ಈ ಅವತಾರದಲ್ಲಿ ಸಾಧು ನೋಡಿದರೆ ಕೈಲಾಸ ನೆನಪಾಗುತ್ತಾ?

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಮೇಲೆ ಸಿನಿಮಾ ರಿಲೀಸ್ ಆಗುತ್ತಿದೆ. ಒಂದಲ್ಲ ಎರಡಲ್ಲ ಬರೊಬ್ಬರಿ 5 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ರಿಷಬ್ ಶೆಟ್ಟಿ, ರಾಜ್‌ ಬಿ ಶೆಟ್ಟಿಯ ಗರುಡ ಗಮನ ವೃಷಭ ವಾಹನ, ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ '100' ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಗಿಲ್ ಪೇಟೆ ಈ ವಾರದ ನಿರೀಕ್ಷೆಯ ಸಿನಿಮಾ. ಅದರಲ್ಲೂ ಮುಗಿಲ್‌ಪೇಟೆ ಚಿತ್ರತಂಡ ದಿನದಿಂದ ದಿನಕ್ಕೆ ಒಂದೊಂದೇ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ರಿವೀಲ್ ಮಾಡುತ್ತಿದೆ.

ನವೆಂಬರ್ 19ರಂದು ಬಿಡುಗಡೆಗೆ ಸಜ್ಜಾಗಿರುವ ಮುಗಿಲ್‌ಪೇಟೆ ಸಿನಿಮಾ ರಿಲೀಸ್ ಆಗ್ತಿದೆ. ಈ ಮಧ್ಯೆ 16 ಸೆಕೆಂಡಿನ ಪ್ರೋಮೊ ಒಂದು ಸಿಕ್ಕಾಪಟ್ಟೆ ಕುತೂಹಲ ಕೆರಳಿಸುತ್ತಿದೆ. ಹಾಗಂತ ಇದು ಪ್ರಮುಖ ಪಾತ್ರಗಳು ನಟಿಸಿರುವ ಪ್ರೋಮೊ ಅಲ್ಲ. ಹಾಸ್ಯ ಮಹಾರಾಜ್ ಸಾಧುಕೋಕಿಲಾ ಪಾತ್ರದ ಒಂದು ಪ್ರೋಮೊ. ಅಷ್ಟಕ್ಕೂ ಈ ಪ್ರೋಮೊ ಅಷ್ಟೊಂದು ಕುತೂಹಲ ಕೆರಳಿಸುತ್ತಿರುವುದು ಯಾಕೆ? ಕಾವಿ ತೊಟ್ಟ ಸಾಧು ಕೋಕಿಲಾ ನೋಡಿದರೆ ಯಾರ ನೆನಪಾಗತ್ತೆ? ಪ್ರೋಮೊ ನೋಡಿ ಇಂಥದ್ದೊಂದು ಚರ್ಚೆ ಆರಂಭ ಆಗಿದೆ.

ಕಾವಿ ತೊಟ್ಟ ಸಾಧುವಿನ 'ಕೈಲಾಸ' ನೆನಪು

ಕಾವಿ ತೊಟ್ಟ ಸಾಧುವಿನ 'ಕೈಲಾಸ' ನೆನಪು

ಸಾಧು ಕೋಕಿಲಾ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲಾವಾಗಿ ನಟಿಸುವ ಹಾಸ್ಯ ನಟ. ಯಾರದ್ದೋ ಹಾವ-ಭಾವಗಳನ್ನು ಕರಗತ ಮಾಡಿಕೊಂಡು, ಅವರಂತೆ ನಟಿಸುವುದು ಸಾಧು ಮಹಾರಾಜ್‌ಗೆ ನೀರು ಕುಡಿದಷ್ಟೇ ಸುಲಭ. ಕ್ರೇಜಿ ಪುತ್ರ ಮನೋರಂಜನ್ ನಟಿಸಿದ ಮುಗಿಲ್ ಪೇಟೆ ಸಿನಿಮಾದಲ್ಲೂ ಸಾಧು ಮಹಾರಾಜ್ ಅಭಿನಯಿಸಿದ ಪಾತ್ರ ಬಗ್ಗೆ ಭಾರಿ ಚರ್ಚೆಯಾಗಿತ್ತಿದೆ. ಕಾವಿ ತೊಟ್ಟು ಸ್ವಾಮಿಯಾಗಿರುವ ಸಾಧು, ನಿಜ ಜೀವನದ ಸ್ವಾಮಿಯನ್ನು ನೆನಪಿಸುತ್ತೆ ಅನ್ನುವ ಮಾತು ಕೇಳಿಬರುತ್ತಿದೆ.

