For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುನ್ನ ಮತ್ತೊಮ್ಮೆ ಹವಾ ಎಬ್ಬಿಸಿದ 'KGF 2' ಟೀಸರ್: ದಾಖಲೆ ಏನು?

  |

  ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್. ಕನ್ನಡದ ನಟನನ್ನು ನ್ಯಾಷನಲ್ ಸ್ಟಾರ್ ಮಾಡಿದ ಕೆಜಿಎಫ್ ಚಾಪ್ಟರ್ 1 ವಿಶ್ವದಾದ್ಯಂತ ಸದ್ದು ಮಾಡಿತ್ತು. ಆದರೆ, ಚಾಪ್ಟರ್ 1 ಕ್ಕಿಂತ ಕೆಜಿಎಫ್ ಚಾಪ್ಟರ್ 2 ಮೂರು ಪಟ್ಟು ಹೆಚ್ಚು ಸೌಂಡ್ ಮಾಡುತ್ತಿದೆ. ಇದೂವರೆಗೂ ರಿಲೀಸ್ ಆಗಿದ್ದು ಒಂದೇ ಒಂದು ಟೀಸರ್. ಅದು ಯಶ್ ಹುಟ್ಟುಹಬ್ಬಕ್ಕೆ ಅಂತ ವಿಶೇಷವಾಗಿ ರಿಲೀಸ್ ಆಗಿದ್ದ ಟೀಸರ್. ಇದೊಂದೇ ಟೀಸರ್ ಒಂದು ವರ್ಷದೊಳಗೆ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿವೆ.

  ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿಯ ಕೆಜಿಎಫ್ 2 ಸ್ಯಾಂಡಲ್‌ವುಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಹಾಗಂತ ಇದು ಕೇವಲ ಕನ್ನಡ ಸಿನಿಮಾ ಅಷ್ಟೇ ಅಲ್ಲ. ಇದೊಂದು ಭಾರತದ ಸಿನಿಮಾ ಆಗಿದ್ದು, ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಪ್ರಿಯರು ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಬಿಡುಗಡೆಗೆ ಹತ್ತಿರ ಬಂದಾಗಲೆಲ್ಲಾ ಸಿನಿಮಾ ಮುಂದೂಡಲ್ಪಟ್ಟಿದೆ. ಹೀಗಿದ್ದೂ ಯಶ್ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಯಾಕಂದ್ರೆ, ಕೆಜಿಎಫ್ 2 ಟೀಸರ್ ಇನ್ನೂ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಇದೆ.

  'KGF 2' ಟೀಸರ್‌ಗೆ 9 ಮಿಲಿಯನ್ ಲೈಕ್ಸ್

  'KGF 2' ಟೀಸರ್‌ಗೆ 9 ಮಿಲಿಯನ್ ಲೈಕ್ಸ್

  ಈ ವರ್ಷ ಯಶ್ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಬಿಡುಗಡೆಯಾದ ದಿನದಿಂದ್ಲೇ ಈ ಟೀಸರ್ ಬೇಜಾನ್ ಸದ್ದು ಮಾಡುತ್ತಿದೆ. ದಾಖಲೆಗಳನ್ನೆಲ್ಲಾ ಒಂದೊಂದಾಗೇ ಉಡೀಸ್ ಮಾಡುತ್ತಲೇ ಬಂದಿದೆ. ಈ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದ್ದು, 'ಕೆಜಿಎಫ್ 2' ಟೀಸರ್‌ಗೆ 9 ಮಿಲಿಯನ್ ಮಂದಿ ಯೂಟ್ಯೂಬ್‌ನಲ್ಲಿ ಲೈಕ್ ಮಾಡಿದ್ದಾರೆ. ಕನ್ನಡದ ಯಾವುದೇ ಸಿನಿಮಾದ ಟೀಸರ್‌ಗೆ ಇಷ್ಟೊಂದು ಲೈಕ್ಸ್ ಸಿಕ್ಕಿದ ಉದಾಹರಣೆಗಳಿಲ್ಲ. ಕನ್ನಡ ಅಷ್ಟೇ ಭಾರತೀಯ ಸಿನಿಮಾ ಲೆವಲ್‌ನಲ್ಲೇ ಇಂತಹದ್ದೊಂದು ದಾಖಲೆ ಮಾಡಿಲ್ಲ ಎನ್ನಲಾಗುತ್ತಿದೆ.

  325 ದಿನಗಳಲ್ಲಿ 'KGF 2' ಟೀಸರ್ ದಾಖಲೆ

  325 ದಿನಗಳಲ್ಲಿ 'KGF 2' ಟೀಸರ್ ದಾಖಲೆ

  'ಕೆಜಿಎಫ್ 2' ಟೀಸರ್ ಬಿಡುಗಡೆಯಾದ 325 ದಿನಗಳಲ್ಲಿ ದಾಖಲೆ ಬರೆದಿದೆ. ಇಡೀ ಪ್ರಪಂಚದಲ್ಲೇ 9 ಮಿಲಿಯನ್ ಲೈಕ್ಸ್ ಗಳಿಸಿದ ಟೀಸರ್ ಇದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕನ್ನಡ ಯಾಕೆ ಭಾರತದ ಬೇರೆ ಬೇರೆ ಭಾಷೆಯ ಸಿನಿಮಾಗಳ ಟೀಸರ್ ಇಷ್ಟೊಂದು ಮೆಚ್ಚುಗೆ ಸಿಕ್ಕಿದ ಉದಾಹರಣೆಗಳು ಕಣ್ಣಿಗೆ ಬಿದ್ದಿಲ್ಲ. ಆದರೆ, ಇದು ವಿಶ್ವದಲ್ಲೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಟೀಸರ್ ಎಂದು ಯಶ್ ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆ ಆಗದೆ ಇದ್ದರೂ ಹೊಸ ದಾಖಲೆ ಬರೆದಿದ್ದಕ್ಕೆ ರಾಕಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.

  KGF 2' ರಿಲೀಸ್‌ಗೆ ನೂರೆಂಟು ವಿಘ್ನ

  KGF 2' ರಿಲೀಸ್‌ಗೆ ನೂರೆಂಟು ವಿಘ್ನ

  ಪ್ರಶಾಂತ್ ನೀಲ್​ ನಿರ್ದೇಶನದ 'ಕೆಜಿಎಫ್​ ಚಾಪ್ಟರ್ 2' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಜುಲೈ 16ರಂದು ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯಬೇಕಿತ್ತು. ಆದರೆ, ಕೊರೊನಾ ಎರಡನೇ ಅಲೆಯಿಂದ ಸಿನಿಮ ಬಿಡುಗಡೆ ಸಾಧ್ಯವಾಗಿರಲಿಲ್ಲ. ಈಗ 2022 ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಕೆಲವು ದಿನಗಳ ಹಿಂದಷ್ಟೇ ಘೋಷಿಸಿತ್ತು. ಆದ್ರೀಗ, ಆಮಿರ್ ಖಾನ್ ಅದೇ ದಿನ ತಮ್ಮ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. ಹೀಗಾಗಿ ಯಶ್ ಮತ್ತೊಬ್ಬ ಖಾನ್ ಅನ್ನು ಬಾಲಿವುಡ್‌ನಲ್ಲಿ ಎದುರಿಸಬೇಕಾಗಿದೆ.

  ಮತ್ತೆ ಮುಂದಕ್ಕೆ ಹೋಗುತ್ತಾ 'KGF 2'?

  ಮತ್ತೆ ಮುಂದಕ್ಕೆ ಹೋಗುತ್ತಾ 'KGF 2'?

  'ಕೆಜಿಎಫ್ 2' ರಿಲೀಸ್ ದಿನವೇ ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದ್ದು, ಮತ್ತೆ ಎಲ್ಲಿ ಮುಂದಕ್ಕೆ ಹೋಗುತ್ತೋ ಅನ್ನುವ ಆತಂಕ ಎದುರಾಗಿದೆ. ಆದರೆ, ಕೆಜಿಎಫ್ 2 ರಿಲೀಸ್ ಡೇಟ್ ಮತ್ತೆ ಎಂದಿಗೂ ಬದಲಾಯಿಸುವುದಿಲ್ಲ ಅನ್ನುವುದು ಚಿತ್ರತಂಡದ ಮೂಲಗಳಿಂದ ಬಂದ ಮಾಹಿತಿ. ಆದರೆ, ಆಮಿರ್ ಖಾನ್ ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ಯಶ್ ಆಗಲಿ ಚಿತ್ರತಂಡ ಆಗಲಿ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ.

  English summary
  Rocking Star Yash KGF 2 movie teaser got 9 million likes. Yash fans says this in new world record, that any other movie teaser did not got this much likes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X