ದರ್ಶನ್ ಕಾರು ಅಪಘಾತ: ರಾಯ್ ಆಂಟೋನಿ ಬಲಿಪಶು.?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಗೊಂಡಿದೆ. ಅಪಘಾತದಲ್ಲಿ ದರ್ಶನ್ ಕೈ ಮೂಳೆ ಮುರಿದಿದೆ. ದರ್ಶನ್ ಜೊತೆಗೆ ಪ್ರಯಾಣ ಮಾಡುತ್ತಿದ್ದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡ ಗಾಯಗೊಂಡಿದ್ದಾರೆ.
ಅಪಘಾತವಾಗಿ ಮೂರು ಜನ ಗಾಯಗೊಳ್ಳಲು ರಾಯ್ ಆಂಟೋನಿ ಕಾರಣ. ರಾಯ್ ಆಂಟೋನಿ ಅವರ ಅಜಾಗರೂಕತೆಯಿಂದಲೇ ಆಕ್ಸಿಡೆಂಟ್ ನಡೆದಿದೆ ಎಂಬ ದೂರು ದಾಖಲಾಗಿದೆ. ಈ ಮೂಲಕ ಈ ಅಪಘಾತ ಪ್ರಕರಣದಲ್ಲಿ ರಾಯ್ ಆಂಟೋನಿ ಅವರನ್ನ ಮಾತ್ರ ಬಲಿಪಶು ಮಾಡಲಾಗಿದೆ.
ಇದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಗೆ ಅಲೆಯುವ ಹಾಗಿಲ್ಲ. ದಂಡ ಕೂಡ ಕಟ್ಟುವ ಹಾಗಿಲ್ಲ. ಕೇಸ್ ನಿಂದ ಬಚಾವ್ ಆಗಲು ಸ್ಟಾರ್ ನಟರು ಹೀಗೆ ಮಾಡಿದ್ದಾರಾ ಎಂಬ ಅನುಮಾನ ಸಹಜವಾಗಿ ಎಲ್ಲರಿಗೂ ಕಾಡುತ್ತಿದೆ. ಮುಂದೆ ಓದಿರಿ...

ರಾಯ್ ಆಂಟೋನಿ ವಿರುದ್ಧ ದೂರು ದಾಖಲು
ಐಪಿಸಿ ಸೆಕ್ಷನ್ 279, 337, 338 ಅಡಿಯಲ್ಲಿ ರಾಯ್ ಆಂಟೋನಿ ವಿರುದ್ಧ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಹಾಗೂ ಖಾಸಗಿ ಗನ್ ಮ್ಯಾನ್ ದೂರು ನೀಡಿದ್ದಾರೆ. ರಾಯ್ ಆಂಟೋನಿ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಕಾರು ಚಲಾಯಿಸುತ್ತಿದ್ದ ರಾಯ್ ಆಂಟೋನಿ
ಘಟನೆ ನಡೆದಾಗ, ರಾಯ್ ಆಂಟೋನಿ ಕಾರು ಚಾಲನೆ ಮಾಡುತ್ತಿದ್ದರು. ಮೂವರು ನಟರು ಗಾಯಗೊಳ್ಳಲು, ರಾಯ್ ಆಂಟೋನಿ ನಿರ್ಲಕ್ಷ್ಯ ಕಾರಣ ಎಂದು ಎಫ್.ಐ.ಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ದಂಡದ ಜೊತೆಗೆ ಶಿಕ್ಷೆ ಸಾಧ್ಯತೆ
ಅಪಘಾತ ಪ್ರಕರಣ ಸದ್ಯ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ರಾಯ್ ಆಂಟೋನಿ ಮೇಲೆ ದಂಡ ವಿಧಿಸಬಹುದು, ಶಿಕ್ಷೆ ಕೂಡ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಿಕಿತ್ಸೆ ಪಡೆಯುತ್ತಿರುವ ರಾಯ್ ಆಂಟೋನಿ
ಕಾರು ಅಪಘಾತದಲ್ಲಿ ರಾಯ್ ಆಂಟೋನಿ ಅವರಿಗೂ ಗಾಯಗಳಾಗಿವೆ. ಅವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದ ನಿವಾಸಿಯಂತೆ ಈ ರಾಯ್ ಆಂಟೋನಿ.


Click it and Unblock the Notifications











