ರೂಪೇಶ್‌ ಶೆಟ್ಟಿ-ಸಾನ್ಯಾ ಮದುವೆ ಯಾವಾಗ? ಬಿಗ್ ಬಾಸ್ ಪ್ರೇಮಿಗಳ ಕಥೆಯೇನು?

ಬಿಗ್‌ಬಾಸ್ ಕನ್ನಡ ಮನೆಯೊಳಗೆ ಲವ್‌ ಸ್ಟೋರಿಗಳನ್ನು ವೀಕ್ಷಕರು ನೋಡಿದ್ದಾರೆ. ಕೆಲವರು ಹೊರಗೆ ಬಂದ್ಮೇಲೆ ಮುಂದುವರೆಸಿದ್ದಾರೆ. ಮತ್ತೆ ಕೆಲವರು ಅದು ಕೇವಲ ಫ್ರೆಂಡ್‌ಶಿಪ್ ಅಂತಷ್ಟೇ ಹೇಳಿಕೊಂಡಿದ್ದೂ ಇದೆ. ಬಿಗ್ ಬಾಸ್‌ ಮನೆಯೊಳಗೆ ಇಬ್ಬರೂ ಲವ್ ಮಾಡುತ್ತಿದ್ದಾರೆ ಅಂತ ಅನುಮಾನ ಹುಟ್ಟಾಕಿದಂತ ಜೋಡಿಗಳಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಕೂಡ ನಿಲ್ಲುತ್ತಾರೆ.

ಬಿಗ್ ಬಾಸ್ ಮನೆಯೊಳಗೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಇಬ್ಬರ ಕೆಮಿಸ್ಟ್ರಿ ಇಂತಹದ್ದೊಂದು ಗುಮಾನಿಯನ್ನು ಹುಟ್ಟಾಕಿದ್ದು ನಿಜ. ಆದರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಈ ಜೋಡಿ ತಮ್ಮ ಲವ್ ಸ್ಟೋರಿ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಮದುವೆ ಬಗ್ಗೆ ಅಂತೂ ಎಲ್ಲೂ ಮಾತಾಡಿಲ್ಲ. ಇಬ್ಬರೂ ತಮ್ಮ ವೃತ್ತಿ ಬದುಕಿನ ಕಡೆಗೆ ಗಮನ ಹರಿಸಿದ್ದಾರೆ.

Roopesh Shetty Clarification about his marriage with Saanya Iyer

ಇತ್ತೀಚೆಗೆ ರೂಪೇಶ್ ಶೆಟ್ಟಿಗೆ ಸಾನ್ಯಾ ಐಯ್ಯರ್ ಜೊತೆ ಮದುವೆ ಯಾವಾಗ ಅನ್ನೋ ನೇರ ಪ್ರಶ್ನೆ ಎದುರಾಗಿತ್ತು. ಅದಕ್ಕೆ ರೂಪೇಶ್ ಕೊಟ್ಟ ಉತ್ತರವೇನು? ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೂ ಆ ಬಾಂಧವ್ಯ ಹಾಗೇ ಮುಂದುವರೆದಿದೆಯಾ? ಇಬ್ಬರೂ ಮದುವೆ ಆಗುತ್ತಾರಾ? ಎಲ್ಲಿವರೆ ಬಂದಿದೆ ಇಬ್ಬರ ಲವ್ ಸ್ಟೋರಿ ಅನ್ನೋದನ್ನು ಓಪನ್ ಆಗಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ರೂಪೇಶ್ ಶೆಟ್ಟಿ 'ಅಧಿಪತ್ರ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಇದೇ ಫೆಬ್ರವರಿ 7ರಂದು ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೇ ಸಿನಿಮಾ ಮೂಲಕ ನಿರೂಪಕಿ ಜಾಹ್ನವಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ವೇಳೆ ಅವರದ್ದೇ ಜಾಹ್ನವಿ ಚಾನೆಲ್ ಯೂಟ್ಯೂಬ್ ಚಾನೆಲ್‌ಗೆ ನೀಡದ ಸಂದರ್ಶನದಲ್ಲಿ ರೂಪೇಶ್‌ ಶೆಟ್ಟಿ ತಮ್ಮ ಲವ್ ಸ್ಟೋರಿ, ಸಾನ್ಯಾ ಐಯ್ಯರ್ ಹಾಗೂ ಮದುವೆ ಬಗ್ಗೆ ಓಪನ್ ಆಗಿ ಮಾಡಿದ್ದಾರೆ.

Roopesh Shetty Clarification about his marriage with Saanya Iyer

ರೂಪೇಶ್‌ ಶೆಟ್ಟಿಯನ್ನು ಸಂದರ್ಶನ ಮಾಡುತ್ತಿದ್ದ ಜಾಹ್ನವಿ ನೇರವಾಗಿ "ನಿಮ್ಮ ಹಾಗೂ ಸಾನ್ಯಾ ಮದುವೆ ಯಾವಾಗ?" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ರೂಪೇಶ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು. "ನೀವೇನು ಡೈರೆಕ್ಟ್ ಆಗಿ ಮದುವೆಗೆ ಬಂದುಬಿಟ್ರಿ. ಆ ತರಹದ ವಿಚಾರನೇ ಇಲ್ಲ. ನಾವು ತುಂಬಾನೇ ಒಳ್ಳೆಯ ಫ್ರೆಂಡ್ಸ್ ಆಗಿದ್ದೇವೆ. ಹೊರಗೆ ಬಂದ್ಮೇಲೂ ತುಂಬಾ ಒಳ್ಳೆ ಸ್ನೇಹಿತರಾಗಿದ್ದೇವೆ. ಕಾಲ್ ಮಾಡುತ್ತೇವೆ, ಮಾತಾಡುತ್ತೇವೆ. ಮೊನ್ನೆ ಅವರ ಸಿನಿಮಾ ರಿಲೀಸ್‌ ಇದ್ದಾಗ ಬರ್ತ್‌ಡೇ ದಿನಾನೂ ಊರಿಂದ ಬಂದಿದ್ದೇನೆ. ಆತರ ಎಫರ್ಟ್ಸ್ ಇದ್ದೇ ಇರುತ್ತೆ. ಯಾಕಂದ್ರೆ ಫ್ರೆಂಡ್‌ ಅಂದ್ಮೇಲೆ ಫ್ರೆಂಡ್. ಅದು ಮದುವೆವರೆಗೂ ಹೋಗುವಂತಹ ಫ್ರೆಂಡ್‌ಶಿಫ್ ಅಲ್ಲ ಅನ್ನೋ ಕ್ಲಾರಿಟಿ ನಮಗೆ ಇದೆ." ಎಂದಿದ್ದಾರೆ.

ಇದೇ ಸಂದರ್ಶನದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಅವರು, ಅವರ ಕೆಲಸದಲ್ಲಿ ಬ್ಯುಸಿ ಇದ್ದಾರೆ. ತಾನು ತನ್ನ ಕೆಲಸದಲ್ಲಿ ಬ್ಯುಸಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಧ್ಯದಲ್ಲಿ ಯಾವಾಗಲಾದರೂ ಫೋನ್ ಮಾಡಿ ಮಾತಾಡೋದು, ಭೇಟಿಯಾಗೋದು ಇರುತ್ತೆ. ಇದು ಕೇವಲ ಪ್ಯೂರ್ ಫ್ರೆಂಡ್‌ಶಿಫ್. ಇದರಲ್ಲಿ ಮದುವೆ ಎಲ್ಲ ಡೌಟ್ ಎಂದು ಸ್ಪಷ್ಟ ಕೊಟ್ಟಿದ್ದಾರೆ.

ಹಾಗಿದ್ದರೆ, ಬಿಗ್ ಬಾಸ್ ಮನೆಯೊಳಗೆ ಇಬ್ಬರಿಗೂ ಪ್ರೀತಿ ಹುಟ್ಟಿರಲಿಲ್ವಾ? ಇಂತಹದ್ದೊಂದು ಪ್ರಶ್ನೆ ಹುಟ್ಟಿಕೊಳ್ಳುವುದು ಸತ್ಯ. ಅದಕ್ಕೂ ರೂಪೇಶ್ ಶೆಟ್ಟಿ ಕ್ಲಾರಿಟಿಕೊಟ್ಟಿದ್ದಾರೆ. "ಬಿಗ್‌ಬಾಸ್ ಮನೆಯೊಳಗೆ ಇರುವಾಗಲೂ ನಿಜವಾದ ಸ್ನೇಹವೇ ಇತ್ತು. ಬಿಗ್‌ಬಾಸ್ ಮನೆಯೊಳಗೆ ಹೋದಾಗ ಯಾರಾದರೂ ಬೇಕಾಗುತ್ತಾರೆ. ಒಳ್ಳೆಯ ಕನೆಕ್ಷನ್ ಸಿಕ್ಕಿದರೆ, ಅದು ಒಳ್ಳೆಯ ಗಿಫ್ಟ್ ಅಂತ ಅನಿಸುತ್ತೆ. ಹೊರಗಡೆ ಬಂದಾಗ ಆ ಫ್ರೆಂಡ್‌ಶಿಪ್ ಹಾಗೇ ಇರುತ್ತೆ. ಒಳಗಡೆ ಕಂಡಿದ್ದು ಲವ್ ಅಂತಾನೇ ಹೇಳುವುದಕ್ಕೆ ಆಗಲ್ಲ. ಒಳಗಡೆ ಇರುವ ಫ್ರೆಂಡ್‌ಶಿಪ್‌ ಕೂಡ ಲವ್ ತರ ಕಾಣಬಹುದು. ಲವ್ ಅಂದರೆ ಅದೊಂತರ ಕಮಿಟ್ಮೆಂಟ್ ಅಲ್ವಾ? ಅದಕ್ಕೆ ಹಲವು ಹಂತಗಳು ಇರುತ್ತವೆ. ಸದ್ಯ ಲವ್ ಇಲ್ಲ ಅನ್ನೋದು ಸತ್ಯ. ಫ್ರೆಂಡ್‌ಶಿಪ್ ಆದ್ಮೇಲೆ ಲವ್ ಆಗಬಹುದು ಅದು ಒಳ್ಳೆಯ ಪ್ರಶ್ನೆ" ಎಂದು ಕೊನೆಯಲ್ಲಿ ಗೊಂದಲಕ್ಕೂ ಸಿಲುಕಿಸಿದ್ದಾರೆ.

More from Filmibeat

English summary
Roopesh Shetty Clarification about his marriage with Saanya Iyer;
Read more about: roopesh saanya iyer marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X