'ಕಿರಾತಕ 2' ಕಥೆ ಮುಗಿದಿಲ್ಲ, ಮತ್ತೆ ಬಂತು ಜೀವ; ಏನಿದು 'ಟಾಕ್ಸಿಕ್' ಬೆನ್ನಲ್ಲೇ ಮಂಡ್ಯ ಹೈದನ ಸುದ್ದಿ?

ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುವುದಕ್ಕೂ ಮುನ್ನ ಅವರಿಗೆ ಒಂದು ಇಮೇಜ್ ಕೊಟ್ಟಿದ್ದು 'ಕಿರಾತಕ'. ಪಕ್ಕಾ ಮಂಡ್ಯ, ಮೈಸೂರು ಭಾಗದ ಕಥೆಯನ್ನು ಹೊಂದಿದ್ದ ಈ ಸಿನಿಮಾ ಸಿನಿಪ್ರಿಯರನ್ನು ನಗೆಗಡಲಲ್ಲಿ ತೇಲಿಸಿತ್ತು. ಇದೇ ಯಶ್‌ಗೆ ಸ್ಟಾರ್ ಪಟ್ಟ ಕೊಟ್ಟಿದ್ದು ಇದೇ ಸಿನಿಮಾ. ಇಲ್ಲಿಂದ ಸ್ಯಾಂಡಲ್‌ವುಡ್‌ನಲ್ಲಿ ಯಶ್ ಗಟ್ಟಿಯಾಗಿ ನೆಲೆಯೂರುವುದಕ್ಕೆ ವೇದಿಕೆ ಸೃಷ್ಟಿಯಾಗಿತ್ತು.

ಹೀಗಾಗಿ ಯಶ್ ಅಭಿಮಾನಿಗಳು ಅಷ್ಟೇ ಅಲ್ಲ. ಸಿನಿಪ್ರಿಯರು ಕೂಡ ಮತ್ತೆ ರಾಕಿಂಗ್ ಸ್ಟಾರ್ ಅನ್ನು ಕಿರಾತಕನಾಗಿ ನೋಡುವುದಕ್ಕೆ ಇಷ್ಟಪಟ್ಟಿದ್ದರು. ರಾಕಿ ಭಾಯ್ ಆಗಿ ನೋಡುವುದಕ್ಕಿಂತ ಹೆಚ್ಚಾಗಿ ಕಿರಾತಕನಾಗಿ ನೋಡುವುದಕ್ಕೆ ಹೆಚ್ಚು ಇಷ್ಟ ಪಡುತ್ತಾರೆ. ಹೀಗಾಗಿ 'ಕೆಜಿಎಫ್ ಚಾಪ್ಟರ್ 1' ಮುಗಿಯುತ್ತಿದ್ದಂತೆ 'ಕಿರಾತರ 2' ಶೂಟಿಂಗ್ ಆರಂಭಿಸಿದ್ದರು.

Rocking star Yash still has a desire to do Kirataka 2 in the future

ಆದರೆ, 'ಕೆಜಿಎಫ್ ಚಾಪ್ಟರ್ 1' ಗೆಲ್ಲುತ್ತಿದ್ದಂತೆ ಯಶ್ 'ಕಿರಾತರ 2' ನಿಲ್ಲಿಸಿದ್ದರು. ಹೀಗಾಗಿ ಇನ್ಮುಂದೆ ಹಳ್ಳಿ ಸೊಗಡಿನ ಸಿನಿಮಾವನ್ನು ಯಶ್ ಮಾಡುವುದಿಲ್ಲ ಅಂದ್ಕೊಂಡಿದ್ದಾರೆ. ಆದರೆ, ಆ ಸಿನಿಮಾವನ್ನು ನಿರ್ದೇಶನ ಮಾಡಬೇಕಿದ್ದ ಅನಿಲ್ ಕುಮಾರ್ ಫ್ಯಾನ್ಸ್ ಖುಷಿ ಪಡುವ ಸುದ್ದಿಯೊಂದನ್ನು ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನಲ್ಲಿ ರಿವೀಲ್ ಮಾಡಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

