದ್ದು ಹೇಗೆ? ಆ ಬಳಿಕ ಪುನೀತ್ ಹೇಳುತ್ತಿದ್ದ ಮಾತೇನು ಅನ್ನುವುದನ್ನು ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

ಅಪ್ಪು ಜೊತೆ ಶ್ರೀಮುರಳಿ ಕೊನೆ ಫೋಟೊ

ಅಪ್ಪು ಜೊತೆ ಶ್ರೀಮುರಳಿ ಕೊನೆ ಫೋಟೊ

"ಇದು ಜಿಮ್‌ನಲ್ಲಿ ಮಾಮಾ ತೆಗೆದ ಫೋಟೊ.. ಒಂದು ದಿನ ಮುಂಚೆ ಅಷ್ಟೇ ಈ ಫೋಟೊವನ್ನು ತೆಗೆದಿದ್ದು. ಇದನ್ನು ಯಾರಿಗೂ ತೋರಿಸಿಲ್ಲ. ಪಕ್ಕದಲ್ಲಿ ಇದ್ದವರು ಇಬ್ಬರೂ ಜೊತೆಯಲ್ಲಿ ಇದ್ದೀರಾ. ಒಂದು ಸೆಲ್ಫಿ ತೆಗೆದುಕೊಳ್ಳೋಣ ಎಂದು ಹೇಳಿದ್ದರು. ಆಗ ತೆಗೆದ ಫೋಟೊ ಇದು." ಎಂದು ಶ್ರೀಮುರಳಿ ಫಿಲ್ಮಿ ಬೀಟ್ ಜೊತೆ ಮಾತಾಡುತ್ತಾ ಭಾವುಕರಾಗಿದ್ದಾರೆ.

ಇಷ್ಟು ಬೇಗ ಕರೆಸಿಕೊಳ್ಳುವುದೇನಿತ್ತು?

ಇಷ್ಟು ಬೇಗ ಕರೆಸಿಕೊಳ್ಳುವುದೇನಿತ್ತು?

"ನನಗೆ 39 ವರ್ಷ. ಅವರಿಗೆ 46.. ಅವರನ್ನು ಕರೆಸಿಕೊಳ್ಳುವಂತಹದ್ದನ್ನು ಅವರು ಏನು ಮಾಡಿದ್ದರು. ಇದು ತುಂಬಾ ಕ್ರೂರ. ಮತ್ತೆ ಇಂತಹದ್ದನ್ನು ಯಾರಿಗೂ ಮಾಡಬೇಡ ಅಂತ ಆ ದೇವರಿಗೆ ಹೇಳುತ್ತೇನೆ. ಹಿಂದಿನ ದಿನ ನಾವಿಬ್ಬರು ಜಿಮ್‌ನಲ್ಲಿ ಭೇಟಿಯಾಗಿದ್ದೆವು. ಆ ದಿನ ನಾನು ಜಿಮ್‌ನಲ್ಲಿದ್ದೆ. ಆದರೆ ಅವರು ಮನೆಯಲ್ಲಿ ವರ್ಕ್‌ಔಟ್ ಮಾಡಿದ್ದರು. ಅದೆಲ್ಲಾ ಆದ್ಮೇಲೆ ಇದೆಲ್ಲಾ ನಡೀತಂತೆ." ಎಂದು ಶ್ರೀಮುರಳಿಲ ಕಣ್ಣೀರು ಹಾಕಿದ್ದಾರೆ.

