ಮತ್ತೆ ಜೊತೆಯಾದ ಮ್ಯೂಸಿಕಲ್ ಮೆಗಾಹಿಟ್ ಜೋಡಿ ಎಸ್‌.ಮಹೇಂದರ್-ಹಂಸಲೇಖ; ನಾದಮೊಳಗೋದು ಕನ್ಫರ್ಮ್!

ಕೆಲವು ಕಾಂಬಿನೇಷನ್‌ ಹಾಗೇನೆ. ಅದೆಷ್ಟೇ ವರ್ಷಗಳು ಆದರೂ ಅವರು ಅಚ್ಚಳಿಯದೇ ನೆನಪಿನಲ್ಲಿ ಉಳಿದು ಬಿಡುತ್ತವೆ. ಕನ್ನಡ ಚಿತ್ರರಂಗದಲ್ಲೂ ಇಂತಹ ಸಾಕಷ್ಟು ಜೋಡಿಗಳು ಇವೆ. ಅವುಗಳಲ್ಲಿ ಸೆಂಟಿಮೆಂಟ್ ಸಿನಿಮಾಗಳ ನಿರ್ದೇಶಕ ಎಸ್‌.ಮಹೇಂದರ್ ಹಾಗೂ ನಾದ ಬ್ರಹ್ಮ ಹಂಸಲೇಖ ಜೋಡಿ ಕೂಡ ಒಂದು. ಇವರಿಬ್ಬರೂ ಜೊತೆ ಸೇರಿ ಮ್ಯೂಸಿಕಲ್ ಸಿನಿಮಾಗಳನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ.

ಆದರೆ, ಕಳೆದ ಕೆಲವು ವರ್ಷಗಳಿಂದ ಈ ಜೋಡಿ ಸಿನಿಮಾ ಒಟ್ಟಿಗೆ ಸಿನಿಮಾ ಮಾಡುವ ಗೋಜಿಗೆ ಹೋಗಿರಲಿಲ್ಲ. ಮತ್ತೆ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡಬೇಕು ಅಂತ ಎದುರು ನೋಡುತ್ತಿದ್ದವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಎಸ್‌.ಮಹೇಂದರ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಹಾಗೇ ಹಂಸಲೇಖ ಸುಮಧುರ ಟ್ಯೂನ್‌ಗಳನ್ನು ನೀಡುವುದಕ್ಕೆ ಇವರ ಜೊತೆಯಾಗಿದ್ದಾರೆ. ಇಬ್ಬರೂ ಸೇರಿ ಮತ್ತೆ ಮೋಡಿ ಮಾಡುತ್ತಾರಾ? ಎಂದು ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

S Mahendar and Hamsalekha coming together for new movie again after long time

ಎಸ್‌.ಮಹೇಂದರ್ ಸಿನಿಮಾಗೆ ಆಕ್ಷನ್ ಕಟ್ ಹೇಳದೆ ಮೂರ್ನಾಲ್ಕು ವರ್ಷಗಳ ಮೇಲಾಗಿದೆ. 2022ರಲ್ಲಿ ತೆರೆಕಂಡಿದ್ದ ಸಿನಿಮಾ 'ಪಂಪ ಪಾಂಚಾಲಿ ಪರಶಿವಮೂರ್ತಿ' ಎಸ್‌.ನಮಹೇಂದರ್ ನಿರ್ದೇಶಿಸಿದ ಸಿನಿಮಾ. ಸಂಗೀತ ಶೈಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೇ ಸಿನಿಮಾಗೆ ನಾದ ಬ್ರಹ್ಮ ಹಂಸಲೇಖ ಟ್ಯೂನ್ ಹಾಕಿದ್ದರು. ಈಗ ಇಬ್ಬರೂ ಸೇರಿ ಮತ್ತೊಂದು ಸಿನಿಮಾ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಹಂಸಲೇಖ ಹಾಗೂ ಎಸ್‌.ಮಹೇಂದರ್ ಇಬ್ಬರೂ ಸೇರಿ ಸುಮಾರು 20ಕ್ಕೂ ಅಧಿಕ ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಸತತ ಗೆಲುಗಳನ್ನು ಕಂಡಿದ್ದರು. ಇವರ ಕಾಂಬಿನೇಷನ್‌ ಸಿನಿಮಾಗಳು ಮ್ಯೂಸಿಕಲಿ ಸಿಕ್ಕಾಪಟ್ಟೆ ಹಿಟ್ ಆಗಿದ್ದವು. ಈಗ ಮತ್ತೊಂದು ಸಿನಿಮಾವನ್ನು ಅದೇ ಸಾಲಿಗೆ ಸೇರಿಸುವುದಕ್ಕೆ ಇಬ್ಬರೂ ಮತ್ತೊಮ್ಮೆ ಒಂದಾಗಿದ್ದಾರೆ.

ಈ ಸೂಪರ್ ಹಿಟ್ ಕಾಂಬಿನೇಷನ್ ಸಿನಿಮಾಗೆ, ಸುಮಾರು ಮೂರು ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿದ್ದಂತಹ, ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ.ಸಿ ವಿಜಯ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತಿದ್ದಾರೆ. ಶ್ರೀಗುರುರಾಯರು ಸಿನಿಮಾ ಬ್ಯಾನರ್ ನಡಿಯಲ್ಲಿ ಈ ಸಿನಿಮಾ ಸೆಟ್ಟೇರಲಿದ್ದು, ಇದೇ ತಿಂಗಳ 16ನೇ ತಾರೀಖು ಸಿನಿಮಾದ ಟೈಟಲ್ ಹಾಗೂ ಚಿತ್ರತಂಡದ ಅಧಿಕೃತ ಪರಿಚಯ ಮಾಡಿಕೊಡಲಿದ್ದಾರೆ.

ಎಸ್‌. ಮಹೇಂದರ್ ಇಲ್ಲಿವರೆಗೂ ಸುಮಾರು 30ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿಸ ಹಂಸಲೇಖ ಸಾಥ್ ಕೊಟ್ಟಿದ್ದಾರೆ. 1992ರಲ್ಲಿ 'ಪ್ರಣಯದ ಪಕ್ಷಿಗಳಿ' ಸಿನಿಮಾದಿಂದ ನಿರ್ದೇಶನ ಆರಂಭಿಸಿದ ಎಸ್‌.ಮಹೇಂದ್ರ ಮತ್ತೆ ಹಿಂತಿರುಗಿ ನೋಡಿಲ್ಲ. ಒಂದು ಕಾಲದಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟು ಪ್ರೇಕ್ಷಕರನ್ನು ರಂಜಿಸಿದದರು.

90 ದಶಕದಲ್ಲಿ ಎಸ್‌.ಮಹೇಂದರ್ ನಿರ್ದೇಶಿಸಿದ ಸೆಂಟಿಮೆಂಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. 'ತಾಯಿ ಇಲ್ಲದ ತವರು', 'ಕರ್ಪೂರದ ಗೊಂಬೆ', 'ಸ್ನೇಹಲೋಕ', ಅರಸು', 'ಅಸುರ', 'ವಾಲಿ', 'ನಿನಗಾಗಿ', 'ತಂದೆಗೆ ತಕ್ಕ ಮಗ'ದಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಬಳಿಕ ಅವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಒಂದು ವರ್ಷ ಸಿನಿಮಾದಿಂದಲೇ ದೂರ ಉಳಿದಿದ್ದರು.

More from Filmibeat

English summary
S Mahendar and Hamsalekha coming together for new movie again after long time.
Read more about: s mahendar hamsalekha music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X