ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್

Recommended Video

ದರ್ಶನ್ ಅಂದುಕೊಂಡಿದ್ದೇ ಒಂದು ಆಗಿದ್ದೇ ಒಂದು..! | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರಿ ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರು ಚಾಲಕ ಎಂದು ಹೇಳಲಾಗುತ್ತಿದ್ದ ರಾಯ್ ಆಂಟೋನಿ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಗೊತ್ತಿಲ್ಲ.

ಆದ್ರೂ, ಅಪಘಾತವಾದ ಸಂದರ್ಭದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಈಗ ರಾಯ್ ಆಂಟೋನಿ ಆರೋಪಿಯಾಗಿದ್ದಾರೆ. ನಿಜಾ ಏನಪ್ಪಾ ಅಂದ್ರೆ ಈ ರಾಯ್ ಆಂಟೋನಿ ದರ್ಶನ್ ಅವರ ಕಾರು ಚಾಲಕನಲ್ಲ. ಹಾಗಿದ್ರೂ, ಕಾರು ಚಾಲನೆ ಮಾಡಿದ್ದೇಕೆ.? ದರ್ಶನ್ ಅವರ ಕಾರ್ ಡ್ರೈವರ್ ಇರಲಿಲ್ವಾ.? ಎಂಬ ಪ್ರಶ್ನೆಗಳು ಕಾಡುತ್ತೆ.

ದರ್ಶನ್ ಅವರ ಕಾರು ಡ್ರೈವರ್ ಎಲ್ಲಿದ್ರು, ಅವರೇಕೆ ಕಾರು ಡ್ರೈವ್ ಮಾಡಿಲ್ಲ ಎಂಬ ಪ್ರಶ್ನೆಗಳಿಗೆ ನಿರ್ಮಾಪಕ ಸಂದೇಶ್ ಸ್ಪಷ್ಟನೆ ನೀಡಿದ್ದಾರೆ. ಇಂದು ಮಾಧ್ಯಮದವರು ಜೊತೆ ಮಾತನಾಡಿದ ಸಂದೇಶ್ ಅಪಘಾತ ಪ್ರಕರಣದಲ್ಲಿ ಕೇಂದ್ರಬಿಂದು ಆಗಿರುವ ರಾಯ್ ಆಂಟೋನಿ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದೆ. ಮುಂದೆ ಓದಿ.....

ರಾಯ್ ಆಂಟೋನಿ ದರ್ಶನ್ ಸ್ನೇಹಿತ

ರಾಯ್ ಆಂಟೋನಿ ದರ್ಶನ್ ಸ್ನೇಹಿತ

ರಾಯ್ ಆಂಟೋನಿ ನಟ ದರ್ಶನ್ ಅವರ ಕಾರ್ ಡ್ರೈವರ್ ಅಲ್ಲ. ದರ್ಶನ್ ಗೆ ಹಳೆಯ ಸ್ನೇಹಿತ. ಅಪಘಾತವಾದ ರಾತ್ರಿ ದರ್ಶನ್ ಕಾರ್ ಡ್ರೈವರ್ ಇದ್ರೂ, ರಾಯ್ ಆಂಟೋನಿ ಕಾರು ಚಾಲನೆ ಮಾಡಿಕೊಂಡು ಹೋದರು ಎಂದು ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ.

ಅಂದು ರಾತ್ರಿ ನಡೆದಿದ್ದು ಇಷ್ಟು.!

ಅಂದು ರಾತ್ರಿ ನಡೆದಿದ್ದು ಇಷ್ಟು.!

ಅಂದು ರಾತ್ರಿ ಮೈಸೂರಿನ ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ಶೂಟಿಂಗ್ ಇತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬರ್ತಾರೆ ಎಂಬ ಕಾರಣಕ್ಕೆ ಭದ್ರತೆ ದೃಷ್ಟಿಯಿಂದ ಶೂಟಿಂಗ್ ಕ್ಯಾನ್ಸಲ್ ಆಯ್ತು. ಅಲ್ಲಿಗೆ ಕೆಲವರನ್ನ ಬೆಂಗಳೂರಿಗೆ ವಾಪಸ್ ಕಳಿಸಿದ್ವಿ.