 ಕೈಲಾಸ ಸ್ವಾಮಿಯಾದ ಸಾಧು

ಕೈಲಾಸ ಸ್ವಾಮಿಯಾದ ಸಾಧು

ಮುಗಿಲ್‌ಪೇಟೆ ಚಿತ್ರದ ಕಾವಿ ತೊಟ್ಟ ಸಾಧು ಕೋಕಿಲಾ ಪಾತ್ರ ಯಾರನ್ನು ನೆನಪಿಸುತ್ತೆ ಅಂತ ಕೇಳಿದರೆ, ಎಲ್ಲರ ಬಾಯಲ್ಲೂ ಬರುತ್ತಿರುವ ಹೆಸರು ನಿತ್ಯಾನಂದ. ಬಿಡದಿಯಲ್ಲಿ ಆಶ್ರಮ ಮಾಡಿಕೊಂಡಿದ್ದ ನಿತ್ಯಾನಂದ ಭಾರತ ಬಿಟ್ಟು ಪರಾರಿಯಾಗಿದ್ದಾನೆ. ತನ್ನದೇ ಕೈಲಾಸ ಅನ್ನುವ ದೇಶ ಕಟ್ಟಿಕೊಂಡಿರುವ ನಿತ್ಯಾನಂದನ ಪಾತ್ರವನ್ನೇ ಸಾಧು ನಿಭಾಯಿಸಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ನಿತ್ಯಾನಂದನದ್ದೇ ಹಾವ-ಭಾವ, ಮಾತಿನ ಶೈಲಿ ಎಲ್ಲವೂ ಸೇಮ್ ಟು ಸೇಮ್. ಸಾಧು ಇದ್ಮೇಲೆ ಮುಗಿಲ್ ಪೇಟೆಯಲ್ಲಿ ಹಾಸ್ಯಕ್ಕೇನು ಕಮ್ಮಿಯಿಲ್ಲ. ನಿತ್ಯಾನಂದನ ಮಾತುಗಳನ್ನು ಕೇಳಿ ನಕ್ಕು ನಕ್ಕು ಸುಸ್ತಾಗಿದ್ದವರಿಗೆ ಸಾಧು ಕೋಕಿಲಾ ಮತ್ತಷ್ಟು ಕಿಕ್ ಕೊಡಲಿದ್ದಾರೆ. ಅಷ್ಟಕ್ಕೂ ಕಾವಿ ತೊಟ್ಟ ಸಾಧು ಕೋಕಿಲಾ ಪಾತ್ರ ನಿಜವಾಗಲೂ ನಿತ್ಯಾನಂದನ ಪಾತ್ರವೇನಾ? ಇಲ್ಲಾ ಬೇರೆಯಾರದ್ದೋ ಪಾತ್ರನಾ? ಅನ್ನುವುದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತೆ.

ಮುಗಿಲ್‌ಪೇಟೆಯಲ್ಲಿ ಪ್ರೇಮಲೋಕ

ಮುಗಿಲ್‌ಪೇಟೆಯಲ್ಲಿ ಪ್ರೇಮಲೋಕ

ಮನೋರಂಜನ್ ಅಭಿನಯದ ಮುಗಿಲ್‌ಪೇಟೆ ಪಕ್ಕಾ ಫ್ಯಾಮಿಲಿ ಸಿನಿಮಾ. ಲವ್ ಸ್ಟೋರಿ ಬೇಕು ಅನ್ನುವವರು ಪ್ರೇಮಕಥೆ, ಹಾಸ್ಯ ಬೇಕು ಅನ್ನುವವರಿಗೆ ಸಾಧು ಕಾಮಿಡಿ, ಡೈಲಾಗ್ ಪ್ರಿಯರಿಗೆ ಡೈಲಾಗ್, ಮಾಸ್ ಪ್ರಿಯರಿಗೆ ಫೈಟ್, ಸಂಗೀತ ಪ್ರಿಯರಿಗೆ ಸಾಂಗ್ ಎಲ್ಲವೂ ಇದೆ ಅಂತ ಮುಗಿಲ್‌ಪೇಟೆ ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಮಗನ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವಿಟ್ಟುಕೊಂಡಿದ್ದಾರೆ. ಮುಗಿಲ್‌ಪೇಟೆ ಗೆದ್ದೇ ಗೆಲ್ಲುತ್ತೆ ಅನ್ನುವ ನಂಬಿಕೆಯಲ್ಲಿದ್ದಾರೆ. ಹೀಗಾಗಿ ನವೆಂಬರ್ 19ರಂದು ಮುಗಿಲ್‌ಪೇಟೆಯಲ್ಲಿ ರೊಮ್ಯಾಂಟಿಕ್ ಲವ್‌ಸ್ಟೋರಿ ಜೊತೆ ಸಾಧು ಮಹಾರಾಜ್ ಕಾಮಿಡಿ ಕಿಕ್ ಕೊಡಬಹುದು ನಿರೀಕ್ಷೆ ದುಪ್ಪಟ್ಟಾಗಿದೆ.

More from Filmibeat

English summary
Sadhu Kokila acted as Nithyanada role in Mugilpete kannada movie. Ravichandran son Manoranjan movie Mugilpete releasing on November 19th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X