Exclusive: ಯಶ್ 19ನೇ ಸಿನಿಮಾ 'ಟಾಕ್ಸಿಕ್' ಬಜೆಟ್ ಎಷ್ಟು? ರಾಕಿ ಭಾಯ್ ಹೂಡಿರುವ ಹಣ ಎಷ್ಟು ಗೊತ್ತೇ?
ರಾಕಿಂಗ್ ಸ್ಟಾರ್ 'ಕೆಜಿಎಫ್' ಸೀರಿಸ್‌ನಲ್ಲಿ ಕಾಣಿಸಿಕೊಂಡ ಮೇಲೆ ನ್ಯಾಷನಲ್ ಸ್ಟಾರ್ ಆಗಿ ಮುಂಚುತ್ತಿದ್ದಾರೆ. ಮುಂದಿನ ನಡೆ ಏನು? ಅನ್ನೋದು ಸುಮಾರು 599 ದಿನಗಳ ಕಾಲ ಯಾರಿಗೂ ಗೊತ್ತಿರಲಿಲ್ಲ. ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅದೆಷ್ಟೋ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳಬೇಡಿ ಅಂತಲೇ ಹೇಳುತ್ತಾ ಬಂದಿದ್ದರು.
ಕೊನೆಗೂ ನಾಲ್ಕು ದಿನಗಳ ಹಿಂದಷ್ಟೇ ಕಾದೂ ಕಾದು ಹೈರಾಣಾಗಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ತಮ್ಮ 19ನೇ ಸಿನಿಮಾ ಟೈಟಲ್ ಲಾಂಚ್ ಮಾಡುವುದಾಗಿ ಹೇಳಿದ್ದರು. ಇಲ್ಲಿಂದ ಸಿನಿಮಾ ಬಗ್ಗೆ ಒಂದಿಷ್ಟು ಸುದ್ದಿಗಳು ಓಡಾಡಿದ್ದವು. ಸಿನಿಮಾದಲ್ಲಿ ಮೂರು ನಾಯಕಿಯರು ಅನ್ನುವುದರಿಂದ ಹಿಡಿದು, ಟೈಟಲ್ ಗೆಸ್ ಮಾಡೋವರೆಗೂ ಚರ್ಚೆಯಾಗಿತ್ತು.

ಇಂದು (ಡಿಸೆಂಬರ್ 8) ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾದ ಟೈಟಲ್ 'ಟಾಕ್ಸಿಕ್' ಅಂತ ಅನೌನ್ಸ್ ಆಗಿದೆ. ಈ ಸಿನಿಮಾದ ಬಗ್ಗೆ ಕೆಲವು ಎಕ್ಸ್‌ಕ್ಲ್ಯೂಸಿವ್ ವಿಷಯಗಳು ಫಿಲ್ಮಿಬೀಟ್‌ಗೆ ಲಭ್ಯವಾಗಿದೆ. ಟಾಕ್ಸಿಕ್ ಸಿನಿಮಾ ಬಜೆಟ್ ಎಷ್ಟು? ಯಶ್ ಹೂಡಿರುವ ಹಣವೆಷ್ಟು? ಎಲ್ಲಿ ಶೂಟಿಂಗ್? ಇಂತಹದ್ದೇ ಒಂದಿಷ್ಟು ಸಂಗತಿಗಳು ಬಗ್ಗೆ ಆಪ್ತ ಮೂಲಗಳು ರಿವೀಲ್ ಮಾಡಿವೆ.
'ಕೆಜಿಎಫ್ 2' ಅಂತಹ ಮೆಗಾ ಸಿನಿಮಾ ಕೊಟ್ಟಿರೋ ಯಶ್ ನೆಕ್ಸ್ಟ್ ಲೆವೆಲ್‌ಗೆ ಯೋಚನೆ ಮಾಡುತ್ತಿದ್ದಾರೆ ಅನ್ನೋದು ಗೊತ್ತೇ ಇತ್ತು. ಆದರೆ, ಎಲ್ಲರ ಊಹೆಯನ್ನೂ ಮೀರಿ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಟಾಕ್ಸಿಕ್ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಇದೊಂದು ಪ್ಯಾನ್ ವರ್ಲ್ಡ್ ಸಿನಿಮಾ. ಯಶ್ ಕನ್ನಡ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, 'ಟಾಕ್ಸಿಕ್' ಸಿನಿಮಾವನ್ನು ಕೇವಲ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಅಷ್ಟೇ ನಿರ್ಮಾಣ ಮಾಡುತ್ತಿಲ್ಲ. ಕೆವಿನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಜೊತೆ ಯಶ್ ತಮ್ಮ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಸಿನಿಮಾದಲ್ಲಿ ಯಶ್‌ರದ್ದು ಶೇ.50ರಷ್ಟು ಶೇರ್ ಇದೆ.
ಅಂದ್ಹಾಗೆ, 'ಟಾಕ್ಸಿಕ್' ಸಿನಿಮಾದ ಬಜೆಟ್ ಏನೂ ಕಮ್ಮಿಯಿಲ್ಲ. ಹಾಲಿವುಡ್ ಲೆವೆಲ್‌ನಲ್ಲಿ ಸಿನಿಮಾ ಮಾಡುತ್ತಿರೋದ್ರಿಂದ ಬಜೆಟ್‌ನಲ್ಲೂ ಏರಿಕೆಯಾಗಿದೆ. ಮೂಲಗಳ ಮಾಹಿತಿಯ ಪ್ರಕಾರ, ಯಶ್ 19ನೇ ಸಿನಿಮಾದ ಬಜೆಟ್ ಬರೋಬ್ಬರಿ 170 ಕೋಟಿ ರೂಪಾಯಿ. ಇದು ಯಶ್ ವೃತ್ತಿ ಬದುಕಿನಲ್ಲಿ ಮೂರನೇ ಅತೀ ದೊಡ್ಡ ಬಜೆಟ್ ಸಿನಿಮಾ. ಇದರಲ್ಲಿ ಯಶ್ ಪಾಲು ಎಷ್ಟಿರಬಹುದು ಎಂದು ಊಹಿಸಬಹುದು. ಆದರೆ, ಈ ಬಗ್ಗೆ ಕೆವಿಎನ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ನವೆಂಬರ್‌ನಿಂದಲೇ 'ಟಾಕ್ಸಿಕ್' ಶೂಟಿಂಗ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಲಂಡನ್‌ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲೂ ಒಂದು ಟ್ವಿಸ್ಟ್ ಇದ್ದು, ಅದು ಹುಟ್ಟುಹಬ್ಬಕ್ಕೆ ರಿವೀಲ್ ಆಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