"ಯಶ್ ಅವರೇ ಬರೆಸಿಕೊಂಡ ಸ್ಕ್ರಿಪ್ಟ್"

'ಕಿರಾತಕ 2' ಸಿನಿಮಾವನ್ನು ನಿರ್ದೇಶಕ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದರು. 'ಕಿರಾತಕ 2' ಈ ಕಥೆಯನ್ನು ಸ್ವತ: ಯಶ್ ಇಷ್ಟಪಟ್ಟು ಬರೆಸಿಕೊಂಡಿದ್ದರು. "ಯಶ್ ಅವರೇ ತುಂಬಾ ಪ್ರೀತಿಯಿಂದ ಇಷ್ಟ ಪಟ್ಟು ಬರೆಸಿಕೊಂಡಿರೋ ಕಥೆ ಅದು. ನಾವೇನೋ ಈ ಸಿನಿಮಾ ಮಾಡಬೇಕು ಅಂತೇನೂ ಇರಲಿಲ್ಲ. ಅವರೇನೆ ಕಿರಾತಕ ಪ್ಯಾಟ್ರನ್, ರಾಜಾಹುಲಿ ಪ್ಯಾಟ್ರನ್ ಮಾಡ್ಬೇಕು ಅಂತಿತ್ತು. ಯಶ್ ಅವರಿಗೆ ಮಂಡ್ಯ, ಮೈಸೂರು ಭಾಗ ಇದೆಯಲ್ಲ ಅದು ರಕ್ತದಲ್ಲೇ ಇದೆ. ಅಲ್ಲಿನ ಭಾಷೆ, ಸ್ನೇಹಿತರು ಆ ಭಾಗದಲ್ಲಿ ಕೂತರೆ ಆ ಸ್ಟೈಲ್‌ನಲ್ಲೇ ಮಾತಾಡುತ್ತಾರೆ. ಅಂದ್ರೆ ಆ ಭಾಗವನ್ನು ಅಷ್ಟು ಪ್ರೀತಿ ಮಾಡುತ್ತಾರೆ." ಎಂದು ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಅನಿಲ್ ಕುಮಾರ್ ರಿವೀಲ್ ಮಾಡಿದ್ದಾರೆ.

Rocking star Yash still has a desire to do Kirataka 2 in the future

"ಹಳ್ಳಿ ಕಥೆ ಅಂದ್ರೆ ಯಶ್‌ಗೆ ಇಷ್ಟ"

ಇದೇ ಸಂದರ್ಶನದಲ್ಲಿ ಯಶ್‌ಗೆ ಹಳ್ಳಿ ಸೊಗಡಿನ ಕಥೆ ಅಂದರೆ ಇಷ್ಟ ಎಂದು ನಿರ್ದೇಶಕ ಅನಿಲ್ ಕುಮಾರ್ ರಿವೀಲ್ ಮಾಡಿದ್ದಾರೆ. "ನಾನು ಯಶ್ ಅವರು ಮೈಸೂರಿಗೆ ಫ್ರೆಂಡ್ ಮದುವೆಗೆ ಹೋಗಿ ಬರುತ್ತಿದ್ದೆವು. ಆಗ ಯಶ್ ಅವರೇ ಹಳ್ಳಿ ರಸ್ತೆಯಲ್ಲಿ ಹೋಗೋಣ ಮುಖ್ಯ ರಸ್ತೆಯಲ್ಲಿ ಬೇಡ ಅಂತ ಹೇಳಿದ್ದರು. ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ತುಂಬಾನೇ ಫೀಲ್ ಮಾಡುತ್ತಾರೆ. ಆಗ ಅವರು ಅನಿಲ್ ಈತರ ಒಂದು ವಿಲೇಜ್ ಕಥೆ ಬರೆಯಿರಿ. ಕಿರಾತಕ ತರ, ರಾಜಾಹುಲಿ ತರ ಅಂತ ಹೇಳಿದ್ದರು. ಸರಿ ಯಾಕೆ ಸೀಕ್ವೆಲ್ ಮಾಡಬಾರದು ಅಂತ ಕಿರಾತಕ ಪ್ಯಾಟ್ರನ್ ಇಟ್ಟುಕೊಂಡು ಬರೆದಿದ್ದು. ಫೂಲ್ ಫನ್ ಕ್ವಾಟ್ಲೆ ಕೊಡೋಣ ಅಂತ ಬರೆದಿದ್ದು." ಎಂದು ಕಿರಾತಕ 2 ಸ್ಟೋರಿ ಬಗ್ಗೆ ರಿವೀಲ್ ಮಾಡಿದ್ದಾರೆ.

