»   » ಮೈಸೂರು ಮಲ್ಲಿಗೆ:ನಾಯಕಿಯ ಅರ್ಧಕುಂಭ ದರ್ಶನ

ಮೈಸೂರು ಮಲ್ಲಿಗೆ:ನಾಯಕಿಯ ಅರ್ಧಕುಂಭ ದರ್ಶನ

Posted By:
Subscribe to Filmibeat Kannada

ಮೈಸೂರು ಮಲ್ಲಿಗೆ ಎನ್ನುವ ಹೆಸರು ಕೇಳಿದಾಕ್ಷಣ ಕನ್ನಡ ಸಾಹಿತ್ಯ ಲೋಕಕ್ಕೆ ಥಟ್ಟಂತ ನೆನಪಿಗೆ ಬರುವ ವಿಚಾರವೆಂದರೆ ಕೆ ಎಸ್ ನರಸಿಂಹಸ್ವಾಮಿ ಮತ್ತು ಅದೇ ಹೆಸರಿನಲ್ಲಿ ಟಿ ಎಸ್ ನಾಗಾಭರಣ ಅವರು ನಿರ್ದೇಶಿದ ಚಿತ್ರ.

ಪ್ರೇಮಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಬರೆದ ಹಾಡಿನಿಂದ ಸ್ಪೂರ್ಥಿ ಪಡೆದು ಮೈಸೂರು ಮಲ್ಲಿಗೆ ಚಿತ್ರವನ್ನು ನಿರ್ಮಿಸಲಾಗಿತ್ತು. 1992ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

ಮೈಸೂರು ಮಲ್ಲಿಗೆ ಎನ್ನುವ ಹೆಸರಿನಲ್ಲಿ ಅಶ್ಲೀಲ ಸಿಡಿ ಕೂಡಾ ಭಾರೀ ಗದ್ದಲವನ್ನೇ ಎಬ್ಬಿಸಿತ್ತು. ಈಗ ಯುವಕರ ಪಡೆಯೊಂದು ಅದೇ ಹೆಸರಿನಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದೆ. ಯುವಕರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿಯ ಕೆಲವೊಂದು ಬಿಂದಾಸ್ ಫೋಟೋಗಳು ತೀವ್ರ ಚರ್ಚೆಗೆ ಗುರಿಯಾಗುತ್ತಿದೆ.

ಹಳೆಯ ಮೈಸೂರು ಮಲ್ಲಿಗೆ ಚಿತ್ರದಿಂದ ಸ್ಫೂರ್ಥಿ ಪಡೆದು ಈ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ನಾಯಕಿ ರೂಪಾ ನಟರಾಜ್ ಅವರು ನೀಡಿದ ಫೋಸ್ ಗಳು ಚಿತ್ರರಂಗದ ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ರೂಪಾ ನಟರಾಜ್

ಸಂಕೋಚವಿಲ್ಲದೇ ರೂಪಾ ನಟರಾಜ್ ಫೋಟೋ ಶೂಟೌಟಿನಲ್ಲಿ ಭಾಗವಹಿಸಿದ್ದಾರೆ. ಅವರ ಉಡುಗೆ ತೊಡುಗೆ ಚಿತ್ರಕ್ಕೆ ಹೊಸ ವಿವಾದ ಸೃಷ್ಟಿಸುವ ಸಾಧ್ಯತೆ ಇಲ್ಲದಿಲ್ಲ.

ಬ್ಯಾಕ್ ಲೆಸ್ ರೂಪಾ ನಟರಾಜ್

ದಂಡುಪಾಳ್ಯದಲ್ಲಿ ಪೂಜಾಗಾಂಧಿ, ಕಡ್ದಿಪುಡಿಯಲ್ಲಿ ಐಂದ್ರಿತಾ ನಂತರದ ಸರದಿ ಈಗ ರೂಪಾ ನಟರಾಜ್ ಅವರದ್ದು. ನೋಡಿ ರೂಪಾ ಅವರ ಬ್ಯಾಕ್ ಲೆಸ್ ಭಂಗಿ.

ಮೈಸೂರು ಮಲ್ಲಿಗೆ

ಕೆಲವರು ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ ಮೂಲ ಮೈಸೂರು ಮಲ್ಲಿಗೆ ಚಿತ್ರದ ಅಭಿಮಾನಿಗಳು ಈ ಹೊಸ ಚಿತ್ರದ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಟಿ ಎಸ್ ನಾಗಾಭರಣ ಏನಂತಾರೆ?

ಈ ಹೊಸ ಮೈಸೂರು ಮಲ್ಲಿಗೆ ಚಿತ್ರದ ಬಗ್ಗೆ ನಾಗಾಭರಣ ಕೂಡಾ ಬೇಸರ ವ್ಯಕ್ತ ಪಡಿಸಿದ್ದಾರೆ. ಮೈಸೂರು ಮಲ್ಲಿಗೆ ಹೆಸರಿಡುವ ಮುನ್ನ ನಿರ್ದೇಶಕ ಆಸ್ಕರ್ ಕೃಷ್ಣ ನನ್ನ ಬಳಿ ಚರ್ಚಿಸಿಲ್ಲ ಎಂದಿದ್ದಾರೆ.

ಆಸ್ಕರ್ ಕೃಷ್ಣ ಪ್ರಕಾರ

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಆಸ್ಕರ್ ಕೃಷ್ಣ ಅವರದ್ದು. ಅವರ ಪ್ರಕಾರ ಇದೊಂದು ಅಸಮಾನ್ಯ ಕಥೆವಿರುವ ಚಿತ್ರ. ಕಷ್ಟದಿಂದ ಬೆಲೆ ಬರುವ ಹೆಣ್ಣಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುವುದೇ ಎನ್ನುವುದು ಚಿತ್ರದ ಒಟ್ಟಾರೆ ಕಥೆ.

English summary
Young team is making a movie with the title Mysore Mallige. The shocking part of the film is dare bare photos. The pictures of the female lead Roopa Nataraj have created a controversy and irked a section of Kannada film goers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada