S.Janaki: 6 ವರ್ಷ ಕನ್ನಡ ಹಾಡುಗಳನ್ನು ಹಾಡುವುದನ್ನೇ ನಿಲ್ಲಿಸಿದ್ದ ಎಸ್‌.ಜಾನಕಿ; ಈ ಮುನಿಸಿ ಕಾರಣವೇನು ಗೊತ್ತೇ?

ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌.ಜಾನಕಿ ಇಂದು (ಜುಲೈ 11) ಇಹಲೋಕವನ್ನು ತ್ಯಜಿಸಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಗಾಯಕಿ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಹೀಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿಗೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಎಸ್‌.ಜಾನಕಿಯವರ ಅಗಲಿದ ಸುದ್ದಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಎಸ್‌. ಜಾನಕಿ ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಿಯೇ ಆದರೂ ಅವರು ಕನ್ನಡಿಗರೇ ಆಗಿ ಹೋಗಿದ್ದರು. ಅವರು ತಮ್ಮ ಬದುಕಿನ ಕೊನೆಯ ದಿನಗಳನ್ನ ಮೈಸೂರಿನಲ್ಲಿಯೇ ಕಳೆದಿದ್ದರು. ಮೈಸೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಒಂಟಿಯಾಗಿದ್ದರು. ಇತ್ತೀಚೆಗಷ್ಟೇ ಆನಾರೋಗ್ಯ ಸಮಸ್ಯೆಯಿಂದ ಮೈಸೂರು ನಗರಕ್ಕೆ ಶಿಫ್ಟ್ ಆಗಿದ್ದರು.

S Janaki did not sing a Kannada song for 6 years until female singers received a state award

ಕನ್ನಡ ಚಿತ್ರರಂಗಕ್ಕೆ ಎಸ್‌.ಜಾನಕಿಯವರು ನೀಡಿದ ಕೊಡುಗೆಯನ್ನು ಮರೆಯುವ ಹಾಗೇ ಇಲ್ಲ. ಅದರಲ್ಲೂ ಕನ್ನಡದ ನಟಿಯರನ್ನು ಕನ್ನಡಿಗರು ಮನಸಾರೆ ಇಷ್ಟ ಪಟ್ಟಿದ್ದರಲ್ಲಿ ಬಹುಪಾಲು ಜಾನಕಿಯವರಿಗೆ ಸಲ್ಲಬೇಕು. ಅವರು ಹಾಡಿದ ಪ್ರತಿಯೊಬ್ಬ ನಟಿಗೂ ಅವರೇ ಹಾಡುತ್ತಿದ್ದಾರೆನೋ ಎನ್ನುವ ಹಾಡುತ್ತಿದ್ದದ್ದು ಇವರ ಪ್ರತಿಭೆಗೊಂದು ಸಾಕ್ಷಿ. ಅದೇನೋ ಸುಮಾರು 20 ಭಾಷೆಯಲ್ಲಿ ಹಾಡಿದ್ದರೂ, ಎಸ್.ಜಾನಕಿ ಕೊನೆಯಲ್ಲಿ ನೆಲೆಸಿದ್ದು ಕರ್ನಾಟಕದಲ್ಲಿಯೇ. ಹೀಗಿದ್ದರೂ, ಎಸ್.ಜಾನಕಿಯವರು ಸುಮಾರು 6 ವರ್ಷ ಕನ್ನಡ ಹಾಡನ್ನು ಹಾಡಿರಲಿಲ್ಲ. ಅದಕ್ಕೆ ಬಲವಾದ ಒಂದು ಕಾರಣವಿತ್ತು.

ಇಂದು ಕನ್ನಡ ಗಾಯಕರೆಲ್ಲರೂ ಎಸ್‌.ಜಾನಕಿಯವರನ್ನು ನೆನಪಿಸಿಕೊಳ್ಳಲೇಬೇಕು. ಸಿನಿಮಾರಂಗಕ್ಕೆ ನೀಡಲಾಗುವ ರಾಜ್ಯ ಪ್ರಶಸ್ತಿ ಇತ್ತೀಚೆಗೆ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಆದರೆ, ಒಂದು ಕಾಲದಲ್ಲಿ ರಾಜ್ಯ ಪ್ರಶಸ್ತಿಗೆ ತನ್ನದೇ ಆದ ಬೆಲೆಯನ್ನು ಉಳಿಸಿಕೊಂಡಿತ್ತು. ಸಿನಿಮಾ ಕ್ಷೇತ್ರದಲ್ಲಿ ಇರುವ ಪ್ರತಿಯೊಬ್ಬರು ಒಮ್ಮೆಯಾದರೂ ರಾಜ್ಯ ಪ್ರಶಸ್ತಿ ಗೆಲ್ಲಬೇಕು ಎಂದು ಕನಸು ಕಂಡವರೇ. ಆದರೆ, ಒಂದು ಕಾಲದಲ್ಲಿ ಗಾಯಕ-ಗಾಯಕಿಯರಿಗೆ ರಾಜ್ಯ ಪ್ರಶಸ್ತಿ ನೀಡುತ್ತಿರಲ್ಲ ಅನ್ನೋ ಸಂಗತಿ ನಿಮಗೆ ಗೊತ್ತೇ?

