'ಟಾಕ್ಸಿಕ್' ಅವತಾರವೆತ್ತಿ ಲೀಲಾ ಪ್ಯಾಲೇಸ್‌ಗೆ ಬಂದ ರಾಕಿಂಗ್ ಸ್ಟಾರ್; ಶುರುವಾಯ್ತಾ ಶೂಟಿಂಗ್?

'ಕೆಜಿಎಫ್ 2' ಬಳಿಕ ರಾಕಿ ಭಾಯ್ ಹೊಸ ಸಿನಿಮಾಗೆ ಕಾದೂ ಕಾದು ಸುಸ್ತಾಗಿದ್ದ ಫ್ಯಾನ್ಸ್‌ಗೆ ಹೊಸ ಸಿನಿಮಾ ಅನೌನ್ಸ್ ಆಗಿದ್ದಷ್ಟೇ. ಆ ಬಳಿಕ ಈ ಸಿನಿಮಾದ ಬಗ್ಗೆ ಒಂದೇ ಒಂದು ಅಪ್‌ಡೇಟ್ ಕೂಡ ಸಿಕ್ಕಿರಲಿಲ್ಲ. ಯಶ್ ಲುಕ್ ರಿವೀಲ್ ಆಗಿರಲಿಲ್ಲ. ಸಿನಿಮಾ ಶೂಟಿಂಗ್ ಶುರುವಾಯ್ತಾ? ಅನ್ನೋದು ಗೊತ್ತಿರಲಿಲ್ಲ. ಆದರೆ, ಯಶ್ ಇತ್ತೀಚೆಗೆ ಹೊಸ ಅವತಾರದಲ್ಲಿ ಅಲ್ಲಲ್ಲಿ ದರ್ಶನ ಕೊಡುವುದಕ್ಕೆ ಶುರು ಮಾಡಿದ್ದಾರೆ.

ಯಶ್ ಮುಂದಿನ ಸಿನಿಮಾಗೆ ಇಡೀ ದೇಶವೇ ಎದುರು ನೋಡುತ್ತಿದೆ. ಸದ್ಯ ರಾಕಿ ಭಾಯ್ ಹೊಸ ಅವತಾರ ಅವರ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಟ್ಟಿರುವುದಂತೂ ಸತ್ಯ. ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಯಶ್ ಲುಕ್ ರಿವೀಲ್ ಆಗಿತ್ತು. ಅಲ್ಲಿಂದ ಯಶ್ 'ಟಾಕ್ಸಿಕ್' ಲುಕ್ ರಾಕಿ ಅಭಿಮಾನಿಗಳಿಗೆ ಕಿಕ್ ಕೊಡುವುದಕ್ಕೆ ಶುರುವಾಗಿತ್ತು.

Rocking Star Yash seen in Leela Palace with a Toxic movie look trending in social media

ಇದೇ ವೇಳೆ ರಾಕಿಭಾಯ್ ಮತ್ತೆ ಅದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ. ಈ ವಿಡಿಯೋದಲ್ಲಿ ರಾಕಿ ಭಾಯ್‌ಯ ಗಾಂಭೀರ್ಯ ನಡಿಗೆ ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಆಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ.

ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ನಿರ್ಮಾಣ ಸಂಸ್ಥೆ ಜಂಟಿಯಾಗಿ 'ಟಾಕ್ಸಿಕ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್‌ನಿಂದಲೇ ಸದ್ದು ಮಾಡಿದ್ದ ಯಶ್ ಸಿನಿಮಾ ಈಗ ಲುಕ್‌ನಿಂದಲೂ ಸೌಂಡು ಮಾಡುವುದಕ್ಕೆ ಶುರು ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಲೀಲಾ ಪ್ಯಾಲೇಸ್ ಎಂದು ಲೋಕೇಶನ್ ಅನ್ನು ಗುರುತಿಸಿದ್ದಾರೆ. 'ಟಾಕ್ಸಿಕ್' ಲುಕ್‌ನಲ್ಲಿ ಲೀಲಾ ಪ್ಯಾಲೇಸ್ ಹೋಗಿದ್ದು ನಿಜವೇ? ಯಾಕೆ ಹೋದರು? ಸಿನಿಮಾ ಶೂಟಿಂಗ್ ಏನೇನಾದರೂ ನಡೆಯುತ್ತಿದೆಯೇ? ಅನ್ನುವ ಬಗ್ಗೆ ಸದ್ಯಕ್ಕೆ ಖಚಿತ ಮಾಹಿತಿ ಸಿಕ್ಕಿಲ್ಲ.

ಟ್ರೆಂಡಿಂಗ್‌ನಲ್ಲಿರುವ ವಿಡಿಯೋದಲ್ಲಿ ರಾಕಿ ಭಾಯ್ ಸಖತ್ ಫಿಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಲ್ಯಾಕ್ ಪ್ಯಾಂಟ್ ಹಾಗೂ ಕಂದು ಬಣ್ಣದ ಹಾಫ್ ಟೀ ಶರ್ಟ್ ಧರಿಸಿ, ಗಾಂಭೀರ್ಯ ನಡಿಗೆಯಲ್ಲಿ ಬರುತ್ತಿದ್ದಾರೆ. ಇದನ್ನು ನೋಡಿದರೆ, ಯಶ್ ಶೀಘ್ರದಲ್ಲಿಯೇ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ಗೆ ಹೋಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಸದ್ಯ 'ಟಾಕ್ಸಿಕ್' ಸಿನಿಮಾಗಾಗಿ ಅದ್ಧೂರಿ ಸೆಟ್‌ ಅನ್ನು ಹಾಕಲಾಗಿದೆ. ಇತ್ತೀಚೆಗೆ ಅರಣ್ಯ ಇಲಾಖೆಯ ಜಾಗದಲ್ಲಿ ಈ ಸೆಟ್ಟು ಹಾಕಿದ್ದರ ಬಗ್ಗೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಈ ವೇಳೆ ಸಿನಿಮಾಗಾಗಿ ಹಾಕಿದ ಸೆಟ್ಟಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಒಟ್ನಲ್ಲಿ ಯಶ್ 'ಟಾಕ್ಸಿಕ್‌' ಲುಕ್‌ಗೆ ಫ್ಯಾನ್ಸ್ ಥ್ರಿಲ್ ಆಗಿರೋದಂತೂ ಅಷ್ಟೇ ಸತ್ಯ.

More from Filmibeat

English summary
Yash Toxic look goes trending:
Read more about: yash sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X