ಬೆಂಗಳೂರಿಗೆ ಹೋಗುವ ಪ್ಲಾನ್ ಆಯಿತು

ಬೆಂಗಳೂರಿಗೆ ಹೋಗುವ ಪ್ಲಾನ್ ಆಯಿತು

ಆಮೇಲೆ ಬೆಂಗಳೂರಿಗೆ ಹೋಗುವ ಪ್ಲಾನ್ ಆಯಿತು. ಈ ವೇಳೆ ದರ್ಶನ್ ಅವರು ಬರ್ತಡೇ ಪಾರ್ಟಿ ಮುಗಿಸಿ ಬರ್ತೀವಿ ಅಂದ್ರು. ರಾಯ್ ಆಂಟೋನಿ ದರ್ಶನ್ ಕಾರ್ ಡ್ರೈವರ್ ಅಲ್ಲ. ಲಕ್ಷ್ಮಣ್ ನಿಜವಾದ ಕಾರ್ ಡ್ರೈವರ್. ದೇವರಾಜ್, ಪ್ರಜ್ವಲ್, ಜನ ಜಾಸ್ತಿ ಇದ್ರು. ಹಾಗಾಗಿ, ಸುಮ್ಮನೇ ಡ್ರೈವರ್ ಯಾಕೆ. ನಾನೇ ಡ್ರೈವ್ ಮಾಡ್ತೀನಿ ಅಂತ ರಾಯ್ ಆಂಟೋನಿ ಕೂತ್ಕೊಂಡ್ರು. ಅಲ್ಲಿಗೆ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಸುಮ್ಮನಾದರು.

ಶೂಟಿಂಗ್ ಇದ್ದಿದ್ರೆ ಚೆನ್ನಾಗಿತ್ತು

ಶೂಟಿಂಗ್ ಇದ್ದಿದ್ರೆ ಚೆನ್ನಾಗಿತ್ತು

ಈ ಮೊದಲೇ ನಿರ್ಧರಿಸಿದಂತೆ ನೈಟ್ ಶೂಟಿಂಗ್ ಇದ್ದಿದ್ರೆ ಎಲ್ಲವೂ ಸರಿಯಾಗಿತ್ತು. ಕಾರಣಾಂತರಗಳಿಂದ ಅದು ಕ್ಯಾನ್ಸಲ್ ಆಯ್ತು. ಆದ್ರೆ, ಹೀಗೆ ಆಯ್ತು. ಈಗ ರಾಯ್ ಆಂಟೋನಿ ಆರಾಮಾಗಿದ್ದಾರೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕೈಗೂ ಪೆಟ್ಟಾಗಿದೆ ಎಂದು ಸಂದೇಶ ಸ್ಪಷ್ಟಪಡಿಸಿದ್ದಾರೆ.

ರಾಯ್ ಆಂಟೋನಿ ವಿರುದ್ಧ ದೂರು

ರಾಯ್ ಆಂಟೋನಿ ವಿರುದ್ಧ ದೂರು

ಮತ್ತೊಂದೆಡೆ ದರ್ಶನ್ ಅವರ ಕಾರು ಚಾಲಕ ಲಕ್ಷ್ಮಣ್ ಅವರು, ವಿವಿಪುರಂ ಪೊಲೀಸ್ ಠಾಣೆಯಲ್ಲಿ ರಾಯ್ ಆಂಟೋನಿ ವಿರುದ್ಧ ದೂರು ದಾಖಲಿಸಿದ್ದಾರೆ. ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಕಂಪ್ಲೆಂಟ್ ನೀಡಲಾಗಿದೆ.

More from Filmibeat

English summary
Roy antony is not darshan car driver, he was darshan friend said producer sandesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X