ಒಂದು ಫೋಟೊ.. ದಿಗ್ಗಜರಿಬ್ಬರ ಸ್ವೀಟ್ ಟ್ವೀಟ್; ಕಿಚ್ಚನಿಗೆ ಸಚಿನ್.. ಸಚಿನ್‌ಗೆ ಕಿಚ್ಚ ಕೊಟ್ಟ ಪ್ರತಿಕ್ರಿಯೆ ಏನು?

ಒಬ್ಬರು ಕ್ರಿಕೆಟ್ ಲೋಕದ ದಂತಕಥೆ. ಇನ್ನೊಬ್ಬರು ಸಿನಿಮಾ ಕ್ಷೇತ್ರದ ಸೂಪರ್‌ಸ್ಟಾರ್. ಇಬ್ಬರು ದಿಗ್ಗಜರು ಒಟ್ಟಿಗೆ ಸೇರಿದರೆ ಅಭಿಮಾನಿಗಳಿಗೆ ಅದು ಎಂದೂ ಮರೆಯದ ಫ್ಯಾನ್ ಮೂವ್ಮೆಂಟ್. ಇಂತಹದ್ದೇ ಒಂದು ಸನ್ನಿವೇಶ ಕಿಚ್ಚನ ಅಭಿಮಾನಿಗಳಿಗೆ ಸಿಕ್ಕಿದೆ. ಅದರಲ್ಲೂ ಖುದ್ದಾಗಿ ಕ್ರಿಕೆಟ್ ಲೋಕದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು ಖುಷಿಯನ್ನು ಇಮ್ಮಡಿಗೊಳಿಸಿದೆ.

ಹೌದು, ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಫೋಟೊವೊಂದನ್ನು 15 ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೊದಲ್ಲಿ ಕಿಚ್ಚ ಸುದೀಪ್ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರು ಒಂದೇ ಫ್ರೇಮ್‌ನಲ್ಲಿ ಇದ್ದಾರೆ. ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.

Sachin Tendulkar reacted to Sudeeps tweet Do you know how Kichcha reacted?

ಸಚಿನ್ ತೆಂಡೂಲ್ಕರ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಇರುವ ಈ ಅಪರೂಪ ಫೋಟೊವನ್ನು ಕಿಚ್ಚನ ಅಭಿಮಾನಿ ಹೇಮಂತ್ ಶೈವ ಅನ್ನುವವರು ಹಂಚಿಕೊಂಡಿದ್ದರು. ಆ ಟ್ವೀಟ್ (ಎಕ್ಸ್)ಗೆ ಸ್ವತ: ಸುದೀಪ್ ಪ್ರತಿಕ್ರಿಯೆ ನೀಡಿದ್ದರು. ಆ ಟ್ವೀಟ್‌ಗೆ ಇಂದು (ಫೆಬ್ರವರಿ 2) ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಸಚಿನ್ ಹಾಗೂ ಕಿಚ್ಚ ಸುದೀಪ್ ಟ್ವಿಟರ್ ಸಂಭಾಷಣೆ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಭಿಮಾನಿ ಶೇರ್ ಮಾಡಿದ ಫೋಟೊ ನೋಡಿ ಥ್ರಿಲ್ ಆಗಿದ್ದ ಕಿಚ್ಚ ಸುದೀಪ್ ತಮ್ಮ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. "ಈ ಫೋಟೊ ನೋಡುವುದಕ್ಕೆ ವ್ಹಾವ್ ಎನಿಸುತ್ತಿದೆ.. ಇದೊಂದು ಸವಿನೆನಪು ಗೆಳೆಯ.." ಎಂದು ಕಿಚ್ಚ ಸುದೀಪ್ ರಿಯಾಕ್ಟ್ ಮಾಡಿದ್ದರು. ಜನವರಿ 16ರಂದು ಕಿಚ್ಚ ನೀಡಿದ ಪ್ರತಿಕ್ರಿಯೆಗೆ ಇಂದು (ಫೆಬ್ರವರಿ 2) ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಿಚ್ಚ ಹಾಗೂ ಸುದೀಪ್ ಜೊತೆಗಿರುವ ಫೋಟೊಗೆ ನೋಡಿ ಸುದೀಪ್ ಟ್ವೀಟ್‌ಗೆ ಸಚಿನ್ ನೀಡಿದ ಪ್ರತಿಕ್ರಿಯೆ ಹೀಗಿತ್ತು. "ನಿಮ್ಮನ್ನು ಭೇಟಿಯಾಗಿದ್ದು ತುಂಬಾನೇ ಖುಷಿ ಆಯ್ತು. ಆ ದಿನ ನಮ್ಮ ಫೋಟೊವನ್ನು ಯಾರೋ ಎಷ್ಟು ಚೆನ್ನಾಗಿ 'ಕಿಚ್ಚ'ಯಿಸುವಂತೆ ತೆಗೆದಿದ್ದಾರೆ. ನಿಮ್ಮ ಜೀವನದಲ್ಲಿ ಉತ್ತಮ ಆರೋಗ್ಯ ಹಾಗೂ ಖುಷಿ ಸಿಗಲೆಂದು ಎಂದೆಂದಿಗೂ ಹಾರೈಸುತ್ತೇನೆ." ಎಂದು ಸಚಿನ್ ಪ್ರತಿಕ್ರಿಯಿಸಿದ್ದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ರಿಂದ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಕಿಚ್ಚನ ಖುಷಿಗೆ ಪಾರವೇ ಇಲ್ಲ. ತಕ್ಷಣವೇ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ವ್ಹಾವ್.. ಇದನ್ನು ನಿರೀಕ್ಷೆ ಮಾಡಿರಲಿಲ್ಲ.. ನೀವು ಈಗ ತಾನೇ ಎಂದೂ ಮರೆಯದ ಸವಿನೆನಪನ್ನು ಉಡುಗೊರೆಯಾಗಿ ಕೊಟ್ಟಿದ್ದೀರಿ. ಸಚಿನ್ ಸರ್ ನಿಮಗೆ ನನ್ನ ಕಡೆಯಿಂದ ಪ್ರೀತಿಯ ಶುಭ ಹಾರೈಕೆಗಳು.." ಕಿಚ್ಚ ಸುದೀಪ್ ಮರು ಟ್ವೀಟ್ (ಎಕ್ಸ್) ಮಾಡಿದ್ದಾರೆ.

ಕಿಚ್ಚ ಸುದೀಪ್‌ಗೆ ಸಿನಿಮಾದಷ್ಟೇ ಪ್ರೀತಿ ಕ್ರಿಕೆಟ್ ಅನ್ನೋದು ವಿಶೇಷವಾಗಿ ಹೇಳಬೇಕಿಲ್ಲ. ವರ್ಷಕ್ಕೆ ಎರಡು ಸಿನಿಮಾ ಮಾಡಿದಂತೆ, ವರ್ಷಕ್ಕೆ ಎರಡು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾರೆ. ಈಗಾಗಲೇ ಕನ್ನಡ ಚಲನಚಿತ್ರ ಕಪ್‌ನಲ್ಲಿ ಭಾಗಿಯಾಗಿದ್ದಾರೆ. ಮುಂದಿನ ತಿಂಗಳು ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಡೇಟ್ ಕೂಡ ಅನೌನ್ಸ್ ಆಗಿದೆ.

More from Filmibeat

English summary
Both Sachin Tendulkar and Sudeep have responded to their photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X