For Quick Alerts
  ALLOW NOTIFICATIONS  
  For Daily Alerts

  ಜಪಾನ್‌ನಲ್ಲಿ RRR ರಿಲೀಸ್‌ಗೆ ಸಿದ್ಧತೆ: 'ಕೆಜಿಎಫ್ 2' ದಾಖಲೆ ಮುರಿಯಲು ಮಾಸ್ಟರ್ ಪ್ಲ್ಯಾನ್!

  |

  'ಕೆಜಿಎಫ್ ಚಾಪ್ಟರ್ 2' ಕನ್ನಡದ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡಿ ಅಚ್ಚರಿ ಮೂಡಿಸಿತ್ತು. ಸದ್ಯಕ್ಕೆ 'ಕೆಜಿಎಫ್ 2' ವಿಶ್ವದಾದ್ಯಂತ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ.

  'ಕೆಜಿಎಫ್ 2' ಇಂತಹದ್ದೊಂದು ಸಾಧನೆ ಮಾಡುತ್ತೆ ಅನ್ನೋದನ್ನೇ ಯಾರೂ ಊಹಿಸಿರಲಿಲ್ಲ. ಅದರಲ್ಲೂ ರಾಜಮೌಳಿಯಂತಹ ದಿಗ್ಗಜನ ಸಿನಿಮಾವನ್ನೇ ಬೀಟ್ ಮಾಡುತ್ತೆ ಅನ್ನೋ ಚಿಕ್ಕದೊಂದು ಕಲ್ಪನೆ ಕೂಡ ಇರಲಿಲ್ಲ. ಸದ್ಯಕ್ಕೀಗ 'ಕೆಜಿಎಫ್ 2' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ RRR ಸಿನಿಮಾವನ್ನು ಹಿಂದಿಕ್ಕಿದೆ.

  RRR ಬಳಿಕ ನೆಟ್‌ಫ್ಲಿಕ್ಸ್ ಕಡೆ ವಾಲುತ್ತಿದ್ದಾರಂತೆ ಟಾಲಿವುಡ್‌ ತಾರೆಯರು: ಯಾಕೆ?RRR ಬಳಿಕ ನೆಟ್‌ಫ್ಲಿಕ್ಸ್ ಕಡೆ ವಾಲುತ್ತಿದ್ದಾರಂತೆ ಟಾಲಿವುಡ್‌ ತಾರೆಯರು: ಯಾಕೆ?

  'ಕೆಜಿಎಫ್ 2' ಸಿನಿಮಾದ ದಾಖಲೆಯನ್ನು ಮುರಿಯುವುದಕ್ಕೆ RRR ಮಾಸ್ಟರ್ ಪ್ಲ್ಯಾನ್ ಮಾಡಿದೆ. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ಜಪಾನ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಹೊರಟಿದೆ. ಹೀಗಾಗಿ 'ಕೆಜಿಎಫ್ 2' ವರ್ಲ್ಡ್‌ವೈಡ್ ಬಾಕ್ಸಾಫೀಸ್‌ನಲ್ಲಿ ಮಾಡಿದ ಕಲೆಕ್ಷನ್ ಅನ್ನು ಉಡೀಸ್ ಮಾಡಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.

  ಜಪಾನ್‌ನಲ್ಲಿ RRR ರಿಲೀಸ್

  ಜಪಾನ್‌ನಲ್ಲಿ RRR ರಿಲೀಸ್

  ಕೆಲವು ದಿನಗಳ ಹಿಂದಷ್ಟೇ RRR ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಒಟಿಟಿಗೆ ರಾಜಮೌಳಿ ಸಿನಿಮಾ ಬಿಡುಗಡೆಯಾಗಿದ್ದೇ ಆಗಿದ್ದು, ವಿಶ್ವದ ಮೂಲೆ ಮೂಲೆಯಿಂದಲೂ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಕಾರಣಕ್ಕಾಗಿ ವಿದೇಶದಲ್ಲಿ ಎಲ್ಲೆಲ್ಲಿ ಬಿಡುಗಡೆಯಾಗಿಲ್ಲವೋ ಅಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಅಕ್ಟೋಬರ್ 21ಕ್ಕೆ RRR ಜಪಾನ್‌ನಲ್ಲಿ ರಿಲೀಸ್ ಆಗಲಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಟ್ರೇಡ್ ಅನಲಿಸ್ಟ್‌ಗಳು ಹೊಸ ಲೆಕ್ಕಾಚಾರ ಹಾಕುತ್ತಿದ್ದಾರೆ.