Also Read
S.Janaki Death: ದಕ್ಷಿಣ ಭಾರತದ ಗಾನಕೋಗಿಲೆ ಎಸ್‌.ಜಾನಕಿ ಇನ್ನಿಲ್ಲ
S.Janaki Death: ದಕ್ಷಿಣ ಭಾರತದ ಗಾನಕೋಗಿಲೆ ಎಸ್‌.ಜಾನಕಿ ಇನ್ನಿಲ್ಲ

ಇದನ್ನು ಎಸ್‌. ಜಾನಕಿಯವರು ಗಮನಿಸಿದ್ದರು. ಹೀಗಾಗಿ ಕನ್ನಡದ ಗಾಯಕ-ಗಾಯಕಿಯರಿಗೆ ರಾಜ್ಯ ಪ್ರಶಸ್ತಿ ಸಿಗುವವರೆಗೂ ಕನ್ನಡದಲ್ಲಿ ಹಾಡುವುದಿಲ್ಲ ಎಂದು ಎಸ್.ಜಾನಕಿಯವರು ಶಪತ ಮಾಡಿದ್ದರು. ಹೀಗಾಗಿ ಸುಮಾರು 6 ವರ್ಷಗಳ ಕಾಲ ಕನ್ನಡದಲ್ಲಿ ಹಾಡುವುದನ್ನೇ ನಿಲ್ಲಿಸಿದ್ದರು. ಅದರ ಪರಿಣಾಮವೇ ಈಗ ಗಾಯಕ-ಗಾಯಕಿಯರಿಗೆ ರಾಜ್ಯ ಪ್ರಶಸ್ತಿ ಲಭಿಸುತ್ತಿದೆ ಎಂದು ಹಿರಿಯ ಪತ್ರಕರ್ತ ಶ್ರೀಧರಮೂರ್ತಿ ಟಿವಿ9 ನೀಡಿದ ಪ್ರತಿಕ್ರಿಯೆಯಲ್ಲಿ ಹಂಚಿಕೊಂಡಿದ್ದಾರೆ.

S Janaki did not sing a Kannada song for 6 years until female singers received a state award

ಆದರೆ, ಕನ್ನಡದ ಗಾಯಕ-ಗಾಯಕಿಯರಿಗೆ ರಾಜ್ಯ ಪ್ರಶಸ್ತಿ ಸಿಗಬೇಕು ಎಂದು ಹಠಕ್ಕೆ ಬಿದ್ದು ಗೆದ್ದಿದ್ದರು. ವಿಪರ್ಯಾಸ ಅಂದರೆ, ಎಸ್.ಜಾನಕಿಯವರಿಗೆ ಜೀವಮಾನ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಸಿಗಲೇ ಇಲ್ಲ. ಕನ್ನಡದಲ್ಲಿ ಲೆಕ್ಕವಿಲ್ಲದಷ್ಟು ಹಾಡನ್ನು ಹಾಡಿರುವ ಎಸ್.ಜಾನಕಿಯವರಿಗೆ ಜೀವಮಾನ ಸಾಧನೆಗೆ ನೀಡುವ ರಾಜ್ಯ ಪ್ರಶಸ್ತಿ ಸಿಗಬೇಕಿತ್ತು ಅಂದು ಗಣ್ಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಎಸ್‌.ಜಾನಕಿಯವರು ನುಡಿಗಳು ತೀರಾ ಕಟ್ಟು ನಿಟ್ಟು. 2013ರಲ್ಲಿ ಭಾರತ ಸರ್ಕಾರ ಅವರಿಗೆ ಮೂರನೇ ಅತ್ಯುನ್ನತ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಆದರೆ, ಎಸ್.ಜಾನಕಿಯವರು ತಿರಸ್ಕರಿಸಿದ್ದರು. ತಮಗೆ ಈ ಪ್ರಶಸ್ತಿಯನ್ನು ತಡವಾಗಿ ನೀಡಲಾಗುತ್ತಿದೆ ಅನ್ನೋದು ಅವರ ತಿರಸ್ಕಾರಕ್ಕೆ ಕಾರಣವಾಗಿತ್ತು. ಅದೇ ವೇಳೆ ಭಾರತದ ಸಂಗೀತ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯಿಂದಾಗಿ ತಾವು ಭಾರತ ರತ್ನ ಪಡೆಯುವುದಕ್ಕೆ ಅರ್ಹರು ಎಂದು ಹೇಳಿಕೆ ನೀಡಿದ್ದರು.

ಇದರ ಹೊರತಾಗಿ ಎಸ್‌.ಜಾನಕಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಹಾಗೇ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

English summary
Legendary singer S. Janaki did not sing a Kannada song for 6 years until female singers received a state award. She also rejected Padma Bhushan in 2013. S Janaki had also expressed that she deserved the Bharat Ratna
Read more about: s janaki singer kannada songs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X