»   » ಶಿವಣ್ಣನ ಚಿತ್ರದ ಐಟಂ ಸಾಂಗಿನಲ್ಲಿ ಯಾರೀ ಕಿರಿಕ್ ಬೆಡಗಿ?

ಶಿವಣ್ಣನ ಚಿತ್ರದ ಐಟಂ ಸಾಂಗಿನಲ್ಲಿ ಯಾರೀ ಕಿರಿಕ್ ಬೆಡಗಿ?

Posted By:
Subscribe to Filmibeat Kannada
Sakshi Pradhan to perform item song in Kannada movie Lakshmi
ಶಿವರಾಜ್ ಕುಮಾರ್, ಪ್ರಿಯಾಮಣಿ ಪ್ರಮುಖ ಭೂಮಿಕೆಯಲ್ಲಿರುವ ' ಲಕ್ಷ್ಮಿ' ಚಿತ್ರಕ್ಕೆ ನಿರ್ದೇಶಕ ರಾಘವಲೋಕಿ ಐಟಂ ಹಾಡು ಹಾಕುವ ಯೋಚನೆ ಹಾಕಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಜ್ಯೂ.ರಾಖಿ ಸಾವಂತ್ ಎಂದೇ ಬಿರುದು ಪಡೆದಿರುವ ಸಾಕ್ಷಿ ಪ್ರಧಾನ್ ಎನ್ನುವ ಬೆಡಗಿಯನ್ನು ಕನ್ನಡಕ್ಕೆ ಕರೆ ತರುತ್ತಿದ್ದಾರೆ.

ಮೊದಲು ತುಪ್ಪ ಬೇಕಾ.. ತುಪ್ಪಾ.. ಸುಂದರಿ ರಾಗಿಣಿಯನ್ನು ಪಡ್ಡೆಗಳ ಮನಸ್ಸು ತಣಿಸಲು ಚಿತ್ರದ ಐಟಂ ಸಾಂಗಿಗೆ ಕುಣಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದರು. ಆದರೆ ಯಾಕೋ ಏನೋ ರಾಗಿಣಿ ಕೈಕೊಟ್ಟ ಮೇಲೆ ಬೇರೆ ದಾರಿಯಿಲ್ಲದೆ ಮುಂಬೈ ವಿಮಾನ ಹತ್ತಿ ಸಾಕ್ಷಿ ಪ್ರಧಾನ್ ಬಳಿ ಚರ್ಚಿಸಿ ಡೇಟ್ಸ್ ಪಕ್ಕಾ ಮಾಡಿಕೊಂಡು ಬಂದಿದ್ದಾರಂತೆ.

ಸ್ಯಾಂಡಲ್ ವುಡ್ ಗೆ ಪ್ರಧಾನ್ ಸಾಕ್ಷಿ ಹೊಸ ಮುಖವಾದರೂ ಬಾಲಿವುಡ್ ಜಗತ್ತಿಗೆ ಈಕೆ ಹೊಸಬಳೇನೂ ಅಲ್ಲ. ಬಿಗ್ ಬಾಸ್ ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕಿರಿಕ್ ಮಾಡಿಕೊಂಡಿದ್ದರು ಎನ್ನುವ ಸುದ್ದಿಯಿದೆ. ಇದಾದ ನಂತರ ಎಂಟಿವಿ ಆಯೋಜಿಸಿದ್ದ Splitsvilla 2 ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತಳಾಗಿದ್ದಳು.

ಸದಾ ಒಂದಲ್ಲೊಂದು ವಿವಾದದಲ್ಲಿರುವ ಈಕೆ ಹಿಂದೊಮ್ಮೆ ಗರ್ಭಿಣಿಯಾಗಿದ್ದಳು ಎನ್ನುವ ಸುದ್ದಿ ಹರಡಿತ್ತು. ಆಮೇಲೆ ಅದೆಲ್ಲಾ ಸುಳ್ಳು ಎಂದು ಸಬೂಬು ಕೊಟ್ಟಿದ್ದೂ ಆಯಿತು. ಹೇಮಂತ್ ದಾಸ್ ಗುಪ್ತಾ ನಿರ್ದೇಶನದ 'ಬಾಸ್ಟರ್ಡ್' ಎನ್ನುವ ಚಿತ್ರದಲ್ಲಿ ಈಕೆ ನಟಿಸಿದ್ದಳು. ಈಕೆಯ ಬಾತ್ ರೂಂ ದೃಶ್ಯಗಳು ಅಂತರ್ಜಾಲದಲ್ಲಿ ಲೀಕ್ ಆಗಿ ಆದಷ್ಟು ಸುದ್ದಿಯಾಗಿದ್ದವು.

ಸುಮಾರು ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿರುವ ಲಕ್ಷ್ಮಿ ಚಿತ್ರದ ಧ್ವನಿ ಸುರುಳಿ ಇತ್ತೀಚಿಗೆ ಬಿಡುಗಡೆಯಾಗಿದೆ. ಡಿಸೆಂಬರ್ ಕೊನೆವಾರದಲ್ಲಿ ಚಿತ್ರ ತೆರೆಯ ಮೇಲೆ ಬರುವ ಸಾಧ್ಯತೆಯಿದೆ. ಸಾಕ್ಷಿ ಪ್ರಧಾನಳ ಮಾದಕ ಗೀತೆ ಮತ್ತು ಮೈಮಾಟ ನೋಡಲು ಅಲ್ಲಿಯವರೆಗೆ ಕಾಯದೆ ಬೇರೆ ವಿಧಿಯಿಲ್ಲ.

ಲಕ್ಷ್ಮಿ ಚಿತ್ರದ ಫೋಟೋ ಗ್ಯಾಲರಿ

English summary
Bollywood actress Sakshi Pradhan to perform an item song in Kannada movie Lakshmi. Shivaraj Kumar, Priyamani in the lead role and Raghava Loki is directing the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada