'ಮಹಾಕಾಳಿ'ಗೆ ಬಾಲಿವುಡ್‌ನ ನ್ಯಾಷನಲ್ ಕ್ರಶ್ ಎಂಟ್ರಿ; ಯಾರಿದು ರೋಹಿತ್ ಸರಾಫ್ ?

ದಕ್ಷಿಣ ಭಾರತದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಆಗುತ್ತಿದೆ. ದೈವ ಶಕ್ತಿಯ ಹಿನ್ನೆಲೆಯನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಸಿನಿಮಾ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಕನ್ನಡದ ನಟರು ಹಾಗೂ ಪರಭಾಷೆಯ ನಟರ ಸಮಾಗಮ ಆಗಿರೋದು ಈ ಸಿನಿಮಾ ಮತ್ತೊಂದು ಹೈಲೈಟ್. ಅದುವೇ ಕನ್ನಡದ ನಟಿ ಭೂಮಿ ಶೆಟ್ಟಿ ನಟನೆಯ 'ಮಹಾಕಾಳಿ'.

'ಮಹಾಕಾಳಿ' ಈಗಾಗಲೇ ಫಸ್ಟ್‌ ಲುಕ್‌ನಿಂದ ಗಮನ ಸೆಳೆಯುತ್ತಿದೆ. 'ಹನುಮಾನ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾವನ್ನು ನೀಡಿದ್ದ ನಿರ್ದೇಶಕ ಪ್ರಶಾಂತ್ ವರ್ಮಾ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಹೀಗಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಅಲ್ಲದೇ ಭೂಮಿ ಶೆಟ್ಟಿಯ 'ಮಹಾಕಾಳಿ' ಕೂಡ ಅದಕ್ಕೆ ಸಪೋರ್ಟ್ ಮಾಡಿದೆ.

Rohit Saraf enters Kannada actress Bhoomi Shetty starrer Mahakaali movie

ಕನ್ನಡದ ನಟರಷ್ಟೇ ಅಲ್ಲದೆ, ಬಾಲಿವುಡ್‌ನ ಜನಪ್ರಿಯ ಸ್ಟಾರ್ ನಟರು ಕೂಡ ಈ ಸಿನಿಮಾದಲ್ಲಿ ನಟಿಸಿರೋದು ವಿಶೇಷ. ಬಾಲಿವುಡ್‌ ನ್ಯಾಷನಲ್ ಕ್ರಶ್ ಅಂತಲೇ ಜನಪ್ರಿಯವಾಗಿದ್ದ ರೋಹಿತ್ ಸರಾಫ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ನಟ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದೂ ಆಗಿದೆ. ಹಾಗಿದ್ದರೆ, ಯಾರಿದು ರೋಹಿತ್ ಸರಾಫ್? ತಿಳಿಯುವುದಕ್ಕೆ ಮುಂದೆ ಓದಿ.

ರೋಹಿತ್ ಸರಾಫ್ 'ಮಹಾಕಾಳಿ'ಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಅವರ ಭಾಗದ ಶೂಟಿಂಗ್ ಕೂಡ ಮುಗಿದಿದೆ. ಅಂದ್ಹಾಗೆ ರೋಹಿತ್ ಸರಾಫ್‌ಗೆ ಉತ್ತರ ಭಾರತದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಈಗಾಗಲೇ ಸಿನಿಮಾ ಹಾಗೂ ಕಿರುತೆರೆಯಲ್ಲಿ ರೋಹಿತ್ ಸರಾಫ್ ನಟಿಸುತ್ತಿದ್ದಾರೆ. ಹೀಗಾಗಿ ಉತ್ತರ ಭಾರತದಲ್ಲಿ ಇವರಿಗೆ ಅವರದ್ದೇ ಫ್ಯಾನ್‌ಗಳಿದ್ದಾರೆ. ಹೀಗಾಗಿ ಉತ್ತರ ಭಾರತದಲ್ಲಿ 'ಮಹಾಕಾಳಿ'ಗೆ ಬಲ ಬಂದಂತಾಗಿದೆ.

