"ಅವರೆಲ್ಲ ಹೊಟ್ಟೆ ತುಂಬಿರೋರು. ನಾವೆಲ್ಲ ಹಸಿದಿರೋರು. ನಮಗೆ ಏನು ಗೊತ್ತಾಗುತ್ತೆ ಸಾರ್"; ಮತ್ತೆ ಉಮಾಪತಿ ಟಾಂಗ್!

'ಕಾಟೇರ' ಟೈಟಲ್‌ನಿಂದ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಕಿತ್ತಾಟ ಈ ಮಟ್ಟಕ್ಕೆ ಹೋಗುತ್ತೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ದರ್ಶನ್ 'ತಗಡು', ' ಗುಮ್ಮಿಸಿಕೊಳ್ತೀಯಾ' ಅಂತ ಬಳಸಿದ ಎರಡು ಪದಗಳಿಗೆ ಉಮಾಪತಿ ನಿರಂತರವಾಗಿ ತಿರುಗೇಟು ಕೊಡುತ್ತಲೇ ಇದ್ದಾರೆ. ಕಳೆದೆರಡು ದಿನಗಳಿಂದ ಕೂಲ್‌ಗಾಗಿ, ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗ ಮತ್ತೊಂದು ಮಾಧ್ಯಮಗಳಿಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಜೊತೆಗಿನ ವಿವಾದದ ಬಳಿಕ ಉಮಾಪತಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಹಾಗೂ ಡಿಕೆ ಶಿವಕುಮಾರ್ ಭೇಟಿ ಕುತೂಹಲ ನೀಡಿತ್ತು. ಆರಂಭದಲ್ಲಿ ವಿವಾದದ ಬಗ್ಗೆನೇ ಚರ್ಚೆ ಮಾಡಲು ಬಂದಿರಬಹುದೇ ಎಂಬ ಅನುಮಾನ ಮೂಡಿದ್ದು ನಿಜ. ಆದರೆ, ಉಮಾಪತಿ ತಮ್ಮ ಕ್ಷೇತ್ರದ ಬಗ್ಗೆ ಮಾತಾಡುವುದಕ್ಕೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 Roberrt Producer Umapathy met DK Shivakumar after controversy with Darshan

ಹಾಗಂತ ಮಾಧ್ಯಮಗಳ ಮುಂದೆ ಮತ್ತೆ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅವರೆಲ್ಲ ಹೊಟ್ಟೆ ತುಂಬಿರೋರು. ನಾವೆಲ್ಲ ಹಸಿದಿರೋರು. ನಮಗೆ ಏನು ಗೊತ್ತಾಗುತ್ತೆ" ಎಂದು ತಿರುಗೇಟು ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ದೊಡ್ಮನೆಗೆ ಒಂದು ಸಿನಿಮಾ ಮಾಡಿ ಅಂತ ಕೆಲವರು ಸಲಹೆ ನೀಡಿದ್ದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಉಮಾಪತಿ ಮತ್ತೆ ದರ್ಶನ್‌ ಬಗ್ಗೆ ಏನಂದ್ರು? ದೊಡ್ಮನೆ ವಿಷಯ ತೆಗೆದಿದ್ದೇಕೆ? ತಿಳಿಯಲು ಮುಂದೆ ಓದಿ.

ದರ್ಶನ್ ತಗಡು ಎಂದು ಕರೆದಾಗ, ಉಮಾಪತಿ "ದೇಹ ತೂಕವಿದ್ದರೆ ಸಾಲದು. ಮಾತಿನಲ್ಲಿ ತೂಕವಿರಬೇಕು" ಎಂದಿದ್ದರು. ಅದನ್ನೇ ಈಗ ಪುನರುಚ್ಚರಿಸಿದ್ದಾರೆ. "ಸರ್ ಈಗ ಸಮಸ್ಯೆಗಳು ಎಲ್ಲಾ ಕಡೆ ಬರುತ್ತವೆ. ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ಹೆಸರು ಇರುವಂತಹ ವ್ಯಕ್ತಿ ತೂಕವಾಗಿ ನಡೆದುಕೊಳ್ಳಬೇಕಾಗುತ್ತೆ. ನಾನು ಹಿಂದೇನೆ ಹೇಳಿದ್ದೆ, ದೇಹ ತೂಕವಿದ್ದರೆ ಸಾಲದು ಮಾತು ತೂಕವಿರಬೇಕು ಅಂತ. ನಾನು ಮಾಡಿದ್ರೂ ತಪ್ಪು. ಬೇರೆ ಯಾರೇ ಮಾಡಿದ್ರೂ ತಪ್ಪು. ನಾನು ಸಿನಿಮಾ ಮೂಲಕ ಮೆಸೇಜ್ ಕೊಡಬೇಕು. ಈತರ ವಿವಾದಗಳಿಂದ ಮೆಸೇಜ್ ಕೊಡುವಂತಹದ್ದು ಏನಿಲ್ಲ. " ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

