ಡಿ ಬಾಸ್ ಎಂದರೆ ಹೇಗೆ? 'ರಾಬರ್ಟ್' ನಾಯಕಿ ಆಶಾ ಭಟ್ ಹೇಳಿದ ಮಾತುಗಳಿವು...
ಭದ್ರಾವತಿ ಮೂಲದವರಾದ ಆಶಾ ಭಟ್ ಮಿಸ್ ಇಂಡಿಯಾ ಸುಪ್ರಾ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡವರು. ಅವರ ಸಿನಿಮಾ ಪಯಣ ಆರಂಭವಾಗಿದ್ದು ಬಾಲಿವುಡ್‌ನ 'ಜಂಗ್ಲೀ' ಚಿತ್ರದ ಮೂಲಕ. ಕನ್ನಡದಲ್ಲಿ ಅವರು 'ರಾಬರ್ಟ್' ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಡಿ ಬಾಸ್ ದರ್ಶನ್‌ಗೆ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
'ರಾಬರ್ಟ್' ಚಿತ್ರದಲ್ಲಿ ಅವಕಾಶ ಸಿಕ್ಕ ಬಳಿಕ ಆಶಾ ಭಟ್ ಜನಪ್ರಿಯತೆ ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕ ಬಳಿಕ ಸ್ಯಾಂಡಲ್ ವುಡ್‌ಗೆ ಬರುವ ನಟಿಯರು ಬಹಳ ಕಡಿಮೆ. ಆದರೆ ಎರಡನೆಯ ಸಿನಿಮಾದಲ್ಲಿಯೇ ಕನ್ನಡಕ್ಕೆ ಬಂದ ಆಶಾ ಭಟ್, ಅಭಿಮಾನಿಗಳಿಗೆ ನಿರೀಕ್ಷೆಗೆ ಅನುಗುಣವಾಗಿ ಪಾತ್ರ ನಿರ್ವಹಿಸಿದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಅವರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ದರ್ಶನ್ ಕುರಿತಾದ ಕೆಲವು ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಡಿ ಬಾಸ್‌ಗೆ ಎಲ್ಲವೂ ಗೊತ್ತಿದೆ
ಡಿ ಬಾಸ್ ಬಗ್ಗೆ ಒಂದು ಪದದಲ್ಲಿ ವಿವರಿಸಿ ಎಂದು ದರ್ಶನ್ ಅಭಿಮಾನಿಯೊಬ್ಬರು ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಕೇಳಿದ್ದರು. ಅದಕ್ಕೆ ಆಶಾ ಭಟ್, ಡಿ ಬಾಸ್ ಅವರು ಆಲ್‌ರೌಂಡರ್. ಅವರಿಗೆ ಯಾವ ವಿಷಯ ಗೊತ್ತಿಲ್ಲ ಎಂದಿಲ್ಲ ಎಂದು ಕೊಂಡಾಡಿದ್ದಾರೆ.

ಏನಾದರೂ ಕೇಳಿ ಹೇಳುತ್ತಾರೆ
ದರ್ಶನ್ ಅವರಿಗೆ ಎಲ್ಲವೂ ಗೊತ್ತು, ಊಟದ ಬಗ್ಗೆ ಇರಬಹುದು, ಟ್ರಾವೆಲ್ ಬಗ್ಗೆ ಇರಬಹುದು, ಪ್ರಾಣಿಗಳ ಬಗ್ಗೆ ಇರಬಹುದು, ಟೆಕ್ನಾಲಜಿ ಬಗ್ಗೆ ಇರಬಹುದು. ನೀವು ಹೆಸರು ಹೇಳಿ, ಅದು ಅವರಿಗೆ ಗೊತ್ತಿರುತ್ತದೆ. ಅದು ನನಗೆ ಫೀಲ್ ಆಗಿದ್ದು. ಹೀ ಈಸ್ ಎ ಜೆಮ್ ಆಫ್ ಎ ಪರ್ಸನ್ ಎಂದು ಆಶಾ ಭಟ್ ಹೇಳಿದ್ದಾರೆ.

ಆಶಾ ಭಟ್ ಫೇವರಿಟ್ ಹೀರೋ ಇವರು
ಮತ್ತೊಬ್ಬ ಅಭಿಮಾನಿ, ನಿಮ್ಮ ಫೇವರಿಟ್ ಹೀರೋ ಯಾರು ಎಂಬ ಪ್ರಶ್ನೆ ಮುಂದಿಟ್ಟರು. ಇದಕ್ಕೆ ಆಶಾ ಭಟ್ ಎರಡು ಉತ್ತರಗಳನ್ನು ಹೇಳಿದರು. ಹಿಂದಿನ ಕಾಲದ ಮತ್ತು ಈಗಿನ ಮೆಚ್ಚಿನ ಹೀರೋ ಯಾರು ಎಂದು ಅವರು ಹೇಳಿದರು.
ಮುಂಚೆಯಿಂದ ಎಂದರೆ ಖಂಡಿತವಾಗಿಯೂ ಡಾ. ರಾಜ್‌ಕುಮಾರ್. ಈಗ ಫೇವರಿಟ್ ಹೀರೋ ಎಂದರೆ ಡಿ ಬಾಸ್ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡಿದರು.

ದರ್ಶನ್ ಜತೆ ಲೈವ್
ಹೀಗೆ ಇನ್‌ಸ್ಟಾಗ್ರಾಂ ಮೂಲಕ ದರ್ಶನ ನೀಡಿದ ರಾಬರ್ಟ್ ನಾಯಕಿಯನ್ನು ಕೆಲವರು, ಡಿ ಬಾಸ್ ಜತೆ ಯಾವಾಗ ಹೀಗೆ ಲೈವ್ ಬರ್ತೀರಿ ಎಂದು ಕೇಳಿದರು. ಅದನ್ನು ಕೇಳಿದಾಗ ಆಶಾ ಭಟ್ ಎಕ್ಸೈಟ್ ಆದರು. ಈ ಬಗ್ಗೆ ನಿಜಕ್ಕೂ ಯೋಜನೆ ಮಾಡಬೇಕು. ಈ ಬಗ್ಗೆ ಏನಾದರೂ ಮಾಡಬೇಕು. ನೋಡೋಣ ಎಂದು ಹೇಳಿದರು.

ಆಶಾ ಭಟ್ ಡೈಲಾಗ್
'ರಾಬರ್ಟ್' ಟೀಸರ್‌ನಲ್ಲಿ ಆರಂಭವಾಗುವ ಮೊದಲ ಡೈಲಾಗ್ ಸಕತ್ ವೈರಲ್ ಆಗಿತ್ತು. 'ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟರೆ ದಶರಥ ರಾಮ, ಪ್ರೀತಿಯಿಂದ ಬಂದರೆ ಜಾನಕಿರಾಮ, ತಿರುಗಿ ಬಿದ್ದರೆ...' ಎಂಬ ಡೈಲಾಗ್ ಹೇಳಿ ರಂಜಿಸಿದರು.

ದರ್ಶನ್‌ರಿಂದ ಕಲಿತಿದ್ದೇನು?
ಡಿ ಬಾಸ್ ಅವರಿಂದ ಏನು ಕಲಿತಿದ್ದೀರಿ? ಎಂಬ ಪ್ರಶ್ನೆಗೆ ಅವರು ಥಟ್ಟನೆ ನೀಡಿದ ಉತ್ತರ ಮಾನವೀಯತೆ. ಅವರು ಸೆಟ್‌ನಲ್ಲಿ ಎಷ್ಟು ಹಂಬಲ್ ಆಗಿರುತ್ತಾರೆ. ಕ್ಯಾಮೆರಾ ಮುಂದೆ ಮತ್ತು ಹಿಂದೆ ಎರಡೂ ಕಡೆ ಬಹಳ ಹಂಬಲ್ ಪರ್ಸನ್. ಎಲ್ಲರೂ ಅದನ್ನು ಕಲಿಯಬೇಕು ಎಂದರು.

ಒಂದು ಮುಂಜಾನೆ, ಹಂಗೆ ಸುಮ್ಮನೆ...
ಡಿ ಬಾಸ್ ಬಗ್ಗೆ ಇಷ್ಟೆಲ್ಲ ವರ್ಣನೆ ನೀಡಿದ ಬಳಿಕ ಆಶಾ ಭಟ್ ಒಂದು ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಅದು ಕೂಡ ದರ್ಶನ್ ಅಭಿನಯದ ಚಿತ್ರದ್ದು. 'ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ, ದಾರಿ ಇದ್ದಷ್ಟು ದೂರ ಹೋಗುವ ಬೇಡ ಎನ್ನೋರು ಯಾರೇ?' ಹಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದರು.


Click it and Unblock the Notifications











