ಅಣ್ಣಾವ್ರು ಒಂದು ಹಾಡು ಹಾಡಲು ಎಷ್ಟು ಹಣ ಪಡೆಯುತ್ತಿದ್ದರು? ಸಾಧು ಕೋಕಿಲ ಕೊಟ್ಟಿದ್ದೆಷ್ಟು?

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸಿನಿಮಾಗಳ ಜೊತೆ ಜೊತೆಗೆ ಚರ್ಚೆ, ಸಂವಾದಗಳು ಕೂಡ ನಡೆಯುತ್ತಿದೆ. ಇಂತಹ ವೇದಿಕೆಯಲ್ಲಿ 'ಬಡವರ ರಾಜಕುಮಾರ್' ಕೃತಿಯ ಆಧಾರದಲ್ಲಿ ನಡೆದ 'ತಳಸಮುದಾಯಗಳ ನಾಯಕ' ಗೋಷ್ಠಿ ನಡೆದಿದೆ. 'ಬಡವರ ರಾಜಕುಮಾರ್' ಕೃತಿ ರಚಿಸಿದವರು ಡಾ.ಮಂಜುನಾಥ್ ಅದ್ದೆ.

ಈ ಸಂವಾದದಲ್ಲಿ ಭಾಗಿಯಾಗಿದ್ದ ಡಾ. ಮಂಜುನಾಥ್ ಅದ್ದೆ ಅಣ್ಣಾವ್ರ ಸಿನಿಮಾಗಳ ಗುಣಗಾನ ಮಾಡಿದರು. "ಈಗಿನ ಸಿನಿಮಾಗಳಲ್ಲಿ ವಾಸ್ತವ ಬದುಕು ಇರುವುದಿಲ್ಲ. ಸಾವಯವ ಚಿಂತನೆ ಇರುವುದಿಲ್ಲ. ಆದರೆ, ರಾಜಕುಮಾರ್ ಅವರು ವಾಸ್ತವ ಮತ್ತು ವ್ಯಾಪಾರ ಎರಡನ್ನೂ ಸರಿತೂಗಿಸಿಕೊಂಡು ಹೋದ ಮಾದರಿ ವ್ಯಕ್ತಿತ್ವ. ಕುವೆಂಪು ಅವರು ಸಾಹಿತ್ಯದ ಮೂಲಕ ಮೌಲ್ಯಗಳನ್ನು ದಾಟಿಸಿದರೆ, ರಾಜಕುಮಾರ್ ಅವರು ಜನಸಾಮಾನ್ಯರಿಗೂ ತಲುಪುವಂತೆ ಮೌಲ್ಯಗಳನ್ನು ಕಲಿಸಿದರು. ಕಾಳಜಿ ಮತ್ತು ತುಡಿತ ಇಟ್ಟುಕೊಂಡು, ಸಮಾಜ ಕಟ್ಟುವ ಕಡೆಗೆ ಕೆಲಸ ಮಾಡಿದರು. ಬಡವರಲ್ಲಿ ಸ್ವಾಭಿಮಾನ, ಘನತೆ ಹೆಚ್ಚಿಸಿದರು. ಅವರು ಬಡವರ್ಗದವರಿಗೆ ಆತ್ಮವಿಶ್ವಾಸದಿಂದ ಬದುಕುವ ಮಾರ್ಗವನ್ನು ಹೇಳಿಕೊಟ್ಟರು" " ಎಂದು ಸಾಹಿತಿ, ಪತ್ರಕರ್ತ ಡಾ.ಮಂಜುನಾಥ ಅದ್ದೆ ಅಭಿಪ್ರಾಯ ಪಟ್ಟಿದ್ದಾರೆ.

Sadhu Kokila said in BIFFES Rajkumar Surrounded by Fans Not Bouncers

ಇದೇ ವೇದಿಕೆಯಲ್ಲಿ ಹಿರಿಯ ಪತ್ರಕರ್ತ ರಘುನಾಥ ಚ.ಹ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. "ಕರ್ನಾಟಕ ಏಕೀಕರಣಗೊಂಡಾಗ ರಾಜಕೀಯವಾಗಿ, ಭೌಗೋಳಿಕವಾಗಿ ಏಕೀಕರಣವಾಗಿತ್ತು. ಆದರೆ, ರಾಜಕುಮಾರ್ ಅವರಿಂದ ಸಾಂಸ್ಕೃತಿಕ ಏಕೀಕರಣವಾಗಿತ್ತು. ಕುವೆಂಪು ಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಕಟ್ಟಿದರೆ, ರಾಜಕುಮಾರ್ ಅಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಹೇಳಿಕೊಟ್ಟರು. ಕುವೆಂಪು ಬೌದ್ಧಿಕ ಪ್ರತಿನಿಧಿಯಾದರೆ, ರಾಜಕುಮಾರ್ ಜನಪದರ ಪ್ರತಿನಿಧಿ. ಅವರ ಸಿನಿಮಾಗಳು ನಮಗೆ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹೇಗೆಂದು ಕಲಿಸಿದವು" ಎಂದು ಹೇಳಿದ್ದಾರೆ.