 Roberrt Producer Umapathy met DK Shivakumar after controversy with Darshan

ದರ್ಶನ್ ಹಾಗೂ ತಮ್ಮೊಂದಿಗೆ ಆಗಾಗ ವಿವಾದಗಳು ಎದ್ದೇಳುತ್ತಿರುವುದಕ್ಕೂ ಉಮಾಪತಿ ಪ್ರತಿಕ್ರಿಯಿಸಿದ್ದಾರೆ. "ಯಾಕೆ ಈ ರೀತಿ ಆಗ್ತಿದೆ ಅಂತ ಗೊತ್ತಿಲ್ಲ ಸರ್.. ಅದು ಅವರಿಗೆ ಗೊತ್ತಿರಬೇಕು. ಅವರೆಲ್ಲ ಹೊಟ್ಟೆ ತುಂಬಿರೋರು. ನಾವೆಲ್ಲ ಹಸಿದಿರೋರು. ನಮಗೆ ಏನು ಗೊತ್ತಾಗುತ್ತೆ ಸಾರ್. ನನಗೆ ಏನು ಗೊತ್ತಿಲ್ಲ, ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆ." ಎಂದು ಉಮಾಪತಿ ಹೇಳಿದ್ದಾರೆ.

ಇದೇ ವೇಳೆ ಕೆಲವರು ನಿರ್ಮಾಪಕ ಉಮಾಪತಿಗೆ ದೊಡ್ಮೆನೆಗೆ ಒಂದು ಸಿನಿಮಾ ಮಾಡಿ ಎಂದು ಸಲಹೆ ನೀಡಿದ್ದರಂತೆ. ಅದನ್ನೂ ನೆನಪಿಸಿಕೊಂಡಿದ್ದಾರೆ. "ಸತ್ಯ ಅಲ್ವಾ ಸರ್.. ಅವರು ಹಾಕಿರುವ ಆಲದ ಮರ ಅಲ್ವಾ ಸರ್. ಮತ್ತೆ ಎಲ್ಲಾರೂ ಹೇಳ್ತಾರೆ. ನೀವು ಸಿನಿಮಾ ಮಾಡುತ್ತೀರಲ್ಲ.. ದೊಡ್ಮನೆಗೆ ಒಂದು ಮಾಡಿ. ಅದರ ತೂಕಾನೇ ಬೇರೆ ಅಂತಾರೆ. ಅದು ನಮಗೆ ಈಗ ಅನುಭವ ಆಗುತ್ತಿದೆ ಅಷ್ಟೇ." ಎಂದು ಉಮಾಪತಿ ಹೇಳಿದ್ದಾರೆ.

ಇದೇ ವೇಳೆ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು ರಾಜಕೀಯ ಕಾರಣಕ್ಕಷ್ಟೇ ಎಂದಿದ್ದಾರೆ. "ಹೌದು ಸರ್ ಸಾಹೇಬ್ರನ್ನು ಭೇಟಿ ಮಾಡುವುದಕ್ಕೆ ಬಂದಿದ್ದೆ. ನಮ್ಮ ಕ್ಷೇತ್ರದಲ್ಲಿ ಕೆಲವು ನೀರಿನ ಸಮಸ್ಯೆ ಇದೆಯಲ್ಲ, ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ಮತ್ತು ರಸ್ತೆ ಸಮಸ್ಯೆಯಿತ್ತು. ಹಾಗಾಗಿ ಸಾಹೇಬರ ಹತ್ತಿರ ಮಾತಾಡೋಣ. ಒಂದು ಮನವಿ ಮಾಡಿಕೊಳ್ಳೋಣ ಬಂದಿದ್ದೆ. ಇದು ಸಂಪೂರ್ಣ ರಾಜಕೀಯಕ್ಕೆ ಸಂಬಂಧಿಸಿದ ಭೇಟಿ. ನಿಮಗೆಲ್ಲ ಗೊತ್ತಿದೆ. ಏನಾದರೂ ಇದ್ದರೆ ಬುದ್ದಿ ಹೇಳುತ್ತಾರೆ. ಇಲ್ಲಾ ಅಂದ್ರೆ ಏನೂ ಕೇಳುವುದಕ್ಕೆ ಹೋಗುವುದಿಲ್ಲ." ಎಂದಿದ್ದಾರೆ.

More from Filmibeat

English summary
Umapathy Srinivas Gowda stayed with his words against Darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X