Yash Toxic: ಅಣ್ಣಮ್ಮಾಸ್.. 'ಟಾಕ್ಸಿಕ್' ಬೇರೆನೇ ಲೆವೆಲ್.. ಬರ್ತ್‌ಡೇ ಪೀಕ್‌ನಲ್ಲಿ ಯಶ್‌ ಲುಕ್ ಚಿಂದಿ

'ಕೆಜಿಎಫ್ 2' ಬಳಿಕ ಮತ್ತೊಂದು ಸಿನಿಮಾವನ್ನು ಒಪ್ಪಿಕೊಳ್ಳುವುದಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಅಳೆದು ತೂಗಿ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಹೊಸ ಸಿನಿಮಾಗಾಗಿ ಕಾದೂ ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ 'ಟಾಕ್ಸಿಕ್' ಟೈಟಲ್ ಅನೌನ್ಸ್ ಮಾಡಿದ್ದು ಬಿಟ್ಟರೆ ಬೇರೆನೂ ಅಪ್‌ಡೇಟ್ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ 'ಟಾಕ್ಸಿಕ್' ಗುಟ್ಟನ್ನು ರಿವೀಲ್ ಮಾಡುವುದಕ್ಕೆ ಹೊರಟಿದ್ದಾರೆ.

ಇಂದು (ಜನವರಿ 8) ರಾಕಿ ಭಾಯ್ ಯಶ್ ಅವರ 39ನೇ ಹುಟ್ಟುಹಬ್ಬ. ಈ ದಿನದಂದು ಯಶ್ ತಮ್ಮ ಅಭಿಮಾನಿಗಳಿಗೆ 'ಟಾಕ್ಸಿಕ್' ಸರ್ಪ್ರೈಸ್ ಕೊಡುವುದಾಗಿ ಮಾತುಕೊಟ್ಟಿದ್ದರು. ಅದರಂತೆ 'ಟಾಕ್ಸಿಕ್' ಸಿನಿಮಾ ಝಲಕ್ ಹೊರಬಿದ್ದಿದೆ. ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದ ಆ ಗಳಿಕೆ ಈಗ ಬಂದೇ ಬಿಟ್ಟಿದೆ. ಅಷ್ಟಕ್ಕೂ ಬರ್ತ್‌ಡೇಗೆ ಯಶ್ ಕೊಟ್ಟ ಸರ್ಪ್ರೈಸ್ ಹೇಗಿದೆ?

Rocking star Yash Geetu Mohandas KVN Productions film Toxic Birthday Peek out

ನಿರೀಕ್ಷೆ ಮಾಡಿದಂತೆ ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇ ಬಿಟ್ಟಿರುವ 'ಟಾಕ್ಸಿಕ್' ಗ್ಲಿಂಪ್ಸ್ ಸಖತ್ತಾಗಿದೆ. ಯಶ್ ಮ್ಯಾನರಿಸಂ, ಲುಕ್ ಎಲ್ಲವೂ ಬದಲಾಗಿದೆ. 'ಕೆಜಿಎಫ್ 2' ಸಿನಿಮಾದ ಒಂದೇ ಒಂದು ಛಾಯೆ ಕೂಡ ಈ ವಿಡಿಯೋದಲ್ಲಿ ಕಾಣಿಸುತ್ತಿಲ್ಲ. 'ಕೆಜಿಎಫ್' ಬ್ಲಾಕ್ ಥೀಮ್‌ನಲ್ಲಿ ಇದ್ದರೆ, 'ಟಾಕ್ಸಿಕ್' ಸಂಪೂರ್ಣವಾಗಿ ಕಲರ್‌ಫುಲ್ ಆಗಿರುತ್ತೆ. ಅದಕ್ಕೆ ತಕ್ಕಂತೆ ಸಿನಿಮಾದ ಸಬ್ಜೆಕ್ಟ್ ಕೂಡ ಇದೆ ಅನ್ನೋದು ಟಾಕ್ಸಿಕ್ ತುಣುಕುಗಳು ಸಾರಿ ಹೇಳುತ್ತಿವೆ.

'ಟಾಕ್ಸಿಕ್' ಬರ್ತ್‌ಡೇ ಪೀಕ್ ನಿಜಕ್ಕೂ ರಾಕಿ ಭಾಯ್ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಅಂತ ಹೇಳಬಹುದು. ಮೊದಲ ತಿಳಿಸಿದಂತೆ ಯಶ್ ಅಭಿಮಾನಿಗಳು ಭರ್ಜರಿ ಉಡುಗೊರೆನೇ ಸಿಕ್ಕಿದೆ. ಇಷ್ಟು ವರ್ಷ ಅಭಿಮಾನಿಗಳನ್ನು ಕಾಯಿಸಿದ್ದಕ್ಕೂ ಯಶ್ ನಿರಾಸೆ ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ 'ಕೆಜಿಎಫ್' ಕೆಜಿಎಫ್ ಗುಂಗಿನಿಂದ ಹೊರಬಂದಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕ್ಯಾಸಿನೋ ಒಳಗೆ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕೊಡುವ ದೃಶ್ಯ ಸಿನಿಪ್ರಿಯರ ಟೆಂಪರ್ ಹೆಚ್ಚಿಸುವುದು ಗ್ಯಾರಂಟಿ.

ಈ ಬರ್ತ್‌ಡೇ ಪೀಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ರೆಟ್ರೋ ಕಾರಿನಲ್ಲಿ ಕ್ಯಾಸಿನೋಗೆ ಎಂಟ್ರಿ ಕೊಡುವ ದೃಶ್ಯದಿಂದ ವಿಡಿಯೋ ಆರಂಭ ಆಗುತ್ತೆ. ಅಲ್ಲಿಂದ ಕ್ಯಾಸಿನೋ ಒಳಗೆ ಎಂಟ್ರಿ ಕೊಡುವ ರಾಕಿ ಭಾಯ್ ಮ್ಯಾನರಿಸಂ ಇಂಟರ್‌ನೆಟ್‌ ಬೆಂಕಿ ಹಚ್ಚಿದೆ. ವೈಟ್ ಅಂಡ್ ವೈಟ್ ಸೂಟ್‌ನಲ್ಲಿ ಹ್ಯಾಟ್ ಧರಿಸಿ, ಸಿಗಾರ್ ಸೇದುತ್ತಾ ಎಂಟ್ರಿ ಕೊಡುವ ದೃಶ್ಯವನ್ನು ರಿವೀಲ್ ಮಾಡಲಾಗಿದೆ. ವಿದೇಶದ ಮಹಿಳೆಯೊಂದುಗೆ ಮಸ್ತಿಯಲ್ಲಿ ತೊಡಗಿರುವ ಯಶ್ ಲುಕ್ ಬೇರೆ ಏನೋ ಕಥೆಯನ್ನು ಹೇಳುವುದಕ್ಕೆ ಹೊರಟಿದೆ.

Rocking star Yash Geetu Mohandas KVN Productions film Toxic Birthday Peek out

ಕೆಲವು ದಿನಗಳ ಹಿಂದೆ 'ಟಾಕ್ಸಿಕ್' ಮೇಕಿಂಗ್‌ನ ತುಣುಕೊಂಡು ರಿವೀಲ್ ಆಗಿತ್ತು. ಅಲ್ಲೂ ಕೂಡ ಯಶ್ ಇದೇ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದರು. ಸೇಮ್ ವೈಟ್ ಅಂಡ್ ವೈಟ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಕೂಡ ಕ್ಯಾಸಿನೋ ಕಾಣಿಸಿತ್ತು. ಹೀಗಾಗಿ ಈ ದೃಶ್ಯ 'ಟಾಕ್ಸಿಕ್' ಸಿನಿಮಾದ ಪ್ರಮುಖ ದೃಶ್ಯವೆಂದು ಅಂದಾಜು ಮಾಡಬಹುದು. ಸದ್ಯ ಈಗ ರಿವೀಲ್ ಮಾಡಿರುವ ಯಶ್ ಲುಕ್ ಅಂತೂ ಚಿಂದಿಯಾಗಿದೆ. ಫ್ಯಾನ್ಸ್ ಈಗಾಗಲೇ ಟಾಕ್ಸಿಕ್ ಬರ್ತ್‌ಡೇ ಪೀಕ್ ವಿಡಿಯೋವನ್ನು ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಕೆವಿಎನ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಸೇರಿ 'ಟಾಕ್ಸಿಕ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮಲಯಾಳಂ ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, 'ಟಾಕ್ಸಿಕ್' ಪ್ಯಾನ್ ಇಂಡಿಯಾ ಅಲ್ಲ ಗ್ಲೋಬಲ್ ಸಿನಿಮಾ ಆಗುವ ಸಾಧ್ಯತೆಯಿದೆ. ದುಬಾರಿ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಸಿನಿಪ್ರಿಯರಿಗೆ ಹೊಸ ಅನುಭವ ನೀಡುತ್ತೆ ಅನ್ನೋ ಭರವಸೆ ಮೂಡಿಸಿದೆ. ಹಾಲಿವುಡ್ ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡುತ್ತಿದ್ದು, ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ.

More from Filmibeat

English summary
Rocking star Yash Geetu Mohandas KVN Productions film Toxic Birthday Peek out;
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X