For Quick Alerts
  ALLOW NOTIFICATIONS  
  For Daily Alerts

  RRR Day 1 Collection Karnataka: ಕರ್ನಾಟಕದಲ್ಲಿ RRR ಮೊದಲ ದಿನದ ಗಳಿಕೆ ಲೆಕ್ಕಾಚಾರವೆಷ್ಟು?

  |

  RRR ಸಿನಿಮಾ ಕರ್ನಾಟಕದಲ್ಲೂ ಅದ್ದೂರಿ ಆರಂಭ ಮಾಡಿದೆ. ಈ ಸಿನಿಮಾ ಬಗ್ಗೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ಮಾಸ್ಟರ್‌ಪೀಸ್ ಎನ್ನುತ್ತಿದ್ದಾರೆ. ಜೂ. ಎನ್‌ಟಿಆರ್ ಹಾಗೂ ರಾಮ್‌ ಚರಣ್ ಕಾಂಬಿನೇಷನ್‌ಗೆ ಪ್ರೇಕ್ಷಕರು ಪಾಗಲ್ ಆಗಿದ್ದಾರೆ. ಥಿಯೇಟರ್‌ನಲ್ಲಿ ಪ್ರೇಕ್ಷಕರು ಹೆಚ್ಚೆದ್ದು ಕುಣಿಯುತ್ತಿದ್ದಾರೆ.

  Recommended Video

  RRR 1st Day Collection | RRR ಮೊದಲ ದಿನ ಮಾಡಿದ ಕಲೆಕ್ಷನ್ ನಲ್ಲಿ ಎಷ್ಟು ಸಿನಿಮಾ ನಿರ್ಮಾಣ ಮಾಡಬಹುದು ಗೊತ್ತ

  ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ RRR ಸಿನಿಮಾ ನೋಡಿದ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಸಿನಿಮಾ ಕನ್ನಡಿಗರು ಸಿನಿಮಾ ನೋಡಿ ಗ್ರೀನ್ ಸಿಗ್ನಲ್ ಕೊಟ್ಟರೆ, ಮುಗೀತು ಆ ಸಿನಿಮಾ ಬಾಕ್ಸಾಫೀಸ್‌ನಲ್ಲ ಧೂಳೆಬ್ಬಿಸುವುದು ಗ್ಯಾರಂಟಿ. ಹೀಗಾಗಿ ಎಲ್ಲರ ಗಮನ ಕರ್ನಾಟಕದ ಬಾಕ್ಸಾಫೀಸ್‌ ಮೇಲೆ ನೆಟ್ಟಿದೆ. ಮೊದಲ ದಿನ ಕರ್ನಾಟಕದಲ್ಲಿ ಈ ಸಿನಿಮಾ ಎಷ್ಟು ಗಳಿಸಬಹುದು ಎನ್ನುವ ಲೆಕ್ಕಾಚಾರ ಈಗಾಗಲೇ ಆರಂಭ ಆಗಿದೆ.

  RRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿRRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿ

  ಕರ್ನಾಟಕದ RRR ಕನ್ನಡ ಅವತರಣಿಕೆಯನ್ನು ತೋರಿಸಬೇಕು ಎಂಬ ಒತ್ತಡ ವಿತರಕರ ಮೇಲಿತ್ತು. ಹೆಚ್ಚು ಥಿಯೇಟರ್‌ಗಳಲ್ಲಿ ತೆಲುಗಿ ವರ್ಷನ್ ಅನ್ನೇ ಹಾಕಲಾಗಿದೆ. ಕನ್ನಡ ಅವತರಣೆಕೆಯನ್ನು ಯಾಕೆ ಹಾಕುತ್ತಿಲ್ಲ ಎಂದು ಆಕ್ರೋಶಗೊಂಡಿದ್ದರು. ಕರ್ನಾಟಕದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಿ ಅಂತಲೂ ಸುದ್ದಿ ಹಬ್ಬಿತ್ತು. ಆದ್ರೀಗ ವಿವಾದ ಸುಖಾಂತ್ಯಗೊಂಡಿದೆ. RRR ಎಲ್ಲೆಡೆ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

  RRR ಹವಾ ಕರ್ನಾಟಕದಲ್ಲಿ ಹೇಗಿದೆ?

  RRR ಹವಾ ಕರ್ನಾಟಕದಲ್ಲಿ ಹೇಗಿದೆ?

  RRR ಸಿನಿಮಾ ಕರ್ನಾಟಕದಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಮಧ್ಯರಾತ್ರಿ 12.30ರಿಂದಲೇ ಅಭಿಮಾನಿಗಳಿಗಾಗಿ ವಿಶೇಷ ಶೋಗಳನ್ನು ಪ್ರದರ್ಶನ ಮಾಡಲಾಗಿದೆ. ಮೊದಲ ದಿನ ಕರ್ನಾಟಕದಲ್ಲಿ RRR ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಉಳಿದ ಭಾಗಗಳಲ್ಲೂ ಸಿನಿಮಾ ನೋಡಲು ಜನರು ಚಿತ್ರಮಂದಿರಕ್ಕೆ ಧಾವಿಸುತ್ತಿದ್ದಾರೆ. ಈ ಕಾರಣಕ್ಕೆ ಮೊದಲ ದಿನವೇ ಬಾಕ್ಸಾಪೀಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುತ್ತೆ ಎನ್ನಲಾಗಿದೆ.

  RRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವRRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ

  ಮೊದಲ ದಿನ ಬೆಂಗಳೂರಿನಲ್ಲಿ ಎಷ್ಟು ಶೋ?

  ಮೊದಲ ದಿನ ಬೆಂಗಳೂರಿನಲ್ಲಿ ಎಷ್ಟು ಶೋ?

  ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳಲ್ಲಿ ಯಾವ ಭಾಷೆಯ ಪ್ರೇಕ್ಷಕರು ಹೆಚ್ಚು ಬರುತ್ತಾರೋ ಆ ಭಾಷೆಯಲ್ಲೇ ಸಿನಿಮಾ ತೋರಿಸಲಾಗುತ್ತಿದೆ. ಮೂಲಗಳ ಪ್ರಕಾರ, ಈ ಸಿನಿಮಾ 2ಡಿ ಹಾಗೂ 3ಡಿ ಎರಡು ಭಾಷೆಯಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಬುಕ್ ಮೈ ಶೋ ಪ್ರಕಾರ, ಬೆಂಗಳೂರಿನಲ್ಲಿ 21 ಚಿತ್ರಮಂದಿರಗಳಲ್ಲಿ ಕನ್ನಡದ ಅವತರಣಿಕೆ ಪ್ರಸಾರ ಆಗುತ್ತಿದೆ. ಎಲ್ಲವೂ 2ಡಿ ಸಿನಿಮಾಗಳು. ಆದರೆ, 3ಡಿಯಲ್ಲಿ ಒಂದೇ ಒಂದು ಶೋ ಕೂಡ ಇಲ್ಲ. ತೆಲುಗಿನಲ್ಲಿ 626 ಶೋಗಳು ಮೊದಲ ದಿನ ಪ್ರದರ್ಶನ ಕಾಣುತ್ತಿದೆ. ಒಂದು ಅಂದಾಜಿನ ಪ್ರಕಾರ, ಮೊದಲ ದಿನವೇ ಬೆಂಗಳೂರಲ್ಲಿ ಸುಮಾರು 791 ಶೋ ಪ್ರದರ್ಶನ ಕಾಣುತ್ತಿದೆ.

  ರಾಜ್ಯದಲ್ಲಿ ಮೊದಲ ದಿನ ಗಳಿಕೆ ಲೆಕ್ಕಾಚಾರವೇನು?

  ರಾಜ್ಯದಲ್ಲಿ ಮೊದಲ ದಿನ ಗಳಿಕೆ ಲೆಕ್ಕಾಚಾರವೇನು?

  ಕರ್ನಾಟಕದಲ್ಲೂ RRR ಕನ್ನಡದ ಸೂಪರ್‌ಸ್ಟಾರ್ ಸಿನಿಮಾದಂತೆ ರಿಲೀಸ್ ಆಗುವ ರೇಂಜಿನಲ್ಲೇ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದ್ದು, ಕರ್ನಾಟಕದ ಉಳಿದ ಭಾಗಗಳಲ್ಲಿ ಸಾಧಾರಣ ಎನ್ನಲಾಗಿದೆ. ಹೀಗಾಗಿ ಮೊದಲ ದಿನದ ಗಳಿಕೆ ಸುಮಾರು 10 ರಿಂದ 12 ಕೋಟಿ ದಾಟಬಹುದು ಎಂದು ವಿತರಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಬೆಂಗಳೂರು ಬಿಟ್ಟು ಕರ್ನಾಟಕದ ಉಳಿದ ಭಾಗಗಳಲ್ಲಿ ಸಿನಿಮಾಗೆ ಇನ್ನೂ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

  RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

  ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟಾಗಬಹುದು?

  ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟಾಗಬಹುದು?

  RRR ವಿಶ್ವದಾದ್ಯಂತ ಎಷ್ಟು ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಒಂದು ಅಂದಾಜಿನ ಪ್ರಕಾರ, RRR ಮೊದಲ ದಿನ ವಿಶ್ವದಾದ್ಯಂತ ಗಳಿಕೆ 200 ರಿಂದ 250 ಕೋಟಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ಕೇವಲ ಆಂಧ್ರ ಪ್ರದೇಶದಲ್ಲೇ 100 ಕೋಟಿ ಗಳಿಕೆ ಮಾಡುತ್ತೆ ಎಂದು ಹೇಳಲಾಗುತ್ತಿದೆ. ರಾಜಮೌಳಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತದ ಮೇಲೆ ಕಣ್ಣಟ್ಟಿರುವುದು ಕನ್ಫರ್ಮ್‌. ಆದರೆ, ತನ್ನದೇ ಸಿನಿಮಾ ಬಾಹುಬಲಿ ಗಳಿಕೆಯನ್ನು ಮೀರಿಸುತ್ತಾ? ಅನ್ನುವುದು ಕುತೂಹಲ.

  English summary
  RRR movie Box Office Collection in Karnataka : Here is the Jr NTR, Ram Charan Starrer RRR Movie Day 1 Box collection predictions in Karnataka.
  Friday, March 25, 2022, 14:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X