James Vs RRR: ರಾಜಮೌಳಿ ಸಿನಿಮಾಗಾಗಿ 'ಜೇಮ್ಸ್' ಎತ್ತಂಗಡಿ ಆಯ್ತಾ? ಏನಂತಾರೆ ಫ್ಯಾನ್ಸ್?

ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ಸ್ಯಾಂಡಲ್‌ವುಡ್ ಸಿನಿಮಾ ಹಿಂದೆಂದೂ ಮಾಡದ ದಾಖಲೆ ಮಾಡಿದೆ. ಕಳೆದ ನಾಲ್ಕು ದಿನ ಅಪ್ಪು ಅಭಿಮಾನಿಗಳು ಥಿಯೇಟರ್ ಮುಂದೆ 'ಜೇಮ್ಸ್' ಜಾತ್ರೆ ಮಾಡಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳಲ್ಲಿ 'ಜೇಮ್ಸ್' ಸಂಭ್ರಮ ಮುಗಿಲು ಮುಟ್ಟಿದೆ.

ಅಪ್ಪು ಅಭಿನಯದ 'ಜೇಮ್ಸ್' ಅಭಿಮಾನಿಗಳಿಗೆ ಭಾವನಾತ್ಮಕ ಸಿನಿಮಾ. ಈ ಕಾರಣಕ್ಕೆ ಒಂದು ತಿಂಗಳಿನಿಂದಲೇ ಪುನೀತ್ ರಾಜ್‌ಕುಮಾರ್ ಸಿನಿಮಾ ನೋಡಲು ಫ್ಯಾನ್ಸ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಕಳೆದ ನಾಲ್ಕು ದಿನಗಳಿಂದ 'ಜೇಮ್ಸ್' ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಆತಂಕ ಎದುರಾಗಿದೆ.

ಈ ವಾರ ರಾಜಮೌಳಿ ನಿರ್ದೇಶನದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'RRR' ಬಿಡುಗಡೆಯಾಗುತ್ತಿದೆ. ಈಗಾಗಲೇ ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್ ಅದ್ಧೂರಿಯಾಗಿ ಕೊನೆ ಕ್ಷಣದ ಪ್ರಚಾರ ಮಾಡಿ ಮುಗಿಸಿದ್ದಾರೆ. ಇದೇ ವೇಳೆ ಮೆಗಾ ಸಿನಿಮಾ RRRಗಾಗಿ 'ಜೇಮ್ಸ್' ಸಿನಿಮಾ ಎತ್ತಂಗಡಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಪುನೀತ್ ರಾಜ್‌ಕುಮಾರ್ ಫ್ಯಾನ್ ಏನಂತಾರೆ? ತಿಳಿಯಲು ಮುಂದೆ ಓದಿ.

RRRಗಾಗಿ 'ಜೇಮ್ಸ್' ಎತ್ತಂಗಡಿ

RRRಗಾಗಿ 'ಜೇಮ್ಸ್' ಎತ್ತಂಗಡಿ

ಇದೇ ಮಾರ್ಚ್ 25ರಂದು RRR ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಥಿಯೇಟರ್‌ ಸೆಟಪ್ ಮಾಡಿಕೊಂಡಿದೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ 'ಜೇಮ್ಸ್' ರಿಲೀಸ್ ಆಗಿದ್ದ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರಸನ್ನ ಕೈ ಬಿಟ್ಟು ಹೋಗಿದೆ. ಈ ಚಿತ್ರಮಂದಿರದಲ್ಲಿ RRR ಸಿನಿಮಾಗೆ ಟಿಕೆಟ್ ಬುಕಿಂಗ್ಸ್ ಕೂಡ ಆರಂಭ ಆಗಿದೆ.