Also Read
ಕಾನ್ ಫೆಸ್ಟಿವಲ್‌ನಲ್ಲಿ 'ಲಕ್ಷ್ಮಿ ನಿವಾಸ'ದ ನಟಿ; ಮಿನಿ ಫ್ರಾಕ್‌ ತೊಟ್ಟು ಹುಡುಗರ ಎದೆ ಝಲ್ ಎನಿಸಿದ ದಿಶಾ ಮದನ್
ಕಾನ್ ಫೆಸ್ಟಿವಲ್‌ನಲ್ಲಿ 'ಲಕ್ಷ್ಮಿ ನಿವಾಸ'ದ ನಟಿ; ಮಿನಿ ಫ್ರಾಕ್‌ ತೊಟ್ಟು ಹುಡುಗರ ಎದೆ ಝಲ್ ಎನಿಸಿದ ದಿಶಾ ಮದನ್

ಅಂದ್ಹಾಗೆ, ರೋಹಿತ್ ಸರಾಫ್ ಮೂಲತ: ನೇಪಾಳದವರು. ಬಾಲ್ಯದಲ್ಲಿಯೇ ಇವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿದ್ದರು. 15 ವರ್ಷ ಇರುವಾಗಲೇ ನಟನೆಯಲ್ಲಿ ವೃತ್ತಿಯನ್ನಾಗಿಸಿಕೊಳ್ಳುವುದಕ್ಕೆ ಮುಂಬೈಗೆ ಶಿಫ್ಟ್ ಆಗಿದ್ದರು. 2016ರಲ್ಲಿ ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ನಟಿಸಿದ್ದ 'ಡಿಯರ್ ಜಿಂದಗಿ' ಇವರ ಚೊಚ್ಚಲ ಸಿನಿಮಾ. 'ಡಿಯರ್ ಜಿಂದಗಿ' ಸಿನಿಮಾದಲ್ಲಿ ಆಲಿಯಾ ಭಟ್ ಅವರ ಕಿರಿಯ ಸಹೋದರನಾಗಿ ತಮ್ಮ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅಲ್ಲಿಂದ 'ಲುಡೊ', 'ಸ್ಕೈ ಇಸ್ ಪಿಂಕ್', 'ಇಷ್ಕ್‌ ವಿಶ್ಕ್ ರಿಬೌಂಡ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ನೆಟ್‌ಫ್ಲಿಕ್ಸ್‌ನ 'ಮಿಸ್‌ಮ್ಯಾಚ್ಡ್‌' ಅನ್ನೋ ರೊಮ್ಯಾಂಟಿಕ್ ಡ್ರಾಮಾ ರೋಹಿತ್ ಸರಾಫ್ ಅವರನ್ನು ಜನಪ್ರಿಯತೆಯನ್ನು ಹೆಚ್ಚಿಸಿತ್ತು.

Rohit Saraf enters Kannada actress Bhoomi Shetty starrer Mahakaali movie

ಈಗ ರೋಹಿತ್ ಸರಾಫ್ 'ಮಹಾಕಾಳಿ'ಯಲ್ಲಿ ನಟಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾಗೆ ಬಲ ಬಂದಂತೆ ಆಗಿದೆ. ಇನ್ನು ಭೂಮಿ ಶೆಟ್ಟಿ ಜೊತೆ ಮತ್ತೊಬ್ಬ ಬಾಲಿವುಡ್ ನಟಿ ಕೂಡ ನಟಿಸಿರೋದು ವಿಶೇಷ. ಇತ್ತೀಚೆಗಷ್ಟೇ ತೆರೆಕಂಡಿರೊ 'ಧುರಂಧರ್' ಸಿನಿಮಾದಲ್ಲಿ ಮೋಡಿ ಮಾಡಿರುವ ಅಕ್ಷಯ್ ಖನ್ನಾ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಮಹಾಕಾಳಿ'ಯನ್ನು ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಆರ್‌ಕೆ ದುಗ್ಗಲ್ ಮತ್ತು ರಿವಾಜ್ ರಮೇಶ್ ದುಗ್ಗಲ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪೂಜಾ ಅಪರ್ಣಾ ಕೊಲ್ಲೂರು ಈ ಸಿನಿಮಾವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.

English summary
Rohit Saraf enters Kannada actress Bhoomi Shetty starrer Mahakaali movie.
Read more about: actress kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X