Yash-Toxic: 'ಟಾಕ್ಸಿಕ್'ನಲ್ಲಿ ಯಶ್ ಮತ್ತೊಂದು ಲುಕ್ ನೋಡಿದ್ರಾ? 'ರಾಯ' ಮಾಫಿಯಾ ಡಾನ್ ಅನ್ನೋದು ಕನ್ಫರ್ಮ್
'ಕೆಜಿಎಫ್ 2'ನಲ್ಲಿ ಯಶ್ ನೋಡಿ ಕಣ್ತುಂಬಿಕೊಂಡಿದ್ದ ಅಭಿಮಾನಿಗಳಿಗೆ ಮತ್ತೊಂದು ಸಿನಿಮಾದಲ್ಲಿ ಅವರನ್ನು ನೋಡುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಯಾಕಂದ್ರೆ, 'ಟಾಕ್ಸಿಕ್' ಅದ್ಯಾವಾಗ ರಿಲೀಸ್ ಆಗುತ್ತೆ ಅನ್ನೋದೇ ಗೊತ್ತಿಲ್ಲ. ಈಗಾಗಲೇ ಎರಡು ಬಾರಿ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗಿದೆ. ಮಾರ್ಚ್ 19 ರಿಂದ ಜೂನ್ 4ಕ್ಕೆ ಮುಂದೂಡಿಕೆ ಆಯ್ತು. ಅಲ್ಲಿಂದ ಇಲ್ಲಿವರೆಗೂ 'ಟಾಕ್ಸಿಕ್' ರಿಲೀಸ್ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇಲ್ಲ.
ಯಶ್ ಅಭಿಮಾನಿಗಳಿಗೆ 'ಟಾಕ್ಸಿಕ್' ಪೋಸ್ಟ್‌ಪೋನ್ ಆಗಿದ್ದಕ್ಕೆ ನಿರಾಸೆ ಆಗಿದೆ. ಇನ್ನೇನು ಸಿನಿಮಾವನ್ನು ನೋಡೇ ಬಿಡ್ತೀವಿ ಅಂದ್ಕೊಂಡು ತುದಿಗಾಲಲ್ಲಿ ನಿಂತಿದ್ದರು. ಅಷ್ಟರಲ್ಲೇ ಯಶ್ ಮತ್ತೊಂದು ಅಪ್‌ಡೇಟ್ ಕೊಟ್ಟು ಬಿಟ್ಟರು. ಅದಕ್ಕೆ 'ಟಾಕ್ಸಿಕ್' ಇಷ್ಟ ಪಡುವವರಿಗೆ ಯಶ್ ಸರ್ಪ್ರೈಸ್ ಕೊಟ್ಟಿದ್ದಾರೆ. ಹೊಸ ಲುಕ್‌ನಲ್ಲಿ ಡಾನ್ ಲುಕ್‌ನಲ್ಲಿರೋ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದು ಸದ್ಯ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ಈ ಲುಕ್‌ನಲ್ಲಿ ಯಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಲುಕ್.. ಬಾಯಲ್ಲೊಂದು ಸಿಗರೇಟ್.. ದುಬಾರಿ ಕಾರು.. ಜೊತೆಗೊಂದಿಷ್ಟು ಬಾಡಿಗಾರ್ಡ್ಸ್.. ಅವರ ಕೈಯಲ್ಲಿ ಗನ್‌ಗಳು.. ಇದನ್ನೆಲ್ಲ ನೋಡಿದ್ರೆ, 'ಟಾಕ್ಸಿಕ್' ಇನ್ನೂ ದುಬಾರಿ ಆಗ್ತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಸಿನಿಮಾ ತಂಡ ಹೊರ ಬಿಟ್ಟಿರೋ ಈ ಫೋಟೊಗಳು ಏನು ಹೇಳುತ್ತಿವೆ? ಸಿನಿಮಾ ಬಗ್ಗೆ ಏನಿದು ಇನ್‌ಸೈಡ್ ಸ್ಟೋರಿ ತಿಳಿಯೋಕೆ ಮುಂದೆ ಓದಿ.
'ಟಾಕ್ಸಿಕ್' ಸಿನಿಮಾವನ್ನು ಯಶ್ ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗ್ತಿದ್ದಾರೆ. ಅದಕ್ಕೆ ಬೇಕಿರೋ ಪೂರ್ವ ಸಿದ್ಧತೆಗಳು ಒಂದು ಹಂತಕ್ಕೆ ಆಗಿದೆ. ಗ್ಲೋಬಲ್ ರಿಲೀಸ್ ಮಾಡಬೇಕು ಅಂದರೆ, ಅದಕ್ಕೆ ತಕ್ಕಂತೆ ಸಿನಿಮಾದ ಕ್ವಾಲಿಟಿ ಇರಬೇಕು. ಹೀಗಾಗಿ ಯಶ್ ಕಾಂಪ್ರಮೈಸ್ ಆಗದೇ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡುತ್ತಿದ್ದಾರೆ ಎಂದು ಈ ಹಿಂದೇನೆ ಹೇಳಿದ್ವಿ. ಈಗ ಕೂಡ 'ಟಾಕ್ಸಿಕ್' ರಿ-ಶೂಟ್ ಆಗ್ತಿದೆ ಅನ್ನೋ ಸುದ್ದಿನೇ ಮತ್ತೆ ಓಡಾಡ್ತಿದೆ.
ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್'ಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಹೀಗಾಗಿ ಆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಸಿನಿಮಾ ತಂಡ ವರ್ಕಿಂಗ್ ಸ್ಟಿಲ್ಸ್ ಅನ್ನು ರಿಲೀಸ್ ಮಾಡಿದೆ. ಅದರಲ್ಲಿ ಯಶ್ ರಗಡ್-ಮಾಸ್ ಲುಕ್ ಕೂಡ ಸೇರಿಕೊಂಡಿದೆ. ಯಶ್ ಹಾಗೂ ಸೆಟ್‌ನ ಮೇಕಿಂಗ್ ಫೋಟೊಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗುತ್ತಿವೆ. ಮತ್ತೆ 'ಟಾಕ್ಸಿಕ್' ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ರಾಕಿ ಭಾಯ್ 'ಟಾಕ್ಸಿಕ್' ಲುಕ್ ಅನ್ನು ನೋಡಿದರೆ, ಯಶ್ ಮಾಫಿಯಾ ಗ್ಯಾಂಗ್‌ನ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಯಶ್ ಕೆಲವೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಿದ್ದರೂ ಈ ಫೋಟೊಗಳು ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟಾಕಿದೆ. ಆದರೆ, ಯಶ್ ಸದ್ಯಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿಲ್ಲ. ಬದಲಾಗಿ ಬಿಗ್ ರಿಲೀಸ್‌ಗೆ ಪ್ಯಾನ್ ಮಾಡಿದ್ದಾರೆಂದು ಹೇಳಲಾಗಿದೆ.
ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದರೆ, 'ಟಾಕ್ಸಿಕ್' ಡಿಸೆಂಬರ್ ತಿಂಗಳಿಗೆ ರಿಲೀಸ್ ಆಗುತ್ತಿದೆ. ಯಶ್‌ಗೆ ಡಿಸೆಂಬರ್ ತಿಂಗಳು ಲಕ್ಕಿ ಆಗಿದ್ದರಿಂದ ಸಿನಿಮಾವನ್ನು ಕ್ರಿಸ್‌ಮಸ್‌ಗೆ ರಿಲೀಸ್ ಮಾಡಲಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಆದರೆ, ಕೆವಿಎನ್ ಪ್ರೊಡಕ್ಷನ್ ಆಗಲಿ, ಯಶ್ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications