ಉಡುಪಿ ಶ್ರೀಕೃಷ್ಣ ಮಠಕ್ಕೆ ಯಶ್ ಭೇಟಿ: ಕನಕನ ನವಗ್ರಹ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ
ಯಶ್ ನಟಿಸಿದ ಒಂದೇ ಒಂದು ಸಿನಿಮಾ ನ್ಯಾಷನಲ್ ಸ್ಟಾರ್ ಮಾಡಿಬಿಡಿದೆ. 'ಕೆಜಿಎಫ್ 2' ಸಿನಿಮಾ ಹವಾ ಏನೂ ಕಮ್ಮಿಯಿಲ್ಲ. ಇನ್ನೇನು ಸಿನಿಮಾ ಬಿಡುಗಡೆಗೆ ಎರಡು ತಿಂಗಳಿದೆ ಅನ್ನುವಾಗಲೇ ಯಶ್ ಆಕ್ಟೀವ್ ಆಗಿದ್ದಾರೆ. ಕರ್ನಾಟಕದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಒಂದೊಂದು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇಂದು (ಫೆಬ್ರವರಿ 06) ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.
'ಕೆಜಿಎಫ್ 2' ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಮೂರು ವರ್ಷಗಳಿಂದ 'ಕೆಜಿಎಫ್ 2' ಯಾವಾಗ ರಿಲೀಸ್ ಆಗುತ್ತೋ ಅಂತ ಕಾದು ಕೂತವರಿಗೇನು ಕಮ್ಮಿಯಿಲ್ಲ. ಆದ್ರೀಗ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗುವುದು ಬಹುತೇಕ ಕನ್ಫರ್ಮ್ ಆಗಿದೆ. ಹೀಗಾಗಿ ಯಶ್ ಟೆಂಪಲ್ ರನ್ ಮಾಡುತ್ತಿದ್ದು, 'ಕೆಜಿಎಫ್ 2' ಸಿನಿಮಾದ ಭರ್ಜರಿ ಪ್ರಚಾರಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗಿದೆ.

ಯಶ್ ಶ್ರೀ ಕೃಷ್ಣನ ದರ್ಶನ
'ಕೆಜಿಎಫ್ 2' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇಡೀ ಸಿನಿಮಾ ತಂಡ ನಿರತವಾಗಿದೆ. ಯಶ್ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತಮ್ಮನನ್ನು ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಕೆಜಿಎಫ್ ತಂಡದೊಂದಿಗೆ ರಾಕಿಂಗ್ ಸ್ಟಾರ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡುತ್ತಿದ್ದಾರೆ. ಭಾನುವಾರ (ಫೆ. 06) ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಕನಕನ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ.

ಸೆಲ್ಪಿಗಾಗಿ ಮುಗಿಬಿದ್ದ ಯಶ್ ಫ್ಯಾನ್ಸ್
ಯಶ್ ಉಡುಪಿ ಮಠಕ್ಕೆ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ದೇವಸ್ಥಾಕ್ಕೆ ಮುತ್ತಿಗೆ ಹಾಕಿದ್ದರು. ಯಶ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಈ ವೇಳೆ ಅಭಿಮಾನಿಗಳಿಗೆ ಬೇಸರ ಆಗಬಾರದೆಂದು ಸೆಲ್ಫಿಗೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಅಭಿಮಾನಿಗಳಿಗೆ ಸೆಲ್ಫಿ ನೀಡಿದ ದೃಶ್ಯ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೊಗಳು ವೈರಲ್ ಆಗುತ್ತಿವೆ.

ಬಸ್ರೂರು ಊರಲ್ಲಿ 'ಕೆಜಿಎಫ್' ತಂಡ
ಕೆಜಿಎಫ್ ಫ್ಯಾನ್ ಇಂಡಿಯಾ ಸಿನಿಮಾ. ಇಡೀ ಭಾರತವೇ ಈ ಸಿನಿಮಾಗಾಗಿ ಎದುರು ನೋಡುತ್ತಿದೆ. ಈ ಮಧ್ಯೆ 'ಕೆಜಿಎಫ್ 2'ಗೆ ಟಕ್ಕರ್ ಕೊಡಲು ದಿಗ್ಗಜರ ಸಿನಿಮಾಗಳೇ ಹೊಂಚು ಹಾಕಿವೆ. ಹೀಗಾಗಿ 'ಕೆಜಿಎಫ್ 2' ಸಿನಿಮಾ ಬಗ್ಗೆ ಚಿತ್ರತಂಡ ಮತ್ತಷ್ಟು ಸಿರೀಸ್ ಆಗಿದೆ. ಕಳೆದ ಕೆಲವು ದಿನಗಳಿಂದ ರವಿ ಬಸ್ರೂರು ಊರಿನಲ್ಲಿಯೇ ಬೀಡುಬಿಟ್ಟಿದ್ದು, ಯಶ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಸೇರಿದತೆ ಇಡೀ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರಂತರವಾಗಿ ಬ್ಯುಸಿಯಾಗಿದೆ.

ಶೇ.90 'ಕೆಜಿಎಫ್ 2' ಡಬ್ಬಿಂಗ್ ಫಿನಿಶ್
'ಕೆಜಿಎಫ್ 2' ಚಿತ್ರದ ಐದೂ ಭಾಷೆಯ ಡಬ್ಬಿಂಗ್ ಕರ್ನಾಟಕದಲ್ಲಿಯೇ ನಡೆಯುತ್ತಿದೆ. ಆಕಾಶ ಆಡಿಯೋದಲ್ಲಿ ಪರಭಾಷೆಯ ಡಬ್ಬಿಂಗ್ ನಡೆದಿದ್ದು, ಬಹುತೇಕ ಡಬ್ಬಿಂಗ್ ಕೆಲಸಗಳು ಮುಗಿದಿದೆ. ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಿಗೆ ಡಬ್ಬಿಂಗ್ ಮಾಡಲಾಗಿದ್ದು, ಶೇ. 90ರಷ್ಟ ಕೆಲಸ ಮುಗಿದೆ ಎನ್ನಲಾಗಿದೆ. ಈ ಮಧ್ಯೆ ಸಿನಿಮಾ ಟೀಸರ್ ಹಾಗೂ ಟ್ರೈಲರ್ ಬಗ್ಗೆ ಚಿತ್ರತಂಡ ತಲೆಕೆಡಿಸಿಕೊಂಡಿದೆ ಎನ್ನಲಾಗಿದೆ.


Click it and Unblock the Notifications