"ಯಾರ ಭೇಟಿ ಆದಾಗ ಒಂದು ಗಾಢ ಅನುಭವ ನಮಗೆ ಆಗುತ್ತದೆಯೋ ಅಂಥವರನ್ನು ನಾವು ಲೆಜೆಂಡ್ ಎಂದು ಕರೆಯುತ್ತೇವೆ. ಹಾಗೊಂದು ಅನುಭವ ದಕ್ಕದಿದ್ದರೆ ಅವರು ಲೆಜೆಂಡ್ ಆಗಿರುವುದಿಲ್ಲ. ರಾಜಕುಮಾರ್ ಕಾರಿನಿಂದ ಕೈಬೀಸಿದರೂ ಸಾಕಿತ್ತು, ಜನರಿಗೆ ಹೇಳಲು ಕತೆಗಳು ದೊರಕುತ್ತಿದ್ದವು. ಅವರನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದ ಚರಿತ್ರೆಯೇ ಇಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇದಿಕೆ ಮೇಲೆ ಸಾಧು ಕೋಕಿಲಾ ಕೂಡ ಅಣ್ಣಾವ್ರ ಗುಣಗಾನ ಮಾಡಿದ್ದರು. ರಾಜಕುಮಾರ್ ಅವರು ಬೌನ್ಸರ್‌ಗಳ ಜೊತೆ ಬರುತ್ತಿರಲಿಲ್ಲ ಎಂದು ಸಾಧು ಕೋಕಿಲ ಹೇಳಿದ್ದಾರೆ. ಅಕಾಡೆಮಿ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲಾ ಚಿತ್ರೋತ್ಸವದ ಗೋಷ್ಠಿಯಲ್ಲಿ ಅಣ್ಣಾವ್ರ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Sadhu Kokila said in BIFFES Rajkumar Surrounded by Fans Not Bouncers

"ಯಾವುದೇ ಸಾಂಸ್ಕೃತಿಕ ಘಟಕಕ್ಕೆ ಹೋದರೂ ಕುವೆಂಪು ಜೊತೆ ರಾಜಕುಮಾರ್ ಅವರನ್ನೂ ನೋಡಬಹುದು. ಅಣ್ಣಾವ್ರು ಎಲ್ಲರಿಗೂ ಸಲ್ಲುವವರು. ನಾನು ಸಂಗೀತ ಸಂಯೋಜಿಸಿದ ಕೆಲವು ಹಾಡುಗಳನ್ನು ರಾಜಕುಮಾರ್ ಅವರು ಹಾಡಿದ್ದಾರೆ. ಆಗ ಅವರು ಹಾಡುವ ಮೊದಲು ತಯಾರಾಗಿ ಬರುತ್ತಿದ್ದರು." ಎಂದಿದ್ದಾರೆ.

ಹಾಗೇ ಅಣ್ಣಾವ್ರು ಹಾಡುವುದಕ್ಕೂ ಮುನ್ನ ಹೇಗೆ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. "ಹಾಡುವ ದಿನ ನಮ್ಮನ್ನೆಲ್ಲಾ ಸಾಲಾಗಿ ನಿಲ್ಲಿಸುತ್ತಿದ್ದರು. ತಲೆಯಿಂದ ಕಾಲಿನವರೆಗೆ ಮುಟ್ಟಿ ನಮಸ್ಕಾರ ಮಾಡಿ ಆಮೇಲೆಯೇ ಹಾಡಲು ಹೋಗುತ್ತಿದ್ದರು. ಅಂಥಾ ಸಂಸ್ಕಾರ ಅವರದ್ದು. ಈಗಿನವರ ತರಹ ಅವರು ಬೌನ್ಸರ್‌ಗಳನ್ನು ಸುತ್ತಮುತ್ತ ಇಟ್ಟುಕೊಂಡು ಬರುತ್ತಿರಲಿಲ್ಲ. ಅವರ ಸುತ್ತಮುತ್ತ ಇದ್ದಿದ್ದು ಅಭಿಮಾನಿಗಳು. ಅವರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಅವರನ್ನು ನೋಡಲು ಇಡೀ ಕರ್ನಾಟಕವೇ ಕಾಯುತ್ತಿತ್ತು. ಅವರು ಒಂದು ಹಾಡನ್ನು ಹಾಡಲು 25000 ಸಾವಿರ ತೆಗೆದುಕೊಳ್ಳುತ್ತಿದ್ದರು. ಆದರೆ, ಅದರಲ್ಲಿ ಎಲ್ಲವೂ ಬಡವರಿಗೆ ಸಂಬಂಧಿಸಿದ ಟ್ರಸ್ಟ್‌ಗೆ ಹೋಗುತ್ತಿತ್ತು. ಅದನ್ನು ಅವರು ಯಾವತ್ತೂ ಹೇಳಿಕೊಳ್ಳಲಿಲ್ಲ" ಎಂದು ಸಾಧು ಕೋಕಿಲಾ ಹೇಳಿದ್ದಾರೆ.

More from Filmibeat

English summary
Sadhu Kokila said in BIFFES Rajkumar Surrounded by Fans, Not Bouncers.
Read more about: rajkumar sadhu kokila actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X