  ಒಂದೇ ಏಟಿಗೆ ರಾಮ್‌ಚರಣ್ ಹಿಂದಿಕ್ಕಿದ ಎನ್‌ಟಿಆರ್; ಟ್ವಿಟರ್‌ನಲ್ಲಿ ಹೊಸ ರೆಕಾರ್ಡ್ಒಂದೇ ಏಟಿಗೆ ರಾಮ್‌ಚರಣ್ ಹಿಂದಿಕ್ಕಿದ ಎನ್‌ಟಿಆರ್; ಟ್ವಿಟರ್‌ನಲ್ಲಿ ಹೊಸ ರೆಕಾರ್ಡ್

  'ಕೆಜಿಎಫ್ 2' ಗಳಿಕೆ ಮೇಲೆ ರಾಜಮೌಳಿ ಕಣ್ಣು

  'ಕೆಜಿಎಫ್ 2' ಗಳಿಕೆ ಮೇಲೆ ರಾಜಮೌಳಿ ಕಣ್ಣು

  'ಕೆಜಿಎಫ್ ಚಾಪ್ಟರ್ 2' ವಿಶ್ವದಾದ್ಯಂತ 1230 ಕೋಟಿ ರೂ. ಗಳಿಕೆ ಕಂಡಿತ್ತು. ಕಲೆಕ್ಷನ್ ವಿಚಾರದಲ್ಲಿ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾವನ್ನೂ ಹಿಂದೇಟು ಹಾಕಿತ್ತು. ಜೂ. ಎನ್‌ಟಿಆರ್, ರಾಮ್‌ಚರಣ್, ಆಲಿಯಾ ಭಟ್, ಅಜಯ್‌ ದೇವಗನ್ ಅಂತಹ ತಾರೆಯರನ್ನಿಟ್ಟುಕೊಂಡ ಸಿನಿಮಾ 1144 ಕೋಟಿ ರೂ. ಗಳಿಕೆ ಕಂಡಿತ್ತು. ಸದ್ಯ 'ಕೆಜಿಎಫ್ 2' ಹಾಗೂ RRR ನಡುವೆ 86 ಕೋಟಿ ರೂ. ಅಂತರವಿದೆ. ಈಗ ಜಪಾನ್‌ನಲ್ಲಿ ರಿಲೀಸ್ ಆಗುತ್ತಿರುವುದರಿಂದ 'ಕೆಜಿಎಫ್ 2' ಅನ್ನು ಹಿಂದಿಕ್ಕೆ ಹಾಕಬಹುದು ಎಂದು ಅಂದಾಜಿಸಲಾಗಿದೆ.

  'ಕೆಜಿಎಫ್ 2'ಗೆ ಕೊಡುತ್ತಾ ಟಕ್ಕರ್!

  'ಕೆಜಿಎಫ್ 2'ಗೆ ಕೊಡುತ್ತಾ ಟಕ್ಕರ್!

  ಭಾರತೀಯ ಸಿನಿಮಾಗಳಿಗೆ ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಲ್ಲಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ರಜನಿಕಾಂತ್ ಸಿನಿಮಾಗಳು ಜಪಾನ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತವೆ. ಇತ್ತೀಚೆಗೆ ಕಿಚ್ಚ ಸುದೀಪ್‌ಗೂ ಜಪಾನ್‌ನಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ. ಆದರೂ, ಜಪಾನ್‌ ಒಂದರಲ್ಲಿಯೇ 86 ಕೋಟಿ ರೂ. ಗಳಿಕೆ ಮಾಡುವುದು ಅನುಮಾನವೇ. ಹೀಗಾಗಿ ಜಪಾನ್ ಜೊತೆಗೆ ಬೇರೆ ದೇಶದಲ್ಲಿಯೂ ರಿಲೀಸ್ ಮಾಡಲೇಬೇಕು.

  ಚೀನಾ. ಜಪಾನ್‌ನಲ್ಲಿ ರಿಲೀಸ್ ಆಗಲ್ವಾ?

  ಚೀನಾ. ಜಪಾನ್‌ನಲ್ಲಿ ರಿಲೀಸ್ ಆಗಲ್ವಾ?

  ರಾಜಮೌಳಿ ಸಿನಿಮಾ RRR, 'ಕೆಜಿಎಫ್ 2' ಕಲೆಕ್ಷನ್ ಅನ್ನು ಹಿಂದಕ್ಕೆ ಹಾಕುವ ಸಾಧ್ಯತೆಯಿದೆ. ಇನ್ನೊಂದು ಕಡೆ 'ಕೆಜಿಎಫ್ 2' ಕೂಡ ಜಪಾನ್ ಹಾಗೂ ಚೀನಾದಲ್ಲಿ ಬಿಡುಗಡೆಯಾದರೆ, ಬಾಕ್ಸಾಫೀಸ್‌ ಚಿಂದಿ ಉಡಾಯಿಸಬಹುದು. ಹಾಗೇನಾದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬಿಟ್ಟರೆ ಮತ್ತೆ ಸದ್ದು ಮಾಡಿದಂತೆ ಆಗುತ್ತೆ. ಎಲ್ಲದಕ್ಕೂ ಜಪಾನ್‌ನಲ್ಲಿ ಬಿಡುಗಡೆಯಾಗುತ್ತಿರುವ RRR ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ? ಅನ್ನೋದು ಕುತೂಹಲ.

  Recommended Video

  Niveditha Gowda ಹೊಸ ಸಾಧನೆಗೆ ಅಭಿಮಾನಿಗಳೆಲ್ಲಾ ಖುಷ್ *Sandalwood | Filmibeat Kannada
  English summary
  RRR Releasing In Japan: Planning to Break Yash Movie KGF 2 Worldwide Record, Know More.
  Friday, July 22, 2022, 18:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X