RRR ಪಾಲಾಗುತ್ತೆ 'ಜೇಮ್ಸ್' ಥಿಯೇಟರ್

RRR ಪಾಲಾಗುತ್ತೆ 'ಜೇಮ್ಸ್' ಥಿಯೇಟರ್

'ಜೇಮ್ಸ್' ಸಿನಿಮಾ ಕರ್ನಾಟಕದಲ್ಲಿ ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಶ್ವದಾದ್ಯಂತ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ವಾರ ಅಭಿಮಾನಿಗಳಿಗಾಗಿ ಅತೀ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿದೆ. ಆದರೆ, ಎರಡನೇ ವಾರಕ್ಕೆ RRRಗಾಗಿ 'ಜೇಮ್ಸ್' ಸಿನಿಮಾ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ವಿಚಾರಕ್ಕೆ ಅಪ್ಪು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕಾದು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

'ಜೇಮ್ಸ್' ಎತ್ತಂಗಡಿ ಬಗ್ಗೆ ಏನಂತಾರೆ ಫ್ಯಾನ್ಸ್?

'ಜೇಮ್ಸ್' ಎತ್ತಂಗಡಿ ಬಗ್ಗೆ ಏನಂತಾರೆ ಫ್ಯಾನ್ಸ್?

ಬೆಂಗಳೂರಿನಲ್ಲಿ RRR ಸಿನಿಮಾಗಾಗಿ ಕೆಲವು ಥಿಯೇಟರ್‌ಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ. ಈ ಬಗ್ಗೆ ಅಪ್ಪು ಫ್ಯಾನ್ಸ್ ಹೀಗಂತಾರೆ," ಆರಂಭದಲ್ಲಿ ಅಭಿಮಾನಿಗಳಿಗಾಗಿ ಅಗತ್ಯಕ್ಕಿಂತ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಒಂದು ವಾರದಲ್ಲಿ ಬಹುತೇಕ ಅಪ್ಪು ಫ್ಯಾನ್ಸ್ ಸಿನಿಮಾ ನೋಡಿದ್ದಾರೆ. ಕೆಲವೆಡೆ ಒಂದು ವಾರಕ್ಕೆ ಅಂತಲೇ ಮಾತುಕತೆ ಆಗಿತ್ತು. ಅದು ನಮಗೆ ಗೊತ್ತಿದೆ. ನಿಜವಾಗಿ ಹೇಳಬೇಕೆಂದರೆ, ಒಂದು ವಾರದ ಬಳಿಕ ಥಿಯೇಟರ್‌ ಸಂಖ್ಯೆ ಕಡಿಮೆ ಆದರೆನೇ ಒಳ್ಳೆಯದು. ಹೆಚ್ಚು ದಿನ 'ಜೇಮ್ಸ್' ಥಿಯೇಟರ್‌ನಲ್ಲಿ ಇರುತ್ತೆ. ಅಪ್ಪು ಅಭಿಮಾನಿಗಳು ಸಿನಿಮಾ ಥಿಯೇಟರ್‌ನಲ್ಲಿ ಇರೋವರೆಗೂ ನೋಡುತ್ತಾರೆ." ಎನ್ನುತ್ತಾರೆ ಪುನೀತ್ ಅಭಿಮಾನಿ ಮನು.

5ನೇ ದಿನ 'ಜೇಮ್ಸ್' ಕಲೆಕ್ಷನ್ ಎಷ್ಟು?

5ನೇ ದಿನ 'ಜೇಮ್ಸ್' ಕಲೆಕ್ಷನ್ ಎಷ್ಟು?

'ಜೇಮ್ಸ್' 5ನೇ ದಿನ ಕಲೆಕ್ಷನ್ ಜೋರಾಗೇ ಇದೆ. ಕರ್ನಾಟಕದಾದ್ಯಂತ 5ನೇ ದಿನ, ಅಂದ್ರೆ ಸೋಮವಾರ 5 ಕೋಟಿ ಕಲೆ ಹಾಕಿದೆ. ಈ ಮೂಲಕ ವಾರದ ಆರಂಭದಲ್ಲೂ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ RRR ಬಿಡುಗಡೆ ಬಗ್ಗೆ 'ಜೇಮ್ಸ್' ಇನ್ನಷ್ಟು ಚಿತ್ರಮಂದಿರಗಳಿಂದ ಎತ್ತಂಗಡಿ ಆಗುತ್ತಾ? ಇಲ್ಲಾ ಪ್ರದರ್ಶನ ಕಾಣುತ್ತಾ ಅನ್ನುವುದು ಮಾರ್ಚ್ 25ರಂದು ಗೊತ್ತಾಗುತ್ತೆ.

More from Filmibeat

English summary
Rumour James Movie theater list reduced to give Theatres for RRR Movie. Here is the more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X