ನಾವಿಬ್ಬರೂ ಕ್ಲೋಸ್ ಆಗಿದ್ದೇ 2014ರ ಬಳಿಕ

ನಾವಿಬ್ಬರೂ ಕ್ಲೋಸ್ ಆಗಿದ್ದೇ 2014ರ ಬಳಿಕ

"ನಮ್ಮ ಸಂಬಂಧಿಕರೆಲ್ಲಾ ಸೇರಿಕೊಂಡು ಫ್ಯಾಮಿಲಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದೆವು. 2014ರಲ್ಲಿ ತುಂಬಾನೇ ಕ್ಲೋಸ್ ಆದೆವು. ಅದಕ್ಕಿಂತ ಮುಂಚೆ ನನಗೆ ಲೈಫ್‌ನಲ್ಲಿ ಸಿಕ್ಕಾಪಟ್ಟೆ ತೊಂದರೆ ಇತ್ತು. ಗ್ಯಾಪ್ ಇತ್ತು ನನಗೂ ಅವರಿಗೂ ಜಾಸ್ತಿ ಸಿಗುವುದಕ್ಕೆ ಆಗುತ್ತಿರಲಿಲ್ಲ. ಆದರೆ ಏನೇ ಆದರೂ ಫೋನ್‌ನಲ್ಲಿ ಟಚ್‌ನಲ್ಲಿ ಇರುತ್ತಿದ್ದೆವು. 2014 ಬಳಿಕ ಈ ಸಿನಿಮಾಗಳೆಲ್ಲಾ ಬಂದಾಗ ಅವರು ನನ್ನ ಜೊತೆಗಿದ್ದಿದ್ದು. ನನ್ನ ಜೊತೆ ಅವರು ಮಾತಾಡುತ್ತಿದ್ದಿದ್ದು, ಯಾರ ಬಗ್ಗೆನೂ ಅವರು ನೆಗೆಟಿವ್ ಆಗಿ ಮಾತಾಡುತ್ತಿರಲಿಲ್ಲ. ಏನೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಬರೀ ಪಾಸಿಟಿವ್ ಆಗಿ ಇರುತ್ತಿದ್ದೆವು. ಆಗ ಯಾವಾಗಲೂ ಅವರು ಅಪ್ಪಿಕೊಂಡು ತಬ್ಬಿಕೊಂಡು ಮಾತಾಡೋರು. ಆ ಗುಣ ತುಂಬಾನೇ ಇಷ್ಟ." ಎಂದು ಶ್ರೀ ಮುರಳಿ ಫಿಲ್ಮಿ ಬೀಟ್‌ಗೆ ಹೇಳಿದ್ದಾರೆ.

ನಾವು ಯಾರಿಗಿಂತಲೂ ದೊಡ್ಡವರಲ್ಲ ಎನ್ನುತ್ತಿದ್ದರು

ನಾವು ಯಾರಿಗಿಂತಲೂ ದೊಡ್ಡವರಲ್ಲ ಎನ್ನುತ್ತಿದ್ದರು

"ನಾವು ಯಾರಿಗಿಂತ ದೊಡ್ಡವರಲ್ಲ ಅನ್ನುವುದನ್ನು ಕಲಿತೆ. ಈಗ ಅದೂ ನಿಜ ಆಗಿ ಹೋಯ್ತಲ್ಲ. ಆ ಟೈಮ್ ಎಲ್ಲದಕ್ಕಿಂತ ದೊಡ್ಡದು. ಇದನ್ನೆಲ್ಲಾ ಹೇಳಿದ್ದು. ಇದೆಲ್ಲಾ ತುಂಬಾ ಡಿಸ್ಟರ್ಬ್ ಆಗುತ್ತೆ. ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ನಾವು ತೋರಿಸಿಕೊಳ್ಳುತ್ತಿರಲಿಲ್ಲ. ಇದೆಲ್ಲ ನಮಗೆ ಬೇಕಾಗಿರಲಿಲ್ಲ. ಒಬ್ಬ ಕಸಿನ್ ಆಗಿ ಇಷ್ಟು ಬೇಗ ಬಿಟ್ಟು ಹೋದರಲ್ಲ ಅಂತ ನೋವಾಗುತ್ತೆ." ಎಂದು ಶ್ರೀಮುರಳಿ ಫಿಲ್ಮಿಬೀಟ್ ಜೊತೆ ಮಾತಾಡುತ್ತಾ ಭಾವುಕರಾಗಿದ್ದರು.

More from Filmibeat

English summary
Roaring star Sri Murali shows his last Selfie with Puneeth Rajkumar in gym. He met in last day before he die and recalls he thoughts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X