"ಸಬ್ಸಿಡಿ ಕ್ಯಾನ್ಸಲ್ ಆಗುತ್ತಂತೆ.. ನಾನು 4 ಮನೆ.. ರವಿಚಂದ್ರನ್ 5 ಮನೆ ಕಳೆದುಕೊಂಡಿದ್ದಾರೆ"; ರಾಜೇಂದ್ರ ಸಿಂಗ್ ಬಾಬು
ಕನ್ನಡದ ಸಿನಿಮಾಗಳಿಗೆ ಕರ್ನಾಟಕ ಸರ್ಕಾರದಿಂದ ಪ್ರತಿ ವರ್ಷ ಸಬ್ಸಿಡಿ ಸಿಗುತ್ತಿತ್ತು. ಅದರಿಂದ ಕೆಲ ನಿರ್ಮಾಪಕರು ಥಿಯೇಟರ್‌ಗಳಲ್ಲಿ ನಷ್ಟ ಅನುಭವಿಸಿದರೂ ಸರ್ಕಾರ ಕೊಡುವ ಈ ಸಹಾಯ ಧನ ನೆರವಾಗುತ್ತಿತ್ತು. ಇನ್ನೊಂದು ಕಡೆ ಸದಬಿರುಚಿಯ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಒಂದು ವೇಳೆ ಸರ್ಕಾರ ಸಬ್ಸಿಡಿಯನ್ನು ನಿಲ್ಲಿಸಿದರೆ, ಕನ್ನಡ ಚಿತ್ರರಂಗದ ಗತಿಯೇನಾಗಬಹುದು? ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಣ ಆಗುವುದೇ ನಿಂತು ಹೋಗುತ್ತಾ?
ಹೌದು, ಕಳೆದ ಕೆಲವು ದಿನಗಳಿಂದ ಸಿದ್ಧರಾಮಯ್ಯ ಸರ್ಕಾರ ಕನ್ನಡ ಚಿತ್ರರಂಗಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸುವ ಬಗ್ಗೆ ಆಲೋಚನೆ ಮಾಡುತ್ತಿದೆ ಎಂಬ ಸುದ್ದಿ ಹಬ್ಬಿದೆ. ಇದು ಕನ್ನಡ ಚಿತ್ರರಂಗದಲ್ಲಿ ಆತಂಕವನ್ನು ಸೃಷ್ಟಿಯಾಗುವಂತೆ ಮಾಡಿದೆ. ಸಣ್ಣ ನಿರ್ಮಾಪಕರಿಂದ ಹಿಡಿದು ಹಿರಿಯ ನಿರ್ಮಾಪಕರವರೆಗೂ ಸಬ್ಸಿಡಿ ಕ್ಯಾನ್ಸಲ್ ಆದರೆ, ಗತಿಯೇನು ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಈ ಬಗ್ಗೆ ಕನ್ನಡದ ಹಿರಿಯ ನಿರ್ದೇಶಕ, ನಿರ್ಮಾಪಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸಿದ್ದಾರೆ. ಅವರ 'ವೀರ ಕಂಬಳ' ಸಿನಿಮಾದ ಇವೆಂಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸಬ್ಸಿಡಿ ಬಗ್ಗೆ ಮಾತಾಡುವಾಗಲೇ ಸರ್ಕಾರದಿಂದ ಲೋನ್ ಸಿಗುವುದಿಲ್ಲ. ನಾನು 4 ಮನೆ ಹಾಗೂ ರವಿಚಂದ್ರನ್ 5 ಮನೆ ಕಳೆದುಕೊಂಡಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಿರಿಯ ನಿರ್ದೇಶಕ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
"ನಾವು ಬೆಂಗಳೂರಿನ ಕಥೆಗಳನ್ನು ಮಾಡಿಕೊಂಡು ಕರ್ನಾಟಕವನ್ನು ಮರೆತು ಬಿಡುತ್ತಿದ್ದೇವೆ. ನಾನು ಮೊನ್ನೆ ಗುಲ್ಬರ್ಗ, ಬೀದರ್‌ಗೆ ಹೋಗಿದ್ದೆ. ಅಲ್ಲಿನ ಕೆಲವು ಕಥೆಗಳನ್ನು ಕೇಳಿ, ನಾವು ಇದನ್ನೆಲ್ಲ ಬಿಟ್ಟು ಬಿಡುತ್ತಿದ್ದೇವೆ. ಎಂತಹ ಕಥೆಗಳು ಇವೆ. ಎಂತಹ ಸಂಸ್ಕೃತಿಗಳು ಇವೆ. ಹೀಗೆ ನಾನು ಕರ್ನಾಟಕದಲ್ಲಿ ಬೆಂಗಳೂರಿನ ವ್ಯಾಮೋಹವನ್ನು ಬಿಟ್ಟು ಹೊರಗಡೆ ಹೋದರೆ, ಒಳ್ಳೊಳ್ಳೆ ಕಥೆಗಳು ನಿಜವಾಗಲೂ ಸಿಗುತ್ತೆ. ಇವತ್ತು ನಮ್ಮ ಮಣ್ಣಿನ ಕಥೆನೇ ಓಡೋದು. ಪ್ಯಾನ್ ಇಂಡಿಯಾ ಕಥೆಗಳು ಓಡುವುದಿಲ್ಲ." ಎಂದು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಸಬ್ಸಿಡಿಯನ್ನು ತೆಗೆಯುವುದಕ್ಕೆ ಬಿಡುವುದಿಲ್ಲ. ಅಗತ್ಯ ಬಿದ್ದರೆ, ಸಿದ್ಧರಾಮಯ್ಯ ಅವರನ್ನು ಭೇಟಿಯಾಗಗುತ್ತೇವೆಂದು ಹೇಳಿದ್ದಾರೆ. "ಇವತ್ತು ಚಿತ್ರರಂಗ ಬಹಳ ಸಂಕಷ್ಟದಲ್ಲಿ ಇದೆ. ಎಲ್ಲಾ ಕಡೆ ಗ್ರಹಣ ಬಿಡುತ್ತೆ. ಕನ್ನಡ ಚಿತ್ರರಂಗಕ್ಕೆ ಗ್ರಹಣನೇ ಬಿಡುವುದಿಲ್ಲ. ಹೀಗೇನೋ ಹೊಸ ರೂಮರ್ ಸಬ್ಸಿಡಿ ತೆಗೆದಿದ್ದಾರೆ ಅಂತ. ಬೋಜ್‌ಪುರಿ, ಗುಜರಾತ್, ಇನ್ಯಾವುದೋ ಎರಡು ಇಂಡಸ್ಟ್ರಿ ಮುಚ್ಚಿ ಹೋಗಿದೆ. ಅಲ್ಲಿ ಸಿನಿಮಾಗಳೇ ನಿರ್ಮಾಣ ಆಗುತ್ತಿಲ್ಲ. ಅದೇ ಸ್ಥಿತಿ ಇಲ್ಲಿಗೂ ಬರುತ್ತೆ. ಆದರೆ. ಸಿದ್ಧರಾಮಯ್ಯ ಅವರ ಮೇಲೆ ನಂಬಿಕೆಯಿದೆ. ಅವರು ಈ ಸಬ್ಸಿಡಿಯನ್ನು ತೆಗೆಯುವುದಕ್ಕೆ ಬಿಡುವುದಿಲ್ಲ. ಅವರು ಕೊಡುತ್ತಾರೆ. ಇಲ್ಲಿಂದಲೇ ಅವರಿಗೊಂದು ರಿಕ್ವೆಸ್ಟ್. ಯಾವುದೇ ಕಾರಣಕ್ಕೂ ಯಾರೋ ಮೂರ್ಖರ ಮಾತನ್ನು ಕೇಳಿ ನಿಲ್ಲಿಸಬೇಡಿ." ಎಂದು ಎಸ್. ವಿ. ರಾಜೇಂದ್ರ ಬಾಬು ಮನವಿ ಮಾಡಿಕೊಂಡಿದ್ದಾರೆ.
