ಯಶ್ 39ನೇ ಬರ್ತ್‌ಡೇಗೆ 39 ದಿನ ಬಾಕಿ; ಟ್ವಿಟರ್‌ನಲ್ಲಿ ರಾಕಿ ಭಾಯ್ ಅಭಿಮಾನಿಗಳು ರಾಕಿಂಗ್

ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ ನ್ಯಾಷನಲ್ ಸ್ಟಾರ್. 'ಕೆಜಿಎಫ್ 2' ರಿಲೀಸ್ ಆದ ದಿನದಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಹೆಚ್ಚು ಕಡಿಮೆ ಎರಡು ವರ್ಷ ತೆಗೆದುಕೊಂಡಿದ್ದಾರೆ. ಈಗ 'ಟಾಕ್ಸಿಕ್' ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಯಶ್ ಮುಂಬೈನಲ್ಲಿ ಇದ್ದಾರೆ.

ಯಶ್ ಅಭಿಮಾನಿಗಳಿಗೆ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ವೇಗ ಕಂಡು ಖುಷಿಯಾಗಿದ್ದರೆ, ಇನ್ನೊಂದು ಕಡೆ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಶೀಘ್ರದಲ್ಲಿಯೇ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳು ಈಗಿನಿಂದಲೇ ಸೆಲೆಬ್ರೆಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

Rocking star Yash 39th birthday in 39 days fans already started celebrating here is twitter reaction

ಇಂದು(ನವೆಂಬರ್ 30) ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡುತ್ತಿದ್ದಾರೆ. ಅಂದ್ಹಾಗೆ, ಯಶ್ ಫ್ಯಾನ್ಸ್ ಪಾಲಿಗೆ ಈ ದಿನ ವಿಶೇಷ. ಆ ಕಾರಣಕ್ಕೆ ಟ್ವಿಟರ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಂದ್ಹಾಗೆ ಇಂದಿನಿಂದ ಯಶ್ 39ನೇ ಬರ್ತ್‌ಡೇಗೆ 39 ದಿನಗಳು ಬಾಕಿ ಇವೆ. ಹೀಗಾಗಿ ಅಭಿಮಾನಿಗಳೇ ಡಿಸೈನ್ ಮಾಡಿ ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹಾಗಿದ್ದರೆ, ಆ ಡಿಪಿಗಳು ಹೇಗಿವೆ? ತಿಳಿಯಲು ಮುಂದೆ ಓದಿ.

39ನೇ ಬರ್ತ್‌ಡೇ 39ದಿನ ಬಾಕಿ

ರಾಕಿಂಗ್ ಸ್ಟಾರ್ ಯಶ್‌ಗೆ ಈ ವರ್ಷ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತಾರೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿಕೊಳ್ಳುತ್ತಾರಾ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಅದ್ಯಾವುದಕ್ಕೂ ಕಾಯದೆ ಅಭಿಮಾನಿಗಳು ಬರ್ತ್‌ಡೇ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಟ್ವಿಟರ್ (ಎಕ್ಸ್)ನಲ್ಲಿ ಡಿಪಿಗಳನ್ನು ಡಿಸೈನ್ ಮಾಡಿ ಬಿಡುತ್ತಿದ್ದಾರೆ.

ರಾಕಿಂಗ್ ಹಬ್ಬ 2025

ಯಶ್ ಫ್ಯಾನ್ಸ್‌ಗೆ ನೆಚ್ಚಿನ ನಟನ ಹುಟ್ಟುಹಬ್ಬವನ್ನು 'ರಾಕಿಂಗ್ ಹಬ್ಬ 2025' ಆಗಿ ಆಚರಣೆ ಮಾಡಬೇಕು ಅನ್ನೋ ಆಸೆ. ಹೀಗಾಗಿ ಟೈಟಲ್ ಕೊಟ್ಟು ತಾವೇ ಡಿಪಿಯನ್ನು ಹಂಚಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. 39ನೇ ದಿನ ಬಾಕಿ ಇರುವಾಗಲೇ ಅವರ ಸೆಲೆಬ್ರೆಷನ್ ಶುರುವಾಗಿದೆ. ಈಗಿನಿಂದಲೇ ಅಡ್ವಾನ್ಸ್ ಆಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಮ್ಮ ನೆಚ್ಚಿನ ನಟನಿಗೆ ತಿಳಿಸುತ್ತಿದ್ದಾರೆ.

'ಟಾಕ್ಸಿಕ್' ಮೇಲೆ ನಿರೀಕ್ಷೆ

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾವನ್ನು ಇಡೀ ದೇಶವೇ ಎದುರು ನೋಡುತ್ತಿದೆ. 'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮುಂದಿನ ಚಿತ್ರ ಹೇಗಿರುತ್ತೆ ಅನ್ನೋ ಕುತೂಹಲವಿದೆ. ಈ ಬಾರಿ ಯಶ್ ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಹಬ್ಬಿದೆ. ಅದಕ್ಕೆ ಹಾಲಿವುಡ್ ತಂತ್ರಜ್ಞರು ಕೂಡ 'ಟಾಕ್ಸಿಕ್'ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಚಿಕ್ಕದೊಂದು ತುಣುಕು ಕೂಡ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಹುಟ್ಟುಹಬ್ಬದಂದು ಏನಾದರೂ ಸರ್ಪ್ರೈಸ್ ಕೊಡಬಹುದೆಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ?

ರಾಕಿಂಗ್ ಸ್ಟಾರ್ ಯಶ್ ಕಳೆದ ಬಾರಿ ಕೂಡ ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಆದರೂ ಅಭಿಮಾನಿಗಳು ಸೆಲೆಬ್ರೆಟ್ ಮಾಡುವುದಕ್ಕೆ ಹೋಗಿ ಅವಘಡ ನಡೆದಿತ್ತು. ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು. ಆ ಕಹಿ ಘಟನೆಯನ್ನು ನೆನೆದು ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ ಅದಿನ್ನೂ ಸ್ಪಷ್ಟವಾಗಿಲ್ಲ.

More from Filmibeat

English summary
Rocking star Yash 39th birthday in 39 days fans already started celebrating here is twitter reaction;
Read more about: yash toxic filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X