"ಇವತ್ತಲ್ಲ ನಾಳೆ ಕಿರಾತಕ ಮಾಡ್ತಾರೆ ಯಶ್"

ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಅನಿಲ್ ಕುಮಾರ್ ಮತ್ತೊಂದು ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ್ದಾರೆ. ಇವತ್ತಲ್ಲ ನಾಳೆ 'ಕಿರಾತಕ 2' ಆಗುತ್ತೆ ಅನ್ನೋ ಸುಳಿವು ನೀಡಿದ್ದಾರೆ. "ಅಲ್ಲಿಂದ ಕಿರಾತಕ 2 ಶೂಟಿಂಗ್ ಶುರುವಾಗಿತ್ತು. 20 ದಿನ ಶೂಟಿಂಗ್ ಕೂಡ ಶುರುವಾಗಿತ್ತು. ಅದಾದ್ಮೇಲೆ ಕೆಜಿಎಫ್ ರಿಲೀಸ್ ಆಯ್ತು. ಕೆಜಿಎಫ್ 2 ರಿಲೀಸ್ ಆಯ್ತು. ಅವರ ಮಾರ್ಕೆಟ್ ಎಲ್ಲೋ ಹೋಗಿತ್ತು. ನಾವು ಏನು ಮಾಡಿದ್ದೇವು ಕಿರಾತಕ 2 ಅನ್ನು ಕರ್ನಾಟಕಕ್ಕಷ್ಟೇ ಮಾಡಿದ್ದೆವು. ಹೀಗಾಗಿ ಈ ಸಿನಿಮಾ ಮಾಡಬಾರದು ಅಂತೇನೂ ಇಲ್ಲ. ಇವತ್ತಿಗೂ ಈ ಸಿನಿಮಾವನ್ನು ಇಂದಲ್ಲ ನಾಳೆ ಮಾಡೇ ಮಾಡ್ತೀನಿ ಅಂತಾನೇ ಹೇಳ್ತಾರೆ. ಆ ಸ್ಕ್ರಿಪ್ಟ್ ಬೇರೆಯವರಿಗೆ ಮಾಡುವುದಕ್ಕೂ ರೆಡಿಯಿಲ್ಲ." ಎಂದಿದ್ದಾರೆ.

"ಪಬ್ಲಿಸಿಟಿಗೆ ಬಳಸಿಕೊಳ್ಳಬಾರದು"

"ಏನಾಗುತ್ತೆ, ಬಂದೋರೆಲ್ಲ ಹಿಂದೊಂದು ಸಿನಿಮಾ ಇತ್ತಲ್ಲ ಅಂತ ಕೇಳಿ ಬಿಡ್ತಾರೆ. ಕೆಲವು ಸಮಯ ನನಗೆ ಏನು ಅನಿಸುತ್ತೆ ಅಂದ್ರೆ, ಹೌದು ಯಶ್ ಹಾಗೂ ನಾನು ಸ್ನೇಹಿತರು ಕಿರಾತಕ ಮಾಡ್ಬೇಕಿತ್ತು ನಿಜ. ಇನ್ನೊಂದ್ಕಡೆ ಯಶ್ ಅವರ ಹೆಸರನ್ನು ಬಳಸಿಕೊಂಡು ಪಬ್ಲಿಸಿಟಿ ಮಾಡುತ್ತಾರೆ ಅಂತಾನೂ ನನಗೆ ಬೇಜಾರಿದೆ." ಎಂದು ನಿರ್ದೇಶಕ ಅನಿಲ್ ಕುಮಾರ್ ಹೇಳಿದ್ದಾರೆ.

More from Filmibeat

English summary
Yash still wants to do Kirataka 2 says director Anil Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X