ಹಾಗೇ ಸರ್ಕಾರ ಲೋನ್ ಕೊಡುತ್ತಲ್ಲ ಎಂಬ ಪ್ರಶ್ನೆಗೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿದ್ದು, ಮನೆ ಕಳೆದುಕೊಂಡ ಬಗ್ಗೆ ಮಾತಾಡಿದ್ದಾರೆ. "ಸರ್ಕಾರ ಈ ಉದ್ಯಮಕ್ಕೆ ಲೋನ್ ಕೊಡುತ್ತಾರಾ? ಯಾವ ಲೋನ್ ಕೂಡ ಕೊಡಲ್ಲ. ನಾನು 4 ಮನೆ ಕಳೆದುಕೊಂಡಿದ್ದೀನಿ. ರವಿಚಂದ್ರನ್ 5 ಮನೆ ಕಳೆದುಕೊಂಡಿದ್ದಾರೆ. ಹೀಗೆ ನಾವು ಮನೆಗಳನ್ನು ಕಳೆದುಕೊಂಡೇ ಹೋಗಬೇಕು. ಲೋನ್ ಕೊಡುವುದಿಲ್ಲ. ಆ ಮಾಹಿತಿನೇ ತಪ್ಪು." ಎಂದಿದ್ದಾರೆ.
ಮತ್ತೆ ಪರಭಾಷಾ ಸಿನಿಮಾ ಬಗ್ಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಧ್ವನಿ ಎತ್ತಿದ್ದಾರೆ. "ನಮ್ಮ ಕನ್ನಡದವರಿಗೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಿಗೋದು ಬರ ಬಂದಾಗ, ಕ್ರಿಕೆಟ್ ಮ್ಯಾಚ್ ಬಂದಾಗ, ಇಂತಹ ಸಮಯದಲ್ಲಿಯೇ ನಮ್ಮ ಸಿನಿಮಾಗಳು ರಿಲೀಸ್ ಆಗೋದು. ಒಳ್ಳೊಳ್ಳೆ ಸಿನಿಮಾಗಳು ದಸರಾ, ದೀಪಾವಳಿ, ಹೊಸ ವರ್ಷ, ಯುಗಾದಿಯಲ್ಲಿ ಆಗುತ್ತೆ. ಈ ಸಮಯದಲ್ಲಿ ಪರಭಾಷೆಗೆ ಕೊಡುತ್ತಾರೆ. ಪರಭಾಷೆಯ ಸಿನಿಮಾಗಳ ಮೇಲೆ ನಮಗೆ ದ್ವೇಷವಿಲ್ಲ. ಅವರಿಗೆ ಇದು ಎಕ್ಸ್‌ಟ್ರಾ. ನಮ್ಮಲ್ಲಿ ಮಾತ್ರ 1000, 1200 ರೂಪಾಯಿ ಟಿಕೆಟ್. ನಮ್ಮ ಕನ್ನಡದವರೇ ಹೋಗ್ತಾರೆ ಆ ಸಿನಿಮಾ ನೋಡುವುದಕ್ಕೆ. ಆ ರೀತಿಯಿದೆ ಪರಿಸ್ಥಿತಿ. ಸಬ್ಸಿಡಿ ನಿಂತರೆ, ಗಿರೀಶ್ ಕಾಸರವಳ್ಳಿ, ಶೇಷಾದ್ರಿ, ಬರಗೂರು ರಾಮಚಂದ್ರಪ್ಪ ಇವರು ಹೊಸ ಆಲೋಚನೆಯನ್ನೇ ನಿಲ್ಲಿಸಿಬಿಡುತ್ತಾರೆ.


Click it and Unblock the Notifications











