ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
ಕನ್ನಡ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಮತ್ತೊಂದು ಮಹತ್ವಕಾಂಕ್ಷೆಯ ಸಿನಿಮಾ 'ಕಾಂತಾರ ಚಾಪ್ಟರ್ 1'. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ಸೆಟ್ಟೇರಿದೆ. ರಿಷಬ್ ಶೆಟ್ಟಿಯ ಫಸ್ಟ್ ಲುಕ್ ರಿಲೀಸ್ ಆದ್ಮೇಲಂತೂ ಈ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.
ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್ ಆಗಿರುವುದರಿಂದ ಸ್ಟಾರ್‌ಕಾಸ್ಟ್ ಬಗ್ಗೆ ಕುತೂಹಲವಿದೆ. ಇದೂವರೆಗೂ ರಿಷಬ್ ಶೆಟ್ಟಿ ಆಗಲಿ ಅಥವಾ ಹೊಂಬಾಳೆ ಫಿಲ್ಮ್ಸ್ ಆಗಲಿ ಇದೂವರೆಗೂ ಸಿನಿಮಾ ನಟಿಸಲಿರುವ ಕಲಾವಿದರ ಬಗ್ಗೆ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿಲ್ಲ.

'ಕಾಂತಾರ ಚಾಪ್ಟರ್ 1' ಸೆಟ್ಟೇರಿದ ವೇಳೆ ಕನ್ನಡ ಕಲಾವಿದರ ಜೊತೆ ಪರಭಾಷೆಯ ಕಲಾವಿದರು ಇರುತ್ತಾರೆಂದು ರಿಷಬ್ ಶೆಟ್ಟಿ ಹೇಳಿದ್ದರು. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ನಾಲ್ಕು ಮಂದಿ ನಾಯಕಿಯರ ಹೆಸರು ಕೇಳಿಬರುತ್ತಿದೆ. ಈ ನಾಲ್ಕು ಮಂದಿಯಲ್ಲೇ ಒಬ್ಬರು ಒಬ್ಬ ಫೈನಲ್ ಆಗುತ್ತಾರೆ ಎಂದು ಚರ್ಚೆಯಾಗುತ್ತಿದೆ. 'ಕಾಂತಾರ ಚಾಪ್ಟರ್ 1'ಗೆ ನಾಯಕಿ ಯಾರಾಗಬಹುದು? ತಿಳಿಯಲು ಮುಂದೆ ಓದಿ..
'ಕಾಂತಾರ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಆರಂಭದಲ್ಲಿ ಕನ್ನಡದಲ್ಲಷ್ಟೇ ಬಿಡುಗಡೆಯಾಗಿದ್ದ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಆ ಬಳಿಕ ಉಳಿದ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸಾಫೀಸ್‌ನಲ್ಲಿ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು.
'ಕಾಂತಾರ' ಮೆಗಾ ಸಕ್ಸಸ್ ಆಗುತ್ತಿದ್ದಂತೆ 'ಕಾಂತಾರ' ಪ್ರೀಕ್ವೆಲ್‌ಗೆ ಬಗ್ಗೆ ಹೊಂಬಾಳೆ ಫಿಲ್ಮ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ನಾಯಕಿಯರನ್ನು ಲೆಕ್ಕಾಚಾರ ಹಾಕಿ ಆಯ್ಕೆ ಮಾಡುವುದಕ್ಕೆ ನಿರ್ಧರಿಸಿದೆ ಅನ್ನೋದು ಆಪ್ತ ಮೂಲಗಳಿಂದ ಕೇಳಿ ಬರುತ್ತಿರುವ ಮಾಹಿತಿ.

'ಕಾಂತಾರ ಚಾಪ್ಟರ್ 1'ಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಾಲ್ಕು ಮಂದಿ ನಾಯಕಿಯರನ್ನು ಶಾರ್ಟ್ ಲಿಸ್ಟ್ ಮಾಡಿದೆಯಂತೆ. ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿಗೌಡ, ರುಕ್ಮಿಣಿ ವಸಂತ್ ಈ ನಾಲ್ವರ್ ನಾಯಕಿಯರ ಪೈಕಿ ಒಬ್ಬರನ್ನು ಆಯ್ಕೆ ಮಾಡುವುದಾಗಿ ನಿರ್ಧರಿಸಿದೆ ಅನ್ನೋ ಆಪ್ತ ಮೂಲಗಳಿಂದ ಹೊರಬಿದ್ದಿರೋ ಮಾಹಿತಿ. ಈ ನಾಲ್ವರಲ್ಲಿ ಯಾರು ಆಯ್ಕೆ ಆಗಬಹುದು ಅನ್ನೋದು ಸದ್ಯಕ್ಕೆ ಕುತೂಹಲ.
ಬಾಲಿವುಡ್ ನಟಿ ಆಲಿಯಾ ಭಟ್ ಈಗಾಗಲೇ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. RRR ಸಿನಿಮಾ ಮೂಲಕ ಸದ್ದು ಮಾಡಿರೋ ನಟಿ 'ಕಾಂತಾರ'ದಲ್ಲಿ ನಟಿಸಿದರೆ, ಚಿತ್ರರಂಗಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬ್ಯುಸಿನೆಸ್ ಮಾಡುವುದಕ್ಕೆ ಅನುಕೂಲ ಆಗಲಿದೆ. ಹಾಗೇ ಮೊದಲ ಬಾರಿಗೆ ಕನ್ನಡಕ್ಕೆ ಕರೆದುಕೊಂಡ ಬಂದ ಹೆಗ್ಗಳಿಕೆ ಹೊಂಬಾಳೆ ಫಿಲ್ಮ್ಸ್ ಪಾಲಾಗಲಿದೆ. ಹೀಗಾಗಿ ಆಲಿಯಾ ಭಟ್ ಕಡೆಗೆ ಹೆಚ್ಚು ಗಮನ ಕೊಡಬಹುದು.
ರಿಷಬ್ ಶೆಟ್ಟಿಯ ಫಸ್ಟ್ ಲುಕ್ ನೋಡಿದರೆ, ಸಾಯಿ ಪಲ್ಲವಿ ಪರ್ಫೆಕ್ಟ್ ಆಯ್ಕೆ ಅನಿಸುತ್ತಿದೆ. ಆದರೆ, ಸಾಯಿ ಪಲ್ಲವಿ ಕೂಡ 'ಕಾಂತಾರ'ದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಡಬಹುದು. ಇನ್ನು ಸಪ್ತಮಿ ಗೌಡ ಈಗಾಗಲೇ ಜನಪ್ರಿಯರಾಗಿದ್ದಾರೆ. ಹಾಗಾಗಿ ಸಪ್ತಮಿ ಗೌಡ ಆಯ್ಕೆ ಆದರೂ ಆಗಬಹುದು. ಆದರೆ, ಚಿತ್ರತಂಡ ಇತ್ತೀಚೆಗೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಗಮನ ಸೆಳೆದಿರೋ ರುಕ್ಮಿಣಿ ವಸಂತ್ ಮೇಲೆ ಹೆಚ್ಚು ಒಲವು ಹೊಂದಿದೆ ಎಂದು ವರದಿಗಳಾಗಿವೆ. ಹೀಗಾಗಿ ಈ ನಾಲ್ವರ ಆಯ್ಕೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಲೆಕ್ಕಾಚಾರ ನಿಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಾಲ್ವರಲ್ಲಿ ಯಾರು ನಾಯಕಿಯರು ಅನ್ನೋದು ಹೊರಬೀಳಬಹುದು.


Click it and Unblock